ಮೈಸೂರು

ಮೈಸೂರು ವಿವಿಯಿಂದ ಕ್ರೀಡೆಗೆ ಹೆಚ್ಚಿನ ಒತ್ತಾಸೆ

March 14, 2019

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯ ಪಠ್ಯ ವಿಷಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಯನ್ನು ಸೇರ್ಪಡಿಸುವ ಕುರಿತು ಸದ್ಯದಲ್ಲೇ ಸಮಿತಿ ರಚಿಸಿ, ಚರ್ಚಿಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ ನೀಡಿದರು.

ಮೈಸೂರು ವಿವಿ ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ಮೈವಿವಿ ದೈಹಿಕ ಶಿಕ್ಷಣ ವಿಭಾಗ ಬುಧವಾರ ಆಯೋ ಜಿಸಿದ್ದ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಸ್ಪರ್ಧಿಗಳಲ್ಲಿ ಪದಕ ಗಳಿಸಿದ ಕ್ರೀಡಾಪಟುಗಳ ಸನ್ಮಾನ ಮತ್ತು ವಿಶ್ವ ವಿದ್ಯಾನಿಲಯ ಅಂತರ ಕಾಲೇಜು ಕ್ರೀಡಾ ಸ್ಪರ್ಧೆಗಳಲ್ಲಿ ತಂಡ ಪ್ರಶಸ್ತಿ ಗಳಿಸಿದ ಕಾಲೇಜುಗಳಿಗೆ ಹಾಗೂ ಸ್ಪರ್ಧೆ ಗಳಲ್ಲಿ ನೂತನ ದಾಖಲೆ ನಿರ್ಮಿಸಿದ ಕ್ರೀಡಾಪಟು ಗಳಿಗೆ ನಗದು ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡೆ ಎಂಬುದು ಕೇವಲ ಸ್ಪರ್ಧೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುತ್ತಿದ್ದು, ಪಠ್ಯದ ಜತೆಗೆ ಕ್ರೀಡೆಯೂ ಅತ್ಯವಶ್ಯ. ಹಾಗಾಗಿ ಮೈವಿವಿ ಪಠ್ಯ ವಿಷಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಯನ್ನು ಸೇರ್ಪಡಿಸಬೇಕು. ಆ ಮೂಲಕ ಎಲ್ಲಾ ವಿದ್ಯಾರ್ಥಿ ಗಳು ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಂಘದ ಮನವಿಗೆ ಕುಲಪತಿಗಳು ಪ್ರತಿಕ್ರಿಯಿಸಿ, ಪಠ್ಯದ ಜತೆಗೆ ದೈಹಿಕ ಶಿಕ್ಷಣವೂ ಅವಶ್ಯವಾಗಿದ್ದು, ಈ ಕುರಿತು ಸಮಿತಿ ರಚಿಸಿ, ಚರ್ಚಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟು ವಟಿಕೆ ಕ್ರೀಡೆಯೂ ಮುಖ್ಯ. ಅದು ಒಂದು ತಪಸ್ಸು. ಕ್ರೀಡೆ ನಮ್ಮ ಗ್ರಹಣ ಶಕ್ತಿಯನ್ನು ಒಂದೆಡೆ ಕೇಂದ್ರೀಕರಿ ಸುತ್ತದೆ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳು ನನ್ನ ಬಳಿ ಬಂದು ನಾನು ಕ್ರೀಡೆಗೆ ಹೋಗಬೇಕು. ಇದೇ ವೇಳೆ ಪರೀಕ್ಷೆಯೂ ಇದೆ ಎಂದರು. ಕೂಡಲೇ ಸಂಬಂಧ ಪಟ್ಟವರಿಗೆ ಕರೆ ಮಾಡಿದಾಗ, ಬೇರೊಂದು ದಿನ ಪರೀಕ್ಷೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಆದರೆ, ನಾವು ವ್ಯಾಸಂಗ ಮಾಡುವಾಗ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಕ್ರೀಡೆ, ಪರೀಕ್ಷೆ ಎರಡರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ, ಇಂದು ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳಿವೆ. ಇದರ ಸದುಪ ಯೋಗ ಪಡೆದುಕೊಂಡು ಸಾಧನೆಗೈಯ್ಯಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಯಾವುದೇ ಕ್ರೀಡೆಯಲ್ಲಿ ಸ್ಪರ್ಧಿಸುವಾಗ ಏಕಾಗ್ರತೆ, ಪರಿಶ್ರಮದಿಂದ ಸ್ಪರ್ಧಿಸಬೇಕು. ಇಂದು ವಿದ್ಯಾರ್ಥಿ ಗಳು ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದು ಬಹುಮಾನ ಗಳಿಸಿರುವುದು ಸಂತಸ ತಂದಿದೆ. ಮುಂದಿನ ವರ್ಷ ಹೆಚ್ಚು-ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ, ಇನ್ನೂ ಹೆಚ್ಚು ಬಹುಮಾನ ಪಡೆದುಕೊಳ್ಳಬೇಕು. ಅದಕ್ಕಾಗಿ ಮೈವಿವಿ ಸದಾ ನಿಮ್ಮೊಂದಿಗೆ ಇರಲಿದೆ. ಯಾವಾಗ ಬೇಕಾದರೂ ನನ್ನನ್ನು ಭೇಟಿ ಮಾಡಬಹುದು ಎಂದರು. ಮೈವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಮೈವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇ ಶಕ ಪ್ರೊ.ಕೃಷ್ಣಯ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಅಂತರ ವಿವಿ ಹೆಪ್ಟಾಥ್ಲನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಎಂ.ಆರ್.ಧನುಷ್ ಅವರಿಗೆ 30 ಸಾವಿರ ನಗದು ಹಾಗೂ ಟ್ರೋಫಿ ನೀಡಿ ಪುರಸ್ಕರಿಸಲಾಯಿತು. ಹಾಗೆಯೇ ಅಖಿಲ ಭಾರತ ಅಂತರ ವಿವಿ ಯೋಗ ಸ್ಪರ್ಧೆ (ವೈಯಕ್ತಿಕ)ಯಲ್ಲಿ ದ್ವಿತೀಯ ಬಹುಮಾನ ಪಡೆದ ಡಿ.ಆರ್.ದಿವ್ಯ ಅವರಿಗೆ 25 ಸಾವಿರ ರೂ,. ಪುರುಷರ ಮತ್ತು ಮಹಿಳಾ ವಿಭಾಗದ ಯೋಗ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿ ಪಡೆದ ಪ್ರತಿ ವಿದ್ಯಾರ್ಥಿಗೆ ತಲಾ 25 ಸಾವಿರ ರೂ,. ಕ್ರಿಕೆಟ್‍ನಲ್ಲಿ ಜಯಗಳಿಸಿದ ಪ್ರತಿ ಆಟ ಗಾರರಿಗೆ ತಲಾ 25 ಸಾವಿರ ರೂ,. ಕುಸ್ತಿಯಲ್ಲಿ ಕಂಚಿನ ಪಡೆದ ಎಸ್.ರಾಕೇಶ್ ಅವರಿಗೆ 20 ಸಾವಿರ, ಮಹಿಳೆ ಯರ ವಿಭಾಗದ ಹ್ಯಾಂಡ್‍ಬಾಲ್‍ನಲ್ಲಿ ಕಂಚಿನ ಪದಕ ಪಡೆದ ಪ್ರತಿ ಸ್ಪರ್ಧಿಗಳಿಗೆ ತಲಾ 25 ಸಾವಿರ ರೂ., ಮಹಿಳೆಯರ ಖೋ-ಖೋ ಪಂದ್ಯಾವಳಿಯ ಆಟ ಗಾರರಿಗೆ ತಲಾ 6 ಸಾವಿರ ರೂ,. ಪುರುಷ/ಮಹಿ ಳೆಯ ಅಥ್ಲೆಟಿಕ್ಸ್‍ನಲ್ಲಿ ನೂತನ ದಾಖಲೆ ನಿರ್ಮಿಸಿದ 8 ಮಂದಿ ಸ್ಪರ್ಧಿಗಳಿಗೆ ತಲಾ 7,500 ರೂ., ಇಬ್ಬರು ಬೆಸ್ಟ್ ಅಥ್ಲಿಟ್ಸ್‍ಗಳಿಗೆ ತಲಾ 7,500 ರೂ., ವಿವಿ ಮಟ್ಟದ ಸ್ಪರ್ಧೇಯಲ್ಲಿ ಪುರುಷರ ವಿಭಾಗದಲ್ಲಿ ಗೇಮ್ಸ್ ಚಾಂಪಿಯನ್‍ಷಿಪ್ ಪಡೆದ ಮಂಡ್ಯದ ಪಿಇಎಸ್ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ಟೆರೇಷಿ ಯನ್ ಕಾಲೇಜು ತಂಡಕ್ಕೆ ತಲಾ 25 ಸಾವಿರ ರೂ., ಪುರುಷರು/ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಪಡೆದ ಬಿ.ಸೋಮಾನಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕ್ರೀಡಾ ಮಂಡಳಿ ತಂಡಕ್ಕೆ ತಲಾ 20 ಸಾವಿರ ಹಾಗೂ 25 ಸಾವಿರ ರೂ., ಪುರುಷ/ಮಹಿಳೆಯರ ವಿಭಾಗದ ಕ್ರಾಸ್ಕಂಟ್ರಿ ಓಟದ ಚಾಂಪಿಯನ್ ಶಿಪ್ ಪಡೆದ ಮಹಾರಾಜ ಕಾಲೇಜು ಮತ್ತು ತಿ.ನರಸೀಪುರ ಪ್ರಥಮದರ್ಜೆ ಕಾಲೇಜು ತಂಡಕ್ಕೆ ಕ್ರಮವಾಗಿ ತಲಾ 15 ಸಾವಿರ ರೂ. ಹಾಗೂ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಮೈಸೂರು ವಿವಿ ಪ್ರಶಸ್ತಿ ಪಡೆದ ಬಿ.ಸೋಮಾನಿ ಪ್ರಥಮದರ್ಜೆ ಕಾಲೇ ಜಿನ ಪುನೀತ್ ಕುಮಾರ್ ಅವರಿಗೆ 7,500 ರೂ. ನಗದು ಹಾಗೂ ಟ್ರೋಫಿ ನೀಡಿ ಪುರಸ್ಕರಿಸಲಾಯಿತು.

Translate »