ಶಾಸಕರ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದರು
ಚಾಮರಾಜನಗರ

ಶಾಸಕರ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದರು

March 19, 2019

ಧ್ರುವನಾರಾಯಣ್ ನಾಜೂಕಯ್ಯನ ಪಾತ್ರ ನಿಲ್ಲಿಸಲಿ: ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಕಿಡಿ
ಕೊಳ್ಳೇಗಾಲ: ಶಾಸಕರು ತಮ್ಮ ಅಧಿಕಾರಾವಧಿ ಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದ ಆರ್.ಧ್ರುವನಾರಾಯಣ್ ಗಿಲಿಟ್ ರಾಜಕಾರಣ ಬಿಟ್ಟು ನಾಜೂಕಯ್ಯನ ಪಾತ್ರಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಕಿಡಿಕಾರಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರಾಗಿ 10ವರ್ಷ ಎಂಬ ಸಾಧನೆ ಪುಸ್ತಕದಲ್ಲಿ ಧ್ರುವನಾರಾಯಣರ ನಾಜೂಕಯ್ಯನ ಪಾತ್ರ ಬಯಲಾ ಗಿದೆ. ಕೆಲವು ಶಾಸಕರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಸಂಸದ ಆರ್.ಧ್ರುವನಾರಾಯಣ್ ತನ್ನ ಸಾಧನೆ ಎಂದು ಪುಸ್ತಕ ದಲ್ಲಿ ಫೋಟೋ ಹಾಕಿಸಿಕೊಂಡಿದ್ದಾರೆ. ಇವರ ಈ ವರ್ತನೆಗೆ ಕೆಲ ಶಾಸಕರು ಖಂಡನೆ ವ್ಯಕ್ತಪಡಿಸಿ, ನನ್ನ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಆ ಶಾಸಕರ್ಯಾರು ಎಂಬುದನ್ನು ಈಗ ಹೇಳಲಾಗದು ಎಂದರು.

ರಾಜ್ಯ ಸರ್ಕಾರ ಮತ್ತು ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾನು ಮಾಡಿಸಿದ್ದೇನೆ ಎಂದು ಪುಸ್ತಕ ಮುದ್ರಿಸಿ ಹಂಚುವ ಮೂಲಕ ಸಂಸದ ಧ್ರುವನಾರಾಯಣ್ ಜನರಿಗೆ ವಂಚಿಸುತ್ತಿದ್ದಾರೆ. ಈ ರೀತಿಯ ಮೋಸ, ವಂಚನೆಯನ್ನು ಅವರು ಬಿಡಬೇಕು, ಚಾಮರಾಜನಗರ ಲೋಕಸಭಾ ಚುನಾವಣೆ ವ್ಯಕ್ತಿಗಳ ವಿರುದ್ಧ ನಡೆಯುವ ಚುನಾವಣೆಯಲ್ಲ. ಬದಲಿಗೆ ಧರ್ಮ, ನ್ಯಾಯ, ಪ್ರಗತಿ, ಕ್ರಿಯಾಶೀಲತೆ ಹಾಗೂ ದೇಶಭದ್ರತೆ ಹಿತದೃಷ್ಟಿಯಿಂದ ನಡೆಯುವ ಹೋರಾಟ ಎಂದು ವ್ಯಾಖ್ಯಾನಿಸಿ ದರು. ಅಲ್ಲದೇ 10 ವರ್ಷಗಳ ಸಾಧನೆ ಎಂದು ಸಂಸದ ಧ್ರುವ ನಾರಾಯಣ್ ಮುದ್ರಿಸಿರುವ ಪುಸ್ತಕದಲ್ಲಿ ಅವರ ಸಾಧನೆ ಕಾಣುತ್ತಿಲ್ಲ. ಕೇವಲ ಶಾಸಕರ ಕೆಲಸಗಳೇ ಹೆಚ್ಚಾಗಿ ಕಂಡು ಬರುತ್ತಿವೆ ಎಂದರು.
ಅದೇ ಮಾದರಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರೂ ಸಹ ಪುಸ್ತಕ ಮಾಡಿಸಿದ್ದು ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿಸಿರುವುದನ್ನು ತೋರಿಸಿ ದ್ದಾರೆ ಎಂದರು. ನಗರಸಭೆ ನೂತನ ಕಟ್ಟಡ ಎಸ್‍ಎಫ್‍ಸಿ ಅನುದಾನದ್ದು, ಬಸ್ ನಿಲ್ದಾಣ ರಾಜ್ಯ ಸರ್ಕಾರದ್ದು, ಕೆರೆಗಳಿಗೆ ನೀರು ತುಂಬಿಸುವ ಹಾಗೂ ಕುಡಿಯುವ ನೀರಿನ ಯೋಜನೆ ಯಡಿಯೂರಪ್ಪ ನೇತೃತ್ವದ ಸರ್ಕಾರದ್ದು, ಮೊರಾರ್ಜಿ ದೇಸಾಯಿ ಶಾಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ಕೊಡುಗೆ. ಆದರ್ಶ ಶಾಲೆ ರಾಜ್ಯ ಸರ್ಕಾರದ್ದು, ಆದರೆ ನನ್ನ ಸಾಧನೆ ಎಂದು ಹಾಕಿಕೊಂಡಿದ್ದಾರೆ. ಕಳೆದ ಏಳೆಂಟು ವರ್ಷಗಳ ಹಿಂದೆ ರೈಲ್ವೇ ಯೋಜನೆ ತರುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಈ ಬಗ್ಗೆ ಚಕಾರವೇ ಎತ್ತಿಲ್ಲ ಎಂದರು.

ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ 25 ವರ್ಷಗಳ ಕಾಲ ಈ ಭಾಗದ ನಾಯಕರಾಗಿದ್ದರು. ಆದರೆ ಯಾವುದೇ ಪುಸ್ತಕ ಹೊರತರಲಿಲ್ಲ ಎಂದ ಅವರು ಸಂಸದ ಧ್ರುವನಾರಾಯಣ್ ಮೋಸ, ವಂಚನೆ ಮತ್ತು ಧ್ರುವೀಕರಣ ಮಾಡುವ ಕೆಲಸ ಬಿಡಬೇಕು. ನಾಜೂಕಯ್ಯನ ಪಾತ್ರ ನಿಲ್ಲಿಸಬೇಕಿದೆ ಎಂದು ಆಗ್ರಹಿಸಿದರು.

ಇದು ಶ್ರೀನಿವಾಸ್ ಪ್ರಸಾದ್ ಅವರ ಕೊನೆ ಚುನಾವಣೆ. ಬಿಜೆಪಿಯವರು ಪಾಂಡವರಿದ್ದಂತೆ. ಕಾಂಗ್ರೆಸ್ ಕೌರವರಿದ್ದಂತೆ. ಮಹಾಭಾರತದಲ್ಲಿ ಪಾಂಡವರಿಗೆ ಜಯವಾಗಲಿದೆ. ಕೌರವರಿಗೆ ಖಂಡಿತ ಜಯ ಸಿಗುವುದಿಲ್ಲ. ಈ ಚುನಾವಣೆಯಲ್ಲಿ ಕುರು ವಂಶದ ಅಂತ್ಯ. ಪಾಂಡವರ ವಿಜಯದ ಸಂಕೇತ ಎಂದು ವ್ಯಾಖ್ಯಾನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ್ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಿ ಪ್ರೇರಣೆ ಕೊಟ್ಟಂತಹ ಶ್ರೀನಿವಾಸ ಪ್ರಸಾದ್ ಅವರೇ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು ರಾಜ್ಯದ 28 ಕ್ಷೇತ್ರಗಳ ಪೈಕಿ ಚಾ.ನಗರ ಲೋಕಸಭಾ ಕ್ಷೇತ್ರ ಭಿನ್ನವಾಗ ಲಿದೆ ಎಂದರು. ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಸಿ.ಎಂ ಪರಮೇಶ್ವರಯ್ಯ, ಜಿ.ಪಿ.ಶಿವಕುಮಾರ್, ಕವಿತ, ಧರಣೇಶ್, ನಾಗರಾಜು, ಯಳಂದೂರು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕಂಠ, ಕೊಳ್ಳೇಗಾಲ ಮಂಡಲದ ಲಕ್ಷ್ಮಿಪತಿ, ಶಿವು, ವೀರೂಪಾಕ್ಷಕ್ಷ ಇನ್ನಿತರರಿದ್ದರು.

Translate »