ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪತ್ರಕರ್ತನ ಬಂಧನ
ಚಾಮರಾಜನಗರ

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪತ್ರಕರ್ತನ ಬಂಧನ

September 1, 2018

ಗುಂಡ್ಲುಪೇಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರಿಬ್ಬರ ಮೇಲೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಓರ್ವನನ್ನು ಬಂಧಿಸಲಾಗಿದೆ.

ಪಟ್ಟಣದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರಾದ ಮಹಾದೇವಪ್ರಸಾದ್ ಅಲಿಯಾಸ್ ಸತೀಶ್ ಮತ್ತು ವೀರೇಂದ್ರ ಎಂಬುವರ ಮೇಲೆ ಪೆÇಲೀಸರ ಕರ್ತ ವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಬಂಡೀಪುರ ಪೊಲೀಸ್ ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೆÇಲೀಸ್ ಕಾನ್ಸ್‍ಟೇಬಲ್ ಕೇಶವನಾಯಕ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೇಶವನಾಯಕ್ ನೀಡಿದ ದೂರಿನನ್ವಯ ಪಟ್ಟಣ ಠಾಣೆ ಪಿಎಸ್‍ಐ ಶಿವರುದ್ರ ಪ್ರಕರಣ ದಾಖಲಿಸಿ ಕೊಂಡಿದ್ದು, ವರದಿಗಾರ ಮಹಾದೇವ ಪ್ರಸಾದ್ ಅಲಿಯಾಸ್ ಸತೀಶನನ್ನು ಬಂಧಿಸಿದ್ದಾರೆ.

ವೀರೇಂದ್ರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

Translate »