184.96 ಕೋಟಿ ರೂ. ತಂಬಾಕು ವಹಿವಾಟು
ಹಾಸನ

184.96 ಕೋಟಿ ರೂ. ತಂಬಾಕು ವಹಿವಾಟು

March 19, 2019

ರಾಮನಾಥಪುರ: ಕಳೆದ 132 ದಿನಗಳಲ್ಲಿ ನಡೆದ ತಂಬಾಕು ವಹಿವಾಟು 2 ಹರಾಜು ಮಾರುಕಟ್ಟೆಗಳಿಂದ 184 ಕೋಟಿ 96 ಲಕ್ಷ 59 ಸಾವಿರ 680 ರೂ. ವಹಿವಾಟು ನಡೆದಿದ್ದು, 131 ಲಕ್ಷ 86 ಸಾವಿರ, 853 ಕೆ.ಜಿ ತಂಬಾಕು ಬಂದಿದ್ದು, ಪ್ರತಿ ಕೆ.ಜಿ ತಂಬಾಕಿಗೆ ಸರಾಸರಿ 141.30 ರೂ. ಬೆಲೆ ಸಿಕ್ಕಿದೆ ಎಂದು ಹರಾಜು ಅಧೀಕ್ಷಕ ಎಸ್.ಎಸ್.ಪಾಟೀಲ್ ತಿಳಿಸಿದರು.

ಇಲ್ಲಿಯ ಸುಬ್ರಹ್ಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆ ನಂತರ ಮಾತನಾಡಿದ ಅವರು, ಪ್ಲಾಟ್ ಫಾರಂ 7 ರಲ್ಲಿ 70 ಲಕ್ಷ 26 ಸಾವಿರ 35 ಕೆ.ಜಿ ಮಾರಾಟವಾಗಿದ್ದು, 100 ಕೋಟಿ 78 ಲಕ್ಷ 39 ಸಾವಿರ 36 ರೂ. ಸರಾಸರಿ 141.39 ರೂ ನಡೆದಿದೆ. ಪ್ಲಾಟ್ ಫಾರಂ 63 ರಲ್ಲಿ 60 ಲಕ್ಷ 60 ಸಾವಿರ 817 ಕೆ.ಜಿ ಮಾರಾಟವಾಗಿದ್ದು, 84 ಕೋಟಿ 18 ಲಕ್ಷ 20 ಸಾವಿರ 314 ರೂ. ವಹಿವಾಟು ನಡೆದಿದ್ದು, ಪ್ರತಿ ಕೆ.ಜಿ ತಂಬಾಕಿಗೆ ಸರಾಸರಿ 140.91 ರೂ. ನಡೆದಿದೆ ಎಂದು ತಿಳಿಸಿದರು.

ಇಂದು ನಡೆದ ಪಾಟ್ಲ್ ಫಾರಂ 7 ಹಾಗೂ 63ರ ಎರಡು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಕನಿಷ್ಠ 90 ರಿಂದ ಗರಿಷ್ಠ 165 ರೂ.ಗೆ ಪ್ರತಿ ಕೆ.ಜಿ ತಂಬಾಕಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆ ಪ್ರಾರಂಭದಿಂದ ಪ್ರತಿ ದಿನ ಪ್ಲಾಟ್ ಫಾರಂ 7 ರಲ್ಲಿ ಸುಮಾರು 900 ರಿಂದ 1000 ಬೇಲ್‍ಗಳು ಹಾಗೂ 63ರಲ್ಲಿ 800ರಿಂದ 900 ಬೇಲ್‍ಗಳು ಬರುತ್ತಿವೆ ಎಂದು ಹರಾಜು ಅಧೀಕ್ಷಕರಾದ ಎಸ್.ಎಸ್. ಪಾಟೀಲ್ ಹಾಗೂ ಅಬ್ದುಲ್ ತಿಳಿಸಿದರು.

Translate »