ಕೆರೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ
ಚಾಮರಾಜನಗರ

ಕೆರೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ

August 14, 2018

ಗುಂಡ್ಲುಪೇಟೆ: ‘ತಾಲೂಕಿನ ಎಲ್ಲಾ ಕೆರೆಗಳಿಗೂ ನದಿಮೂಲ ದಿಂದ ನೀರು ತುಂಬಿಸುವ ಯೋಜನೆ ಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಹೇಳಿದರು.

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಮತ್ತು ಪದಾಧಿಕಾರಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ಚರಂಡಿ, ಅಗತ್ಯವಿರುವಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಆದ್ಯತೆ ನೀಡಲಾ ಗಿದೆ. ಕ್ಷೇತ್ರದ ಜನತೆ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಜಯಶಾಲಿಯಾಗಿಸಿದ್ದಾರೆ. ಅವರ ಸೇವೆ ಮಾಡುವುದರೊಂದಿಗೆ ಅವರ ಋಣ ತೀರಿಸುತ್ತೇನೆ ಎಂದರು.

ಎಲ್ಲಾ ಕೆರೆಗಳಿಗೂ ನದಿ ಮೂಲದ ನೀರು ತುಂಬಿಸಲು ಕ್ರಮಕೈಗೊಳ್ಳಲಾಗು ವುದು. ಮುಂದುವರೆದ ಯೋಜನೆಯಲ್ಲಿ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಪೈಪ್‍ಲೈನ್ ನಿರ್ಮಾಣ ಮಾಡಲಾಗಿದ್ದು, ಟ್ರಾನ್ಸ್‍ಫಾರ್ಮರ್ ಅಳವಡಿಸಿದೆ. ಪಂಪ್ ಹೌಸ್ ನಿರ್ಮಾಣ ಅಂತಿಮ ಹಂತ ದಲ್ಲಿದ್ದು, ಕಾಮಗಾರಿ ಮುಗಿದ ಕೂಡಲೇ ಮೋಟಾರುಗಳನ್ನು ಅಳವಡಿಸಿ ನೀರೆತ್ತ ಲಾಗುವುದು. ಆಗಸ್ಟ್ ಮಾಸಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕೂಡಲೇ ವಡ್ಡಗೆರೆ ಹಾಗೂ ಸಮೀಪದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಮಳೆಗಾಲದಲ್ಲಿ ಹೆಚ್ಚಾಗಿ ಹರಿಯುವ ನೀರನ್ನು ಬಳಕೆಮಾಡಿಕೊಂಡು ಎಲ್ಲಾ ಕೆರೆ ಗಳ ಭರ್ತಿಗೂ ತುಂಬಿಸಲು ಬಹಳ ಹಿಂದೆಯೇ ಯೋಜನೆ ರೂಪಿಸಿದ್ದಾರೆ. ತಾಲೂಕಿನಲ್ಲಿ ಕಾಡುತ್ತಿರುವ ಅಂತರ್ಜಲ ಸಮಸ್ಯೆ ಬಗೆಹರಿಸಬಹುದಾಗಿತ್ತು. ಇತ್ತೀಚೆಗೆ ಯೋಜನೆ ರೂಪಿಸಿದ್ದರೂ ಇದರ ಅನುಷ್ಠಾನಕ್ಕೆ ಕಾಲಾವಕಾಶಬೇಕಾಗಿದೆ ಎಂದರು. ಮಂಡಲ ಅಧ್ಯಕ್ಷ ಎನ್.ಮಲ್ಲೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ತಾ.ಪಂ. ಮಾಜಿ ಸದಸ್ಯ ಮಹದೇವಪ್ರಸಾದ್, ಗ್ರಾಪಂ ಸದಸ್ಯ ಕಲ್ಲಳ್ಳಿ ಮಹೇಶ್, ಮುಖಂಡ ರಾದ ಶ್ರೀಕಂಠಪ್ಪ, ನಾಗರಾಜಪ್ಪ, ರಾಜಶೇಖ ರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »