ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನೇ ಹತ್ಯೆಗೈದ ಪತಿ
ಚಾಮರಾಜನಗರ

ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನೇ ಹತ್ಯೆಗೈದ ಪತಿ

ಹನೂರು: ಮದ್ಯಪಾನಕ್ಕಾಗಿ ಹಣ ನೀಡದ ಹಿನ್ನೆಲೆ ವ್ಯಸನಿಯೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ಇಂದು ತಾಲೂಕಿನ ಹುತ್ತೂರು ಗ್ರಾಮದಲ್ಲಿ ಇಂದು ಬೆಳಕಿಗೆ ಬಂದಿದೆ.

ಗ್ರಾಮದ ಅರಸಮ್ಮ ಹತ್ಯೆಗೀಡಾದ ಮಹಿಳೆಯಾಗಿದ್ದು, ಹತ್ಯೆ ಆರೋಪಿ ನಾಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂದಿನಂತೆ ಮಂಗಳವಾರ ಆರೋಪಿ ನಾಗ ಮದ್ಯಪಾನಕ್ಕಾಗಿ ಪತ್ನಿ ಅರಸಮ್ಮನ ಬಳಿ ದುಡ್ಡು ಕೇಳಿದ್ದಾನೆ ಎನ್ನಲಾಗಿದೆ. ಹಣ ಕೊಡಲು ನಿರಾಕರಿಸಿದ್ದರಿಂದ ಕುಪಿತನಾದ ನಾಗ ಪತ್ನಿ ಕಪಾಳಕ್ಕೆ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಅರಸಮ್ಮ ಮೃತಪಟ್ಟಿದ್ದಾರೆ. ಇದರಿಂದ ಗಾಬರಿಯಾದ ನಾಗ ಮೃತದೇಹವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿಬಿಸಾಡಿ ಬಂದಿದ್ದಾನೆ. ಬುಧವಾರ ಬೆಳಿಗ್ಗೆ ಶವವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕ ಬಂದ ಸಿಪಿಐ ಮೋಹಿತ್ ಸಹದೇವ್, ಮುಖ್ಯಪೇದೆ ಹೂವಯ್ಯ ಪರಿಶೀಲಿಸಿದರು. ಮೃತಳÀ ಸಹೋದರ ಶಿವಮಾದನಾಯ್ಕ ದೂರಿನ ಮೇರೆÀಗೆ ಆರೋಪಿ ನಾಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

March 14, 2019

Leave a Reply

Your email address will not be published. Required fields are marked *