ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ
ಹಾಸನ

ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ

March 19, 2019

ಹೊಳೆನರಸೀಪುರ: ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ 2018-19ನೇ ಸಾಲಿನ ಎಸ್‍ಎಸ್ ಎಲ್‍ಸಿ ಪರೀಕ್ಷೆಗಳು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷೆಗೆ ಕೈಗೊಂಡಿರುವ ಪೂರ್ವಸಿದ್ಧತೆ ಮತ್ತು ಕ್ರಮಗಳ ಬಗ್ಗೆ ವಿವರಿಸಿದ ಅವರು, ತಾಲೂಕಿನ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ವರ್ಷ ಒಟ್ಟು 2,416 ವಿದ್ಯಾರ್ಥಿಗಳು ಪರೀಕ್ಷೆ ತೆಗದು ಕೊಂಡಿದ್ದು, ಇದರಲ್ಲಿ 1,229 ಗಂಡು ಮಕ್ಕಳು ಮತ್ತು 1,187 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆಂದು ಹೇಳಿದರು. ಈ ವರ್ಷ ಒಟ್ಟು 69 ಪುನ ರಾವರ್ತಿತ ಅಭ್ಯರ್ಥಿಗಳು ಪರಿಕ್ಷೆಯನ್ನು ತೆಗೆದುಕೊಂಡಿದ್ದಾರೆ. ಖಾಸಗಿಯಾಗಿ 86 ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದು ಕೊಂಡಿದ್ದು, ಇವರಿಗೆ ಹಾಸ ನದ ಜಿಲ್ಲಾ ಕೇಂದ್ರ ದಲ್ಲಿ ಪರೀಕ್ಷೆ ಬರೆ ಯಲು ಅವ ಕಾಶ ಮಾಡಿ ಕೊಡಲಾಗಿದೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ 6 ಜನ ವಿಶೇಷ ವೀಕ್ಷಕರನ್ನು ಬೇರೆ ಇಲಾಖೆ ಯಿಂದ ನೇಮಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೇಲ್ವಿಚಾರಣೆಗಾಗಿ ತಾಲೂಕು ಮಟ್ಟದಲ್ಲಿ ದಂಡಾಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾ ಧಿಕಾರಿಗಳನ್ನಾಗಿ 3 ತಂಡಗಳನ್ನು ರಚಿಸ ಲಾಗಿದೆ. ಎಲ್ಲಾ 9 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ದಿನ ಗಳಂದು ಕೇಂದ್ರಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಉಪ-ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಅನುಕೂಲಕ್ಕಾಗಿ ಆರೋಗ್ಯ ಸಹಾಯಕರನ್ನು ಔಷಧಿ ಕಿಟ್‍ನೊಂದಿಗೆ ನಿಯೋಜಿಸುವಂತೆ ತಾಲೂಕು ಆರೋಗ್ಯಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾ ರ್ಥಿಗಳು ಪರೀಕ್ಷಾ ದಿನಗಳಂದು ಸಕಾಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅನು ಕೂಲವಾಗುವಂತೆ ಪ್ರವೇಶ ಪತ್ರವನ್ನು ತೋರಿಸಿದ ಕಡೆ ಬಸ್ ನಿಲುಗಡೆ ಮಾಡು ವಂತೆ ಕೋರಿ ಕೆಎಸ್‍ಆರ್ ಟಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀ ಕ್ಷಕರು ಹಾಗೂ ಕಸ್ಟೋಡಿಯನ್‍ರವರಿಗೆ ಕರ್ನಾಟಕ ಪರೀಕ್ಷಾ ಮಂಡಳಿ ಯಿಂದ ದಿನಾಂಕ: 22-02-2019ರಂದು ಟೆಲಿ ಕಾನ್ಫರೆನ್ಸ್ ಮೂಲಕ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಪರೀಕ್ಷೆ ಯನ್ನು ಉತ್ತಮವಾಗಿ ನಡೆಸುವ ಸಂಬಂಧ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ಎಲ್ಲಾ ಪರೀಕ್ಷೆಯ ಕೊಠಡಿಯ ಮೇಲ್ವಿ ಚಾರಕರಿಗೂ ಸಹ ಪರೀಕ್ಷಾ ದಿನ ದಂದು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಹಾಗೂ ಗಮನಿಸಬೇಕಾದ ಮುಖ್ಯಾಂಶ ಗಳ ಬಗ್ಗೆ ತಿಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತದಳವನ್ನು ರಚಿಸಿದ್ದು ಪ್ರತಿದಿನ ಒಬ್ಬರು ಪರೀಕ್ಷಾ ಕೇಂದ್ರದಲ್ಲಿಯೇ ಹಾಜರಿರುವ ಮೂಲಕ ಸುಸೂತ್ರವಾಗಿ ನಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಆರ್.ಸಿ ಸೌಭಾಗ್ಯ ಮತ್ತಿತರರಿದ್ದರು.

Translate »