ಶೌಚಾಲಯ ಉದ್ಘಾಟಿಸಿದ ಶಾಸಕ ನಿರಂಜನ್
ಚಾಮರಾಜನಗರ

ಶೌಚಾಲಯ ಉದ್ಘಾಟಿಸಿದ ಶಾಸಕ ನಿರಂಜನ್

October 15, 2018

ಗುಂಡ್ಲುಪೇಟೆ:  ಇಲ್ಲಿನ ಪುರಸಭೆಯ ವತಿಯಿಂದ ಪಟ್ಟಣದ ಮದ್ದಾನೇಶ್ವರ ಶಾಲೆ, ಸೆಸ್ಕ್ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ಕಚೇರಿಯ ಆವರಣದಲ್ಲಿ ನಿರ್ಮಿಸಿರುವ ನೂತನ ಶೌಚಾಲಯಗಳನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿ, ಪುರಸಭೆಯು ಪಟ್ಟಣದ ಸ್ವಚ್ಛತೆ ಕಾಪಾಡಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕೆ ಶೌಚಾಲಯಗಳನ್ನು ನಿರ್ಮಿಸಿದೆ. ಜನರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಕುಮಾರ್, ಎನ್.ರಮೇಶ್, ಸುರೇಶ್, ರಂಗಸ್ವಾಮಿ, ಮಲ್ಲರಾಜು, ಮುಖ್ಯಾಧಿಕಾರಿ ಎ.ರಮೇಶ್, ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಮುಖಂಡ ರಾದ ಎಸ್.ಸಿ.ಮಂಜುನಾಥ್, ಕಣ್ಣನ್, ಶಿವಪ್ರಕಾಶ್ ಸೇರಿದಂತೆ ಹಲವರು ಇದ್ದರು.

Translate »