ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ನಿರಂಜನಕುಮಾರ್
ಚಾಮರಾಜನಗರ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ನಿರಂಜನಕುಮಾರ್

September 1, 2018

ಗುಂಡ್ಲುಪೇಟೆ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನಲ್ಲಿ ಅನೇಕ ಕಲ್ಪನೆಗಳಿದ್ದು, ನೂತನ ಸರ್ಕಾರ ಅಧಿ ಕಾರಕ್ಕೆ ಬಂದ ನಂತರ ಮಳೆಯಿಂದ ಹಾನಿ ಗೊಳಗಾದ ಕೊಡಗು ಜಿಲ್ಲೆಯ ಪರಿಸ್ಥಿತಿ ಸುಧಾರಿಸಲು ಗಮನಹರಿಸಿದ್ದರಿಂದ ಇನ್ನೂ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಅದು ಬಂದ ನಂತರ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24ರಂದು ಕಾಂಗ್ರೆಸ್ ಮುಖಂ ಡರು ಶಾಸಕರು ಆಯ್ಕೆಯಾಗಿ 100 ದಿನ ಕಳೆದರೂ ಯಾವುದೇ ಅನುದಾನ ತರದೆ ಕಾಲಹರಣ ಮಾಡುತ್ತಿದ್ದಾರೆ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ವರ್ಗಾವಣೆ ದಂಧೆಯಲ್ಲಿ ಹಾಗೂ ಸನ್ಮಾನ ಸಮಾ ರಂಭದಲ್ಲಿ ಮೈಮರೆತಿದ್ದಾರೆಂದು ಎಂದು ಮಾಡಿದ್ದ ಆರೋಪಗಳಿಗೆ ನಿರಂಜನ್ ತಿರುಗೇಟು ನೀಡಿದರು.

ಕಳೆದ 30 ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತಿದ್ದ ಮಾಜಿ ಸಚಿವರ ಕುಟುಂಬದವರು ಜನ ತೆಯ ತೀರ್ಪಿನಿಂದ ಕಂಗಾಲಾಗಿದ್ದು, ಮತದಾರರನ್ನು ದಾರಿತಪ್ಪಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ 30 ವರ್ಷಗಳಿಂದ ಮಾದರಿ ಕ್ಷೇತ್ರ ವನ್ನಾಗಿಸಿದ್ದರೆ ಗ್ರಾಮೀಣ ರಸ್ತೆಗಳ ದುಸ್ಥಿ ತಿಗೆ ಕಾರಣವೇನು. ನಾನು ಶಾಸಕನಾಗಿ ಕೇವಲ 3 ತಿಂಗಳಾಗಿದ್ದರೂ ಪ್ರತಿ ದಿನವೂ ಕ್ಷೇತ್ರದಲ್ಲಿ ಸಂಚರಿಸಿ ಮೂಲ ಸೌಕರ್ಯ ವಂಚಿತ ಗ್ರಾಮಗಳಿಗೆ ಅಗತ್ಯ ಸವಲತ್ತು ಒದಗಿಸಲು ಮಾಹಿತಿ ಸಂಗ್ರಹಿಸಿದ್ದೇನೆ. ಅವರಾಗಲಿ ನಾನಾಗಲಿ ನಮ್ಮ ಸ್ವಂತ ಹಣ ದಿಂದ ಯಾವುದೇ ಅಭಿವೃದ್ಧಿ ಮಾಡು ತ್ತಿಲ್ಲ. ಸರ್ಕಾರದ ಅನುದಾನವನ್ನು ತಂದು ಶಿಷ್ಟಾಚಾರದಂತೆ ಕಾಮಗಾರಿಗಳಿಗೆ ಚಾಲನೆ ನೀಡಬೇಕಾಗಿದೆ ಎಂದರು.

ಆದರೆ ನಮ್ಮ ಅನುದಾನದ ಕಾಮ ಗಾರಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳು ತ್ತಿರುವುದು ಬಾಲಿಶವಾದದು. ಬಜೆಟ್ ಮಂಡನೆ ನಂತರ ಮಳೆ ಹಾನಿಗೊಳಗಾದ ಮಡಿಕೇರಿಯಲ್ಲಿನ ಜನತೆಗೆ ನೆರವು ನೀಡುವತ್ತ ಸರ್ಕಾರ ಗಮನಹರಿಸಿದ್ದ ರಿಂದ ಇನ್ನೂ ಶಾಸಕರಿಗೆ ಅನುದಾನ ನೀಡಿಲ್ಲ. ಅನುದಾನ ಬರುತ್ತಿದ್ದಂತೆಯೇ ನನ್ನ ಪರಿಕಲ್ಪನೆಯಲ್ಲಿರುವ ಕ್ಷೇತ್ರದ ಅಭಿವೃದ್ಧಿ ಪರ್ವ ಶುರುವಾಗಲಿದೆ. ವಿರೋಧಗಳು ಕಾದು ನೋಡಲಿ ಎಂದು ಸವಾಲು ಹಾಕಿದರು.

ಪಟ್ಟಣದಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡದೆಯೇ ತಾಯಿ ಮಕ್ಕಳ ಆಸ್ಪತ್ರೆ ಯನ್ನು ತರಾತುರಿಯಲ್ಲಿ ಪ್ರಾರಂಭಿಸಿದ್ದು, ಇಲ್ಲಿಗೆ ಸಮರ್ಪಕ ಸಿಬ್ಬಂದಿ ನೇಮಕ ಮಾಡುವಂತೆ ಮತ್ತು ಕ್ಷೇತ್ರದಲ್ಲಿನ ಕೆರೆಗಳಿಗೆ ನೀರು ತುಂಬಿಸಲು ತೀವ್ರ ಹದಗೆಟ್ಟ ರಸ್ತೆಗಳ ಅಭಿವೃದ್ದಿಗೆ ಅಗತ್ಯವಾದ ನೆರವು ನೀಡುವಂತೆ ಸಂಬಂಧಪಟ್ಟ ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಹಿಂದಿನ ಸಚಿವರು ಸರ್ಕಾರದಿಂದ ಅನುಮೋದನೆ ಪಡೆಯದೆಯೇ ಚಿಕ್ಕತುಪ್ಪೂರು ಸಮೀಪ ರಸ್ತೆ ಕಾಮಗಾರಿಗೆ ಮೂರು ಸಲ ಭೂಮಿಪೂಜೆ ನೆರವೇರಿಸಿದ್ದನ್ನು ಜನತೆ ಮರೆತಿಲ್ಲ ಎಂದು ಕುಟುಕಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ನದಿ ತೀರದಲ್ಲಿ ವಿದ್ಯುತ್ ಟವರ್ ನಿರ್ಮಿಸದೆ ತರಾತುರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದ ಪರಿ ಣಾಮ ಈ ಬಾರಿ ಹೆಚ್ಚಿನ ಮಳೆಯಾ ದರೂ ಹೆಚ್ಚುವರಿ ನೀರನ್ನು ಕೆರೆಗಳಿಗೆ ತುಂಬಿ ಸಲು ಸಾಧ್ಯವಾಗಲಿಲ್ಲ. ತಾಲೂಕಿನ ಉಳಿದ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಯೋಜನೆ ಸಿದ್ಧಪಡಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಬಡಾವಣೆಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲು ವಿಶೇಷ ಅನುದಾನ ಯೋಜನೆಯಲ್ಲಿ ಹೆಚ್ಚಿನ ಅನುದಾನವಿ ದ್ದರೂ ಸದ್ಬಳಕೆ ಮಾಡಿಕೊಂಡಿಲ್ಲ. ಈ ಬಾರಿ ಈ ಸಮುದಾಯಗಳ ಎಲ್ಲಾ ಬಡಾ ವಣೆಯ ರಸ್ತೆಗಳಿಗೂ ಕಾಂಕ್ರೀಟ್ ಹಾಕಿಸ ಲಾಗುವುದು ಎಂದರು.

ಮಂಡಲಾಧ್ಯಕ್ಷ ಎನ್.ಮಲ್ಲೇಶ್ ಮಾತ ನಾಡಿ, ಮಾಜಿ ಸಚಿವರ ಪುತ್ರ ಎಂಬ ಕಾರಣಕ್ಕೆ ಗಣೇಶ್ ಪ್ರಸಾದ್ ಮಾತನಾಡು ತ್ತಿದ್ದು, ಶತಮಾನದ ಇತಿಹಾಸ ಹೊಂದಿ ರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರು ಮೌನವಾಗಿದ್ದಾರೆ. ಯಾವುದೇ ಸಾಂವಿ ಧಾನಿಕ ಹುದ್ದೆ ಇಲ್ಲದವರ ಆರೋಪಗಳ ಬಗ್ಗೆ ಮತದಾರರು ತಲೆಕೆಡಿಸಿಕೊಳ್ಳು ವುದಿಲ್ಲ. ಈ ವಿಧಾನಸಭೆಯ ಅವಧಿ ಇನ್ನೂ ನಾಲ್ಕೂ ಮುಕ್ಕಾಲು ವರ್ಷವಿದ್ದು, ನಿಜ ವಾದ ಅಭಿವೃದ್ಧಿ ಎಂದರೆ ಏನೆಂಬುದನ್ನು ಮಾಡಿ ತೋರಿಸಲು ಅವಕಾಶಕೊಡ ಬೇಕು. ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಮಾನಕ್ಕೆ ಗೌರವ ಕೊಡಬೇಕು ಎಂದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತ ನಾಡಿ, ಪಟ್ಟಣದಲ್ಲಿ ಈವರೆಗೆ ನಡೆಸಿದ ಬಹು ತೇಕ ಕಾಮಗಾರಿಗಳನ್ನು ಪೂರ್ವಯೋಜಿತ ವಾಗಿ ಮಾಡದೆ ಜನತೆ ತೊಂದರೆ ಎದುರಿ ಸುತ್ತಿದ್ದಾರೆ. ಪಟ್ಟಣದ ಜೋಡಿ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಯುಜಿಡಿ ಸ್ಥಳಾಂತರಿಸದ ಪರಿಣಾಮ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸದ್ಯ ಪುರಸಭೆಯು 40 ಲಕ್ಷ ರೂಪಾಯಿಯನ್ನು ಒಳಚರಂಡಿ ಮಂಡಲಿಗೆ ನೀಡಿದ್ದು, ಯುಜಿಡಿ ಸ್ಥಳಾಂ ತರ ನಂತರ ರಸ್ತೆ ಕಾಮಗಾರಿ ನಡೆಯ ಲಿದೆ. ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾ ದರೆ ಬಿಜೆಪಿಯವರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಮುಖಂಡರಾದ ದೊಡ್ಡಣ್ಣ, ಮಹದೇವ ಪ್ರಸಾದ್, ಕಣ್ಣನ್, ಎಸ್.ಸಿ.ಮಂಜು ನಾಥ್, ವೀರಪ್ಪ, ಎಲ್.ಮಣಿಕಾಂತ್ ಇತರರು ಇದ್ದರು.

Translate »