ಆಮೆ ಮಾರಾಟಗಾರನ ಬಂಧನ
ಚಾಮರಾಜನಗರ

ಆಮೆ ಮಾರಾಟಗಾರನ ಬಂಧನ

March 14, 2019

ಚಾಮರಾಜನಗರ: ಜೀವಂತ ಆಮೆಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯ ಸಿದ್ದಮಲ್ಲಪ್ಪ ಉರುಫ್ ಕೂಸಪ್ಪ (33) ಬಂಧಿತ. ಖಚಿತ ಮಾಹಿತಿ ಮೇರೆಗೆ ತಮ್ಮಡಹಳ್ಳಿ-ಲಕ್ಕೂರು ಮಾರ್ಗ ಮಧ್ಯ ಇರುವ ಸಿದ್ದಮಲ್ಲಪ್ಪ ಅವರ ಮನೆಗೆ ತೆರಳಿದ ಅರಣ್ಯ ಸಂಚಾರಿ ದಳ ಸಿಬ್ಬಂದಿ ಪರಿಶೀಲಿಸಿದರು.

ಈ ವೇಳೆ ಮನೆಯ ಒಂದು ಚಿಕ್ಕತೊಟ್ಟಿಯಲ್ಲಿ ಎರಡು ಜೀವಂತ ಆಮೆಗಳು ಕಂಡು ಬಂದಿವೆ. ಈ ಬಗ್ಗೆ ವಿಚಾರಿಸಿದಾಗ ಹಣ ಸಂಪಾದಿಸುವ ಉದ್ದೇಶದಿಂದ ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಕೃತ್ಯ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಅಪರಾಧವಾಗಿದ್ದರಿಂದ ಆರೋಪಿ ಮತ್ತು ಜೀವಂತವಾಗಿದ್ದ ಎರಡು ಆಮೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯ ಅಧಿಕಾರಿಗಳು, ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »