ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ
ಮೈಸೂರು

ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ

March 14, 2019

ಮೈಸೂರು: ಬಿಸಿಲಿಗೆ ಒಣಗಿ ನಿಂತಿದ್ದ ಪೊದೆಗೆ ತಗುಲಿದ ಬೆಂಕಿ ಯನ್ನು ಕೆಲವೇ ಕ್ಷಣಗಳಲ್ಲಿ ನಂದಿಸಿದ ಕಾರಣ ಭಾರೀ ಅವಘಡ ಸಂಭವಿಸುವುದು ತಪ್ಪಿದೆ. ನಗರದ ಬೋಗಾದಿ ರಸ್ತೆ, ಗಂಗೋತ್ರಿ ಬಡಾ ವಣೆಯ ವಾಗ್ದೇವಿನಗರದಲ್ಲಿರುವ ಶ್ರೀಮತಿ ಪುಟ್ಟೀರಮ್ಮ ಕಿವುಡ ಹೆಣ್ಣು ಮಕ್ಕಳ ವಸತಿ ಶಾಲೆ ಹಿಂಭಾಗ ಪೊದೆ ಬೆಳೆದಿತ್ತು. ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಕಿ ಹತ್ತಿಕೊಂಡಿತ್ತು. ವಿಷಯ ತಿಳಿದ ತಕ್ಷಣ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ. ವಸತಿ ಶಾಲೆಯಲ್ಲಿ ನೂರಾರು ವಿಶೇಷ ಚೇತನ ಹೆಣ್ಣು ಮಕ್ಕಳಿದ್ದು, ಸಮೀಪದಲ್ಲಿ ಶಾಲೆ ಯಷ್ಟೇ ಅಲ್ಲದೆ, ಸುತ್ತಮುತ್ತ ದೊಡ್ಡ ದೊಡ್ಡ ಕಟ್ಟಡ ಗಳು ಇವೆ. ಬೆಂಕಿ ಹೆಚ್ಚು ವ್ಯಾಪಿಸಿದ್ದರೆ ಭಾರಿ ಅನಾಹುತ ಸಂಭವಿಸುತ್ತಿದ್ದು. ಪೊದೆಯ ಪಕ್ಕ ದಲ್ಲೇ ನಿಂತಿದ್ದ ಕಾರಿಗೂ ಒಂದಿಷ್ಟು ಬೆಂಕಿ ತಗು ಲಿದೆ. ಏನಾದರೂ ಪೂರ್ಣ ಪ್ರಮಾಣ ದಲ್ಲಿ ಕಾರಿಗೆ ಬೆಂಕಿ ತಗುಲಿದ್ದರೆ ದೊಡ್ಡಮಟ್ಟದಲ್ಲಿ ತೊಂದರೆ ಯಾಗುತ್ತಿತ್ತು ಎಂದು ಆತಂಕ ವ್ಯಕ್ತ ಪಡಿಸಿದರು.

ಪಾಲಿಕೆ ನಿರ್ಲಕ್ಷ್ಯ: ಪುಟ್ಟೀರಮ್ಮ ಕಿವುಡ ಹೆಣ್ಣು ಮಕ್ಕಳ ವಸತಿ ಶಾಲೆಯ ಹಿಂಭಾಗದ ರಸ್ತೆ ಬದಿಯಲ್ಲಿ ಆಳೆತ್ತರದ ಪೊದೆ ಯೊಂದಿಗೆ ಕಸದ ರಾಶಿಯು ಹೆಚ್ಚಾಗಿದೆ. ಪ್ರತಿನಿತ್ಯ ನೂರಾರು ಜನರು ತಿರುಗಾಡುವ ರಸ್ತೆ ಇದಾಗಿದ್ದು, ನಗರಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಪೊದೆ ಯನ್ನು ಹಾಗೂ ಕಸದ ರಾಶಿಯನ್ನು ತೆರವು ಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಶಯಾಸ್ಪದ ಕಾರು: ನಂಬರ್ ಪ್ಲೇಟ್ ಇಲ್ಲದ ಫೋರ್ಡ್ ಕಂಪನಿಯ ಕಾರು ಸುಮಾರು ಎರಡು ವರ್ಷದಿಂದಲೂ ಇಲ್ಲೇ ಇದೆ. ಎಂಬು ದನ್ನು ತಿಳಿದ ಸರಸ್ವತಿಪುರಂ ಅಗ್ನಿ ಶಾಮಕ ಅಧಿಕಾರಿ ನಾಗರಾಜ್ ಅರಸ್, ಕಾರನ್ನು ಪರಿ ಶೀಲಿಸಿದಾಗ ಶ್ರೀ ಟೂರ್ ಅಂಡ್ ಟ್ರಾವೆಲ್ಸ್ ಎಂಬ ವಿಸಿಟಿಂಗ್ ಕಾರ್ಡ್ ಸಿಕ್ಕಿದೆ. ಕಾರ್ಡ್‍ನಲ್ಲಿ ಗಣೇಶ್(7411788553), ಸಿದ್ದರಾಜು (9845133098), ಎಂ.ಜೆ.ಅನಿಲ್ ಕುಮಾರ್ (9986759969) ಎಂಬುವವರ ಹೆಸರಿದ್ದು, ಅವರ ನಂಬರ್‍ಗೆ ಕರೆಮಾಡಿದಾಗ ‘ಟೂರ್ ಅಂಡ್ ಟ್ರಾವಲ್‍ನ ಇದಾಗಿದ್ದು, ಈ ಕಾರು ಆತನದು, ನನ್ನದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಅನು ಮಾನಕ್ಕೆ ಎಡೆಮಾಡಿದೆ ಎಂದು ಅಗ್ನಿಶಾಮಕ ಅಧಿಕಾರಿ ನಾಗರಾಜ್ ಅರಸ್ ತಿಳಿಸಿದರು.

Translate »