ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್
ಹಾಸನ

ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್

March 19, 2019

ಬೇಲೂರು: ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹರಡ ದಂತೆ ಜಾಗ್ರತೆ ವಹಿಸ ಬೇಕು ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ವಿಜಯ್ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಂಗ ಸತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಮಂಗದ ಶವವನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಶವ ಪರೀಕ್ಷಾ ವರದಿಯಲ್ಲಿ ಮಂಗನ ಕಿಡ್ನಿಯಲ್ಲಿ ಕಾಯಿಲೆಯ ಸೋಂಕು ಇರುವುದು ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದ ಕೂಡಲೇ ಸಿದ್ದರಹಳ್ಳಿ ಹಾಗೂ ಅದರ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಸರ್ವೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಪ್ರಾಣಿ ಅಥವಾ ಮನುಷ್ಯನಿಗೆ ಮಂಗನ ಕಾಯಿಲೆ ಸೋಂಕು ತಗು ಲಿರುವ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿಸಿದರು.
ಮಂಗನ ಕಾಯಿಲೆಯ ಮುಖ್ಯ ಲಕ್ಷಣ: ಸತತ 10 ದಿನ ಬಿಡದೇ ಜ್ವರ ಬರುವುದು, ವಿಪರೀತ ಸೊಂಟ ನೋವು, ತಲೆ ನೋವು, ಕೈ-ಕಾಲು ನೋವು, ನಿಶಕ್ತಿ ಸೇರಿದಂತೆ ಕಣ್ಣು ಕೆಂಪಾಗುತ್ತದೆ. ಜ್ವರ ಬಂದ 2 ವಾರ ಮೂಗು, ಬಾಯಿ ಜ್ವರ ಹಾಗೂ ಗುದದ್ವಾರದಲ್ಲಿ ರಕ್ತಸ್ರಾವವಾಗುತ್ತದೆ. ರೋಗದ ತೀವ್ರತೆ ರೋಗಿಯ ಪ್ರತಿರೋಧ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು.

ವಾಸಸ್ಥಳದ ಸುತ್ತಮುತ್ತ ಗ್ರಾಮ, ಕಾಡಿನಲ್ಲಿ ಮಂಗ ಸತ್ತಿರು ವುದು ತಿಳಿದುಬಂದರೆ, ಸ್ಥಳೀಯ ಆರೋಗ್ಯಾಧಿಕಾರಿಗೆ ತಿಳಿಸುವುದು. ಮಂಗ ಮೃತಪಟ್ಟಿರುವ ಕಾಡಿನಲ್ಲಿ ಸಂಚರಿಸುವಾಗ ಮೈ ತುಂಬ ಬಟ್ಟೆ ಧರಿಸಿ, ಆರೋಗ್ಯ ಇಲಾಖೆಯಿಂದ ವಿತರಿಸುವ ಡಿಪಿಎಂ ತೈಲವನ್ನು ಕೈ ಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿಕೊಂಡು ಸ್ನಾನ ಮಾಡಬೇಕು. ಇನ್ನು ಉಣ್ಣೆಗಳಿಂದ ಈ ಕಾಯಿಲೆ ಹರಡುವ ಸಾಧ್ಯತೆ ಇರುವುದರಿಂದ ಯಾವಾಗ, ಎಲ್ಲಿ ಈ ಕಾಯಿಲೆ ಹರಡುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ.

ಈ ಕಾಯಿಲೆಗೆ ಮುಂಜಾಗ್ರತೆಗಾಗಿ ಲಸಿಕೆಯನ್ನು ಆರೋಗ್ಯ ವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2 ಲಸಿಕೆಯನ್ನು ಹಾಕಿಸಿ ಕೊಂಡರೆ, 30 ದಿನಗಳ ನಂತರ ರೋಗ ನಿರೋಧಕ ಶಕ್ತಿ ಬರುತ್ತದೆ. ಪ್ರತಿ ವರ್ಷ ಬೂಸ್ಟರ್ (ಬಲವರ್ಧಕ) ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ಕೃಷ್ಣಪ್ಪ ಇದ್ದರು.

Translate »