ಡಾ. ಅಂಬೇಡ್ಕರ್ ದೃಢ ಸಂಕಲ್ಪದೊಂದಿಗೆ  ಯುವ ಸಮುದಾಯ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು
ಮೈಸೂರು

ಡಾ. ಅಂಬೇಡ್ಕರ್ ದೃಢ ಸಂಕಲ್ಪದೊಂದಿಗೆ ಯುವ ಸಮುದಾಯ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು

March 14, 2019

ಮೈಸೂರು: ಜ್ಞಾನದ ಮೂಲಕ ಸಾಮಾ ಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿರಂತರ ಅಧ್ಯಯನಶೀಲರಾಗಿದ್ದರು. ಇಂತಹ ದೃಢ ಸಂಕಲ್ಪದ ಮೂಲಕ ನಮ್ಮ ಯುವ ಸಮುದಾಯ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಮೈಸೂರು ವಿವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಹೇಳಿದರು.

ಮೈಸೂರು ವಿವಿ ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಕಾಲೇಜಿನ ಶತ ಮಾನೋತ್ಸವ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರಲ್ಲಿ ತಾವು ಸಾಧಿಸಬೇಕಾದ ಗುರಿಯ ಬಗ್ಗೆ ಬದ್ಧತೆ ಇದ್ದಿತು. ಅದಕ್ಕಾಗಿ ಏಕಾಗ್ರತೆಯಿಂದ ನಿರಂ ತರ ಅಧ್ಯಯನದಲ್ಲಿ ತೊಡಗಿದ್ದರು. 65 ವರ್ಷಗಳ ಅವರ ಜೀವಿತಾವಧಿಯಲ್ಲಿ 35 ವರ್ಷಗಳನ್ನು ಸಾರ್ವಜನಿಕ ಜೀವನದಲ್ಲಿ ಕಳೆದಿದ್ದಾರೆ. ಈ ಅವಧಿಯಲ್ಲಿ ಒಂದೂ ಕಪ್ಪು ಚುಕ್ಕೆಯೂ ಇಲ್ಲದೆ, ಶುದ್ಧ ಚಾರಿತ್ರ್ಯದ ಮೂಲಕ ಆದರ್ಶ ವ್ಯಕ್ತಿತ್ವದಿಂದ ಸಮಾಜಕ್ಕಾಗಿ ದುಡಿದಿದ್ದಾರೆ. ಶೋಷಿತರ, ಮಹಿಳೆಯರು, ಕಾರ್ಮಿಕರ, ಶ್ರಮ ಜೀವಿಗಳ ಹಾಗೂ ಎಲ್ಲಾ ನೊಂದವರ ಪಕ್ಷಪಾತಿಯಾಗಿ ಅವರ ಏಳಿಗೆಗೆ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕೊಳ್ಳೇಗಾಲದ ಜೀತವನ ಬುದ್ಧ ವಿಹಾರದ ಶ್ರೀ ಮನೋ ರಖ್ಖಿತ ಭಂತೇಜಿ ಮಾತನಾಡಿ, ಸಮಾಜದಲ್ಲಿಂದು ಎಲ್ಲಾ ಕ್ಷೇತ್ರಗಳಲ್ಲೂ ಮ್ಯಾನೇಜ್‍ಮೆಂಟ್ ಪದ ಕೇಳಿಸತೊಡಗಿದೆ. ಇದರ ಭರದಲ್ಲಿ ನಮ್ಮ ಆಂತರಿಕ ಆಡಳಿತದ ಮ್ಯಾನೇಜ್ ಮೆಂಟ್ ಅನ್ನೇ ಮರೆಯುತ್ತಿದ್ದೇವೆ. ಹೀಗಾಗಿ ಧ್ಯಾನದ ಮೂಲಕ ನಮ್ಮ ಆಂತರಿಕ ಆಡಳಿತವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ. ಧ್ಯಾನ ಎಂದರೆ ಸೂಜಿಯ ಮೊನೆ ಮೇಲೆ ಸಾಸಿವೆ ಕಾಳು ಕೂರಿಸಿದ್ದಂತೆ ಎಂದು ವಿಶ್ಲೇಷಿಸಿದರು.

ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರ ತೀಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಅವರ ನೇತೃತ್ವ ದಲ್ಲಿ ನಡೆದ ಎರಡು ಹೋರಾಟಗಳು ಮಹತ್ವದ್ದಾಗಿವೆ. ಮಹಾರಾಷ್ಟ್ರದಲ್ಲಿ ನಡೆದ ಚೌಡರ್ ಕೆರೆ ಚಳವಳಿಯು ಭಾರತ ದಲ್ಲಿ ದಲಿತರಿಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾ ಗಿದೆ ಎಂಬುದನ್ನು ದಾಖಲೆ ಸಹಿತ ಅಂದಿನ ಬ್ರಿಟಿಷ್ ಆಡಳಿತಕ್ಕೆ ಮನದಟ್ಟು ಮಾಡಿಕೊಡುತ್ತದೆ. ಇದರ ಜೊತೆಗೆ ಕಾಳರಾಮ್ ದೇವಾಲಯ ಪ್ರವೇಶ ಮತ್ತೊಂದು ಮಹತ್ವದ ಹೋರಾಟ. ಅವರು ಯಾವುದೇ ಹೋರಾಟದಲ್ಲಿ ಹಿಂಸಾತ್ಮಕ ಮಾರ್ಗ ತುಳಿಯಲಿಲ್ಲ ಎಂದು ನುಡಿದರು.

ಕಾರ್ಯಕ್ರಮದ ಅಂಗವಾಗಿ `ಸಮ ಸಮಾಜದ ನಿರ್ಮಾಣ ದಲ್ಲಿ ಅಂಬೇಡ್ಕರ್ ಕೊಡುಗೆ’ ಕುರಿತಂತೆ ಕಾಲೇಜಿನ ವಿದ್ಯಾರ್ಥಿ ಗಳಿಗೆ ನಡೆಸಲಾಗಿದ್ದ ಪ್ರಬಂಧ ಸ್ಪರ್ಧೆಯ ನಗದು ಬಹು ಮಾನಗಳನ್ನು ವಿತರಿಸಲಾಯಿತು. ಬಿ.ಕಾಂ.ನ ಎಂ.ಮೋಹನ್ ಪ್ರಥಮ (ಸಾವಿರ ರೂ.), ಬಿ.ಎ. (ಹೆಚ್‍ಕೆಎಸ್) ವಿಭಾಗದ ನಾಗರಾಜು ದ್ವಿತೀಯ (700 ರೂ.), ಬಿ.ಕಾಂ.ನ ಆರ್.ಸಚಿನ್ ರಾಜ್ ತೃತೀಯ (500 ರೂ.) ಬಹುಮಾನ ಪಡೆದುಕೊಂಡರು.

ಜೊತೆಗೆ 2017-18ನೇ ಸಾಲಿನ ಅಂತಿಮ ವರ್ಷದ ಬಿಎಯಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಹೆಚ್.ಇ.ಅಭಿಷೇಕ್ ಹಾಗೂ ರಾಜ್ಯಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಜಿ.ಜೆ.ಮಂಜುನಾಥ್ ಅವರಿಗೆ ತಲಾ ಸಾವಿರ ರೂ. ನಗದು ಬಹುಮಾನವನ್ನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಬಿ.ಎನ್. ಯಶೋದಾ ಅವರಿಂದ ಕೊಡ ಮಾಡಲಾಯಿತು. ಅಲ್ಲದೆ, ಸಂವಿಧಾನದ ಮೂಲ ಪ್ರತಿಯ ಪೀಠಿಕೆಯ ಫೋಟೋ ಕಾಫಿ ಯನ್ನು ಡಾ.ಬಿ.ಎನ್.ಯಶೋದಾ ಅವರು ಕಾಲೇಜಿಗೆ ಅರ್ಪಿಸಿದರು. ಗಾಯಕರಾದ ಡಾ.ಆರ್.ನಿಂಗರಾಜು, ಡಾ.ಮಧುಸೂದನ್ ಅಂಬೇಡ್ಕರ್ ಗೀತೆಗಳನ್ನು ಸಾದರಪಡಿ ಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತಾ, ಆಡಳಿತಾಧಿಕಾರಿ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಡಾ.ಟಿ.ಕೆ.ಕೆಂಪೇ ಗೌಡ ಮತ್ತಿತರರು ಹಾಜರಿದ್ದರು.

Translate »