ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಚಾ.ನಗರದಲ್ಲಿ ಇಂದು ನಡೆದ ರೈತ ದಸರಾ ಕಾರ್ಯಕ್ರಮವು ಸಂಪೂರ್ಣವಾಗಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಮೂಲಕ ಎಲ್ಲರ ಗಮನ ಸೆಳೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರೈತ ದಸರಾ ಅಂಗವಾಗಿ ಅಲಂಕೃತಗೊಂಡ ಎತ್ತಿನಗಾಡಿ ಮೆರವಣಿಗೆಗೆ ಚಾಮರಾಜೇ ಶ್ವರ ದೇವಾಲಯ ಬಳಿ ಹಿಂದುಳಿದ ವರ್ಗ ಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಸ್ವತಃ ಉಸ್ತುವಾರಿ ಸಚಿವರೇ ಎತ್ತಿನ…
ತೆರಕಣಾಂಬಿ ತಾಪಂ ಕ್ಷೇತ್ರ; ಮೂವರು ನಾಮಪತ್ರ ಸಲ್ಲಿಕೆ
October 16, 2018ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರದ ಉಪಚುನಾವಣೆಗೆ ಮೊದಲನೇ ದಿನವಾದ ಅ.15 ರಂದು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತಾಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯರಾಗಿದ್ದ ಆರ್.ಮಹೇಶ್ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅ.16 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್, ಬಿಜೆಪಿ ಮಂಡಲಾ ಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪುರಸಭೆ ಸದಸ್ಯ…
ಇಸ್ರೋ ವಿಶ್ವದಲ್ಲೇ ಉನ್ನತ ಬಾಹ್ಯಾಕಾಶ ಸಂಸ್ಥೆ
October 16, 2018ಚಾಮರಾಜನಗರ: ಭಾರತದ ಇಸ್ರೋ ಸಂಸ್ಥೆಯು ಪ್ರಪಂಚದಲ್ಲಿ ಉನ್ನತ ವಾದ ಬಾಹ್ಯಕಾಶ ಸಂಶೋಧನ ಸಂಸ್ಥೆ ಯಾಗಿದೆ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಸಿ.ಡಿ. ಪ್ರಸಾದ್ ಹೇಳಿದರು. ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ರುವ ಕೆಡಿಪಿ ಸಭಾಂಗಣದಲ್ಲಿ ಸ್ಥಳೀಯ ವಿಜ್ಞಾನಾಸ್ತಕರಿಂದ ಪ್ರಾರಂಭವಾದ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಬಹುತೇಕ ವಿಜ್ಞಾನಿಗಳು ಗ್ರಾಮೀಣ ಪ್ರದೇಶದಿಂದಲೇ ಬೆಳಕಿಗೆ ಬಂದವರು. ಇವರುಗಳು ವಿಜ್ಞಾನ ವಿಷಯದಲ್ಲಿ ಅತ್ಯು ತ್ತಮ ಸಂಶೋಧನೆಗಳನ್ನು ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನ…
ಇಂದು ಕಾಲೇಜು ವಿದ್ಯಾರ್ಥಿಗಳ ಟೆನಿಕಾಯ್ಟ್ ಪಂದ್ಯಾವಳಿ ಉದ್ಘಾಟನೆ
October 16, 2018ಚಾಮರಾಜನಗರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರಾಂಶುಪಾಲರ, ಉಪನ್ಯಾಸಕರ, ಬೋಧಕೇತರ ಸಂಘಟನೆಗಳ ಆಶ್ರಯದಲ್ಲಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನಿಕಾಯ್ಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಅ.16 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜೆ ಎಸ್ ಎಸ್ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಾಜಿ ಸಚಿವ ಎನ್. ಮಹೇಶ್ ಉದ್ಘಾಟನೆ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ…
ನಗರಸಭೆ ಜೆಇ ಎಸಿಬಿ ಬಲೆಗೆ
October 16, 2018ಚಾಮರಾಜನಗರ: ಕಾಮಗಾರಿ ನಡೆಸಿದ ಬಿಲ್‍ಗೆ ಮಂಜೂರಾತಿ ನೀಡಲು 75 ಸಾವಿರ ರೂ. ಲಂಚ ಪಡೆಯುತ್ತಿದ್ದ ನಗರಸಭೆ ಕಿರಿಯ ಇಂಜಿನಿಯರ್ ಓರ್ವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರ ನಗರಸಭೆಯ ಕಿರಿಯ ಇಂಜಿನಿ ಯರ್ ಬಸವರಾಜು ಸಿಕ್ಕಿಬಿದ್ದವರಾಗಿದ್ದು, ಇವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಶಿವಕುಮಾರ್ ಎಂಬ ಖಾಸಗಿ ವ್ಯಕ್ತಿಯ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಈರ್ವರನ್ನೂ ಪೆÇಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ. ನಗರಸಭೆ ಜೂನಿಯರ್ ಇಂಜಿನಿಯರ್ ಆಗಿರುವ ಬಸವರಾಜು ಅವರು ನಗರದ ಶಿವಕುಮಾರ್…
ವರ್ಷಧಾರೆ ನಡುವೆ ಹರಿದ ಸಂಗೀತ ರಸಧಾರೆ ಸಂಗೀತ ಕಟ್ಟಿ ಗಾಯನಕ್ಕೆ ತಲೆದೂಗಿದ ಜನತೆ
October 15, 2018ಚಾಮರಾಜನಗರ: ಚಾಮರಾಜನಗರದಲ್ಲಿ ಇಂದು ವರುಣನ ವರ್ಷ ಧಾರೆಯ ನಡುವೆಯೇ ಸಂಗೀತದ ರಸಧಾರೆಯೇ ಹರಿಯಿತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳ ಭಾವ ಲಹರಿ ನಗರದಲ್ಲೆಡೆ ಅನುರಣಿಸಿತು. ಚಾಮರಾಜನಗರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಇಲ್ಲಿನ ಶ್ರೀ ಚಾಮರಾಜೇಶ್ವರ ದೇವ ಸ್ಥಾನದ ಮುಂಭಾಗ ಹಾಕಲಾಗಿದ್ದ ಅದ್ಧೂರಿ ಬೃಹತ್ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಎಲ್ಲರಿಗೂ ನಮಸ್ಕಾರ ಎನ್ನುತ್ತಾ ರಾತ್ರಿ…
ಶೌಚಾಲಯ ಉದ್ಘಾಟಿಸಿದ ಶಾಸಕ ನಿರಂಜನ್
October 15, 2018ಗುಂಡ್ಲುಪೇಟೆ: ಇಲ್ಲಿನ ಪುರಸಭೆಯ ವತಿಯಿಂದ ಪಟ್ಟಣದ ಮದ್ದಾನೇಶ್ವರ ಶಾಲೆ, ಸೆಸ್ಕ್ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ಕಚೇರಿಯ ಆವರಣದಲ್ಲಿ ನಿರ್ಮಿಸಿರುವ ನೂತನ ಶೌಚಾಲಯಗಳನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿ, ಪುರಸಭೆಯು ಪಟ್ಟಣದ ಸ್ವಚ್ಛತೆ ಕಾಪಾಡಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕೆ ಶೌಚಾಲಯಗಳನ್ನು ನಿರ್ಮಿಸಿದೆ. ಜನರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಕುಮಾರ್, ಎನ್.ರಮೇಶ್,…
ಇಂದು ಚಾಮರಾಜನಗರದಲ್ಲಿ ರೈತ ದಸರಾ ಕಾರ್ಯಕ್ರಮ
October 15, 2018ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ 2018ರ ಅಂಗವಾಗಿ ಅಕ್ಟೋಬರ್ 15ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಒಂದೇ ರೈತ ಕುಟುಂಬದ ಸದಸ್ಯರಿಂದ ತಾಳವಾದ್ಯ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ರೈತಗೀತೆ, 10.15 ರಿಂದ ಉದ್ಘಾಟನೆ ನೆರವೇರಲಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಂತ್ರಿಕ ಗೋಷ್ಠಿಗಳಿವೆ. ವಿಶೇಷ ಆಕರ್ಷಣೆಯಾಗಿ ಕಾಡು ಕೃಷಿ ಆವಿಷ್ಕಾರಕ ಡಾ. ಖಾದರ್…
ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
October 14, 2018ಚಾಮರಾಜನಗರ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ 4 ದಿನಗಳ ಕಾಲ ಆಯೋಜಿಸಿರುವ ದಸರಾ ಕಾರ್ಯಕ್ರಮಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು. ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವ ರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆ ಯಲ್ಲಿ ಮೊದಲ ದಿನ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೇಕ್ಷ ಕರಿಗೆ ಸಂಗೀತದ ರಸದೌತಣ ಉಣಬಡಿಸಿದರು. ರಾತ್ರಿ 8.05ಕ್ಕೆ ವೇದಿಕೆಯ ಮೇಲೆ ಕಪ್ಪು ಟೀ ಶರ್ಟ್, ಬಿಳಿ ಕೋಟ್ ಹಾಗೂ ಬಿಳಿ ಪ್ಯಾಂಟ್ ಧರಿಸಿ ಭಜರಂಗಿ ಚಿತ್ರದ…
ಇಂದಿನಿಂದ ಚಾಮರಾಜನಗರದಲ್ಲಿ ದಸರಾ ಸಂಭ್ರಮ
October 13, 2018ಚಾಮರಾಜನಗರ: ಜಿಲ್ಲಾಡ ಳಿತ ಹಾಗೂ ಮೈಸೂರಿನ ದಸರಾ ಮಹೋ ತ್ಸವ ಸಮಿತಿಯ ಆಶ್ರಯದಲ್ಲಿ ಚಾಮರಾಜನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ದಸರಾ ಮಹೋತ್ಸವ 2018ಕ್ಕೆ ನಾಳೆ (ಅ.13) ಚಾಲನೆ ದೊರೆಯಲಿದೆ. ಅ.13ರಿಂದ 16ರವರೆಗೆ ನಡೆಯಲಿರುವ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಬೆ.10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಲನೆ ದೊರೆಯಲಿದೆ. ನಂತರ ಚಲನಚಿತ್ರೋತ್ಸವ, ಸಂಜೆ 4 ಗಂಟೆಗೆ ಕಲಾ ತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿ ಗಳ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಚಾಮರಾಜೇಶ್ವರ…