ವರ್ಷಧಾರೆ ನಡುವೆ ಹರಿದ ಸಂಗೀತ ರಸಧಾರೆ ಸಂಗೀತ ಕಟ್ಟಿ ಗಾಯನಕ್ಕೆ ತಲೆದೂಗಿದ ಜನತೆ
ಚಾಮರಾಜನಗರ

ವರ್ಷಧಾರೆ ನಡುವೆ ಹರಿದ ಸಂಗೀತ ರಸಧಾರೆ ಸಂಗೀತ ಕಟ್ಟಿ ಗಾಯನಕ್ಕೆ ತಲೆದೂಗಿದ ಜನತೆ

October 15, 2018

ಚಾಮರಾಜನಗರ: ಚಾಮರಾಜನಗರದಲ್ಲಿ ಇಂದು ವರುಣನ ವರ್ಷ ಧಾರೆಯ ನಡುವೆಯೇ ಸಂಗೀತದ ರಸಧಾರೆಯೇ ಹರಿಯಿತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳ ಭಾವ ಲಹರಿ ನಗರದಲ್ಲೆಡೆ ಅನುರಣಿಸಿತು.

ಚಾಮರಾಜನಗರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಇಲ್ಲಿನ ಶ್ರೀ ಚಾಮರಾಜೇಶ್ವರ ದೇವ ಸ್ಥಾನದ ಮುಂಭಾಗ ಹಾಕಲಾಗಿದ್ದ ಅದ್ಧೂರಿ ಬೃಹತ್ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.

ಎಲ್ಲರಿಗೂ ನಮಸ್ಕಾರ ಎನ್ನುತ್ತಾ ರಾತ್ರಿ 9.20ರ ವೇಳೆಗೆ ವೇದಿಕೆಗೆ ಆಗಮಿಸಿದ ಸಂಗೀತ ಕಟ್ಟಿ ನಗರದ ಜನತೆಗೆ ತಮ್ಮನ್ನು ಕರೆಸಿಕೊಂಡಿದಕ್ಕೆ ಕೃತಜ್ಞತೆ ಸಲ್ಲಿಸಿದರು. 4 ವರ್ಷಗಳ ನಂತರ ನನ್ನನ್ನು ಚಾಮರಾಜನಗರಕ್ಕೆ ಕರೆಸಿಕೊಂಡಿದ್ದು ತುಂಬಾ ಸಂತಸವಾಗಿದೆ. ಒಂದು ವಿಶೇಷವೆಂದರೆ ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಮಳೆ ಬರುತ್ತದೆ. ಇಂದೂ ಸಹ ಮಳೆ ಆಗಮಿಸಿದ್ದು, ಮಳೆಯ ನಡುವೆಯೇ ನನಗಾಗಿ ಕಾದಿರುವ ನಿಮಗೆ ನಾನು ಋಣಿಯಾಗಿದ್ದೇನೆ ಎಂದು ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು.

ಈ ವರ್ಷಧಾರೆಯ ನಡುವೆ ಭಾವಗೀತೆ, ಜನಪದಗೀತೆ, ಭಕ್ತಿ ಗೀತೆಗಳೊಂದಿಗೆ ನಿಮ್ಮನ್ನು ಮನೋಲ್ಲಾಸಗೊಳಿಸುವೆ ಎಂದು ಗಾಯನ ಆರಂ ಭಿಸಿದರು. ಮೊದಲಿಗೆ ಶಾಂತಕಾರಂ ಭಕ್ತಿಗೀತೆ ಆರಂಭಿಸಿದ ಸಂಗೀತ ಕಟ್ಟಿ, ನಂತರ ಭಾಗ್ಯದ ಲಕ್ಷ್ಮೀ ಬಾರಮ್ಮ ಎಂದು ಎಲ್ಲರ ಮನಮನಗಳಿಗೆ ಮಹಾಲಕ್ಷ್ಮೀಯನ್ನು ಆಹ್ವಾನಿಸಿದರು.

ಸಂತ ಶಿಶುನಾಳ ಷರೀಫ್ ಅವರ ತತ್ವಪದಗಳು ಸೇರಿದಂತೆ ಖ್ಯಾತ ಸಾಹಿತಿಗಳ ಕವಿತೆಗಳನ್ನು ಭಾವ ತುಂಬಿ ಹಾಡಿದ ಸಂಗೀತ ಕಟ್ಟಿ ಅವರು, ನೆರೆದಿದ್ದ ಅಪಾರ ಜನಸ್ತೋಮವನ್ನು ಭಾವಲೋಕದಲ್ಲಿ ವಿಹರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡು ವೆಯೂ ಸಂಗೀತ ರಸಿಕರು ಸಂಗೀತ ಕಟ್ಟಿ ಅವರ ಭಾವತರಂಗಕ್ಕೆ ತಲೆತೂಗಿದರು. ವೇದಿಕೆ ಸೇರಿದಂತೆ ಜನರು ಕುಳಿತುಕೊಳ್ಳಲು ವಾಟರ್ ಪ್ರೂಫ್ ಮೇಲ್ಛಾವಣಿ ನಿರ್ಮಿಸಿದ್ದರಿಂದ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಲಿಲ್ಲ.

ಇದಕ್ಕೂ ಮುನ್ನ ಬೆಂಗಳೂರಿನ ಪ್ರಭಾತ್ ಕಲಾ ವಿದರು 1 ಗಂಟೆಗೂ ಹೆಚ್ಚು ಕಾಲ ನಡೆಸಿಕೊಟ್ಟ ನೃತ್ಯ ವೈಭವ ಕಲಾ ರಸಿಕರ ಗಮನ ಸೆಳೆದು, ಅದ್ಧೂರಿ ಚಪ್ಪಾಳೆ ಗಿಟ್ಟಿಸಿತು. ಕರುನಾಡ ವೈಭವ ಹೆಸರಿನಲ್ಲಿ ಕನ್ನಡ ನಾಡಿನ ಚರಿತ್ರೆಯನ್ನು ಪರಿಚಯಿಸಿದ ಈ ನೃತ್ಯ ಕಾರ್ಯಕ್ರಮ ಕಲಾವಿದರ ಅದ್ಭುತ ನಟನೆಯಲ್ಲಿ ಮೇಳೈಸಿ ಮೆಚ್ಚುಗೆ ಗಳಿಸಿ ದರು. ಅಲ್ಲದೆ, ಸಂಜೆ 4.30ಕ್ಕೆ ಆರಂಭವಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿಗೆ ರಾಮಸಮುದ್ರದ ರಾಜಪ್ಪ ತಂಡ ಜನಪದ ಸಂಗೀತ, ನಂತರ ಮಲೆಮಹಾದೇಶ್ವರ ಕಲಾತಂಡದ ಬೀಸು ಕಂಸಾಳೆ, ಯಳಂದೂರಿನ ಅರುಣ್ ಕುಮಾರ್ ಅವರ ಭಾವಗೀತೆ, ಚಾಮರಾಜನಗರ ಶಾರದ ನೃತ್ಯ ಶಾಲೆಯ ಭರತನಾಟ್ಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮ ಮೆಚ್ಚುಗೆ ಗಳಿಸಿತು.

ರಥದ ಬೀದಿಯಲ್ಲಿ ಕಂಗೊಳಿಸಿದ ರಂಗು ರಂಗೋಲಿ: ನಗರದ ಪ್ರಮುಖ ರಥದ ಬೀದಿಯು ಇಂದು ಬಣ್ಣಬಣ್ಣದ ರಂಗೋಲಿಗಳಿಂದ ವಿಶೇಷವಾಗಿ ಕಂಗೊಳಿಸಿತು.ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಿಂದ ರಥಧ ಬೀದಿ ಎಲ್ಲರನ್ನು ಆಕರ್ಷಿಸಿತು.

ಬೆಳಿಗ್ಗೆ ರಥದ ಬೀದಿಯಲ್ಲಿ ಆಯೋಜನೆ ಗೊಂಡಿದ್ದ ರಂಗೋಲಿ ಸ್ಪರ್ಧೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಪುಟ್ಟರಂಗಶೆಟ್ಟಿ ರಂಗೋಲಿ ಬಿಡಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಸ್ಪರ್ಧಿಗಳು ಉತ್ಸಾಹದಿಂದ ರಂಗೋಲಿ ಇಟ್ಟು ಬಣ್ಣಗಳಿಂದ ಅಲಂಕರಿಸಿ ಇಡೀ ಬೀದಿಯನ್ನೇ ಚಿತ್ತಾರಗೊಳಿಸಿ ಎಲ್ಲರ ಗಮನ ಸೆಳೆದರು. ವೈವಿಧ್ಯ ಮಯ ರಂಗೋಲಿಗಳನ್ನು ಬಿಡಿಸುತ್ತಿದ್ದನ್ನು ಅನೇಕರು ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಪುಷ್ಪಗಳಿಂದಲೂ ರಂಗೋಲಿಯನ್ನು ಇನ್ನಷ್ಟು ವಿನ್ಯಾಸಗೊಳಿಸಿದ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಹೆಚ್ಚು ಅನ್ನುವ ಹಾಗೆ ತಮ್ಮ ಕೈಚಳಕ ಪ್ರದರ್ಶಿಸಿದರು. ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ಪ್ರತ್ಯೇಕ ವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.

ತದನಂತರ ತೀರ್ಪುಗಾರರು ಸ್ಪರ್ಧಿಗಳು ಬಿಡಿಸಿದ್ದ ರಂಗುರಂಗಿನ ರಂಗೋಲಿಗಳನ್ನು ವೀಕ್ಷಿಸಿ ಅತ್ಯುತ್ತಮ ವಾಗಿದ್ದ ರಂಗೋಲಿ ಬಿಡಿಸಿದ ವಿಜೇತರನ್ನು ಆಯ್ಕೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಇತರೆ ಗಣ್ಯರು ಸಹ ಮಹಿಳೆಯರು, ಮಕ್ಕಳ ರಂಗೋಲಿ ಪ್ರದರ್ಶನವನ್ನು ವೀಕ್ಷಿಸಿ ಪ್ರಶಂಸಿಸಿದರು.

ವಿಜೇತರಿಗೆ ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಬರುವ ವರ್ಷದಲ್ಲಿ 9 ದಿನಗಳ ಕಾಲ ದಸರಾ ಮಹೋತ್ಸವ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುವುದು ಎಂದರು.

ಮಹಿಳೆಯರು ಮತ್ತು ಮಕ್ಕಳು ಸಹ ಉತ್ಸುಕತೆ ಯಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ. ರೈತ ದಸರಾ, ವಾಕಥಾನ್ ಕಾರ್ಯ ಕ್ರಮಗಳು ಸಹ ಈ ಬಾರಿಯ ದಸರಾ ಅಂಗವಾಗಿ ಏರ್ಪಡಿಸಲಾಗಿದೆ. ದಸರಾ ಪ್ರಯುಕ್ತ ವಿಭಿನ್ನ ವಾಗಿ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿ ದ್ದೇವೆ ಎಂದು ಸಚಿವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜಯಶೀಲ, ವಿಕಲಚೇತನರ ಕಲ್ಯಾಣ ಆಧಿಕಾರಿ ಮೂಲಿಮನಿ, ನಗರಸಭೆ ಆಯುಕ್ತ ರಾಜಣ್ಣ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅ.15ರ ಸಾಂಸ್ಕೃತಿಕ ಕಾರ್ಯ ಕ್ರಮಗಳ ವಿವರ ಇಂತಿದೆ. ಅ.15 ರಂದು ಸಂಜೆ 4.30 ರಿಂದ 5 ಗಂಟೆಯವರೆಗೆ ಹನೂರಿನ ಕೆಂಪಮಹ ದೇಶ್ವರ ಸೋಲಿಗರ ನೃತ್ಯ ತಂಡದಿಂದ ಪಿನಾಶಿ ನೃತ್ಯ, 5 ರಿಂದ 5.30 ರವರಗೆ ಗುಂಡ್ಲುಪೇಟೆಯ ನಾರಾ ಯಣ್ ಮತ್ತು ಪರಿವರ್ತನ ತಂಡದಿಂದ ತತ್ವಪದ ಹಾಗೂ ಜನಪದ ಸಂಗೀತ, 5.30 ರಿಂದ 5.45ರವರೆಗೆ ಕೊಳ್ಳೇಗಾಲದ ಎಂ.ಸಿ ಸಿಂಚನ ಅವರಿಂದ ನೃತ್ಯ, 5.45 ರಿಂದ 6.05 ರವರೆಗೆ ಗುಂಡ್ಲುಪೇಟೆಯ ಮೋಹನ್ ಕುಮಾರ್ ಮತ್ತು ತಂಡದಿಂದ ಜಾನಪದ ನೃತ್ಯ, 6.05 ರಿಂದ 6.30 ರವರೆಗೆ ಚಾಮ ರಾಜನಗರದ ಮಹೇಶ್ ಮತ್ತು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ. 6.30 ರಿಂದ 7.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕೃತಿಕ ವೈವಿಧ್ಯ ಮಯ ಕಾರ್ಯಕ್ರಮಗಳು ನಡೆಯಲಿದೆ. 7.30 ರಿಂದ 8 ಗಂಟೆ ವರೆಗೆ ಅಂಡಮಾನ್ ಮತ್ತು ನಿಕೋಬಾರ್ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದವರಿಂದ ನಿಕೋಬಾರಿ ನೃತ್ಯ ಇರಲಿದೆ. ರಾತ್ರಿ 8 ರಿಂದ 10.30ರವ ರೆಗೆ ಮೈಸೂರಿನ ನಟನ ಕಲಾವಿದರಿಂದ ಚೋರ ಚರಣದಾಸ ನಾಟಕ ಪ್ರದರ್ಶನವಿದೆ.

Translate »