ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ಚಾಮರಾಜನಗರ

ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

October 14, 2018

ಚಾಮರಾಜನಗರ:  ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ 4 ದಿನಗಳ ಕಾಲ ಆಯೋಜಿಸಿರುವ ದಸರಾ ಕಾರ್ಯಕ್ರಮಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವ ರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆ ಯಲ್ಲಿ ಮೊದಲ ದಿನ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೇಕ್ಷ ಕರಿಗೆ ಸಂಗೀತದ ರಸದೌತಣ ಉಣಬಡಿಸಿದರು.

ರಾತ್ರಿ 8.05ಕ್ಕೆ ವೇದಿಕೆಯ ಮೇಲೆ ಕಪ್ಪು ಟೀ ಶರ್ಟ್, ಬಿಳಿ ಕೋಟ್ ಹಾಗೂ ಬಿಳಿ ಪ್ಯಾಂಟ್ ಧರಿಸಿ ಭಜರಂಗಿ ಚಿತ್ರದ ‘ಜೈ ಜೈ ಭಗವಂತ…’ ಎನ್ನುತ್ತಾ ವೇದಿಕೆಗೆ ಕಾಲಿಟ್ಟ ಅರ್ಜುನ್‍ಜನ್ಯ ದನಿ ಮಾಧುರ್ಯವನ್ನು ಜತೆಗಾರರ ಮೋಹಕ ನೃತ್ಯ ಇಮ್ಮಡಿ ಗೊಳಿಸಿತ್ತು. ಅರ್ಜುನ್‍ಜನ್ಯ ಅವರ ಸಂಗೀತಕ್ಕೆ ಯುವ ಪ್ರೇಕ್ಷಕರು ಕುಣಿದಾಡಿದರು ಹೆಬ್ಬುಲಿ ಸಿನಿಮಾದ ‘ಹುಲಿ, ಹುಲಿ ಹೆಬ್ಬುಲಿ…’ ಹಾಡು ನೆರೆದಿದ್ದ ಪ್ರೇಕ್ಷಕರಲ್ಲಿ ಕಿಚ್ಚು ಹೊತ್ತಿಸಿತು. ‘ಚುಟು, ಚುಟು ಅಂತೈತಿ ಎನ್ನಾಗ ಚುಟು, ಚುಟು ಅಂತೈತಿ….’ ‘ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ…’ ಪ್ರೇಮ ಗೀತೆಗಳು ನಗರದ ಜನತೆಗೆ ಭರ್ತಿ ಮನರಂಜನೆ ನೀಡಿತು. ವಿಲನ್, ಅಯೋಗ್ಯ ಸೇರಿದಂತೆ ಇತ್ತೀಚೆಗೆ ತೆರೆ ಕಂಡ ಚಿತ್ರಗಳ ಗೀತೆಗಳು ಭರ್ಜರಿ ಚಪ್ಪಾಳೆ ಶಿಳ್ಳೆ ಗಿಟ್ಟಿಸಿ ಕೊಂಡಿತು.

ಒಟ್ಟಾರೆ ಶನಿವಾರ ರಾತ್ರಿ ಅರ್ಜುನ್‍ಜನ್ಯ ಹಾಗೂ ಅವರ ತಂಡದವರ ಗಾಯನ ರಸಧಾ ರೆಯೇ ಹರಿಯಿತು. ಇದೇ ವೇಳೆ ಸಂಜೀತ್ ಹೆಗಡೆ ಇತರರ ಹಾಡುಗಳು ಮೋಡಿ ಮಾಡಿದವು. ಇದಕ್ಕೂ ಮೊದಲು ನಡೆದ ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಜನರನ್ನು ರಂಜಿಸಿತು. ಚಾಮ ರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯ ಕ್ರಮವು ಪ್ರೇಕ್ಷಕರ ಮೈನವಿರೇಳಿಸಿತು.

ಕಾರ್ಯಕ್ರಮದ ಪ್ರಾರಂಭ ದಲ್ಲಿ ರಂಗಸ್ವಾಮಿ ತಂಡದಿಂದ ನಗಾರಿ, ಬಿ.ಸಿದ್ದನಗೌಡ ಅವರಿಂದ ಹಿಂದೂಸ್ಥಾನಿ ಸಂಗೀತ, ಪುಷ್ಪಮಾಲೆ ಕಲಾ ಸಂಘದಿಂದ ಸೋಲಿಗರ ಗೊರುಕನ ನೃತ್ಯದ ಮೂಲಕ ಕಲಾವಿದರು ನೆರೆದಿದ್ದ ಜನರನ್ನು ರಂಜಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಚಾಮರಾಜೇ ಶ್ವರ ದೇವಾಲಯ ಹಾಗೂ ಸರ್ಕಾರಿ ಕಾರ್ಯಾ ಲಯಗಳು, ನಗರದ ಜಿಲ್ಲಾಡಳಿತ ಭವನ, ಬಿ.ರಾಚಯ್ಯ ಜೋಡಿರಸ್ತೆ, ನಗರಸಭೆ ಕಟ್ಟಡ, ಉದ್ಯಾನಗಳು ಬಣ್ಣದ ವಿದ್ಯುತ್ ದೀಪಗಳಿಂದ ಮಿನುಗಿದವು.
ಮೈಸೂರು ಅರಸರ ಕೊಡುಗೆ ಸ್ಮರಿಸಿ: ದಸರಾ ಕಾರ್ಯಕ್ರಮ ಎಂದರೆ ಕೇವಲ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಮೀಸಲಾಗಿಲ್ಲ. ಈ ಮೂಲಕ ಮೈಸೂರು ಅರಸು ನಾಡಿಗೆ ನೀಡಿದ ಕೊಡುಗೆಯನ್ನು ತಿಳಿ ಸುವ ಉದ್ದೇಶ ಹೊಂದಲಾಗಿದ್ದು, ಅವರ ಕೊಡುಗೆ ಯನ್ನು ಸ್ಮರಿಸುವಂತಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಹೇಳಿದರು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಾ ಲಯ ಆವರಣದ ವೇದಿಕೆಯಲ್ಲಿ ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಸಮಿತಿ ಆಯೋಜಿಸಿರುವ 4 ದಿನಗಳ ದಸರಾ ಸಾಂಸ್ಕೃತಿ ಕಾರ್ಯಕ್ರಮದ ಉದ್ಘಾ ಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರು ಸಂಸ್ಥಾನದ ಅರಸರು ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದರಿಂದಲೇ ಈ ಭಾಗದಲ್ಲಿ ಕೃಷಿ, ಕೈಗಾರಿಕೆ, ವಿದ್ಯುತ್ ಉತ್ತಮವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ದಸರಾ ಕಾರ್ಯಕ್ರಮ ಆಯೋಜಿಸಲು ಸರ್ಕಾರ 1 ಕೋಟಿ ಅನುದಾನ ವನ್ನು ನೀಡಿದ್ದು, ಇದರಲ್ಲಿ 50ಲಕ್ಷ ಅನುದಾನ ಬಿಡು ಗಡೆಯಾಗಿದೆ. ಉಳಿದ ಅನುದಾನವನ್ನು ಶೀಘ್ರ ದಲ್ಲಿಯೇ ಬಿಡುಗಡೆಗೊಳಿಸಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ, ಶಾಸಕ ಸಿ.ಎಸ್. ನಿರಂಜನ್‍ಕುಮಾರ್ ಮಾತನಾಡಿ, ಜಿಲ್ಲೆಯ ಜನರಿಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾ ಧ್ಯಕ್ಷ ಜೆ.ಯೋಗೇಶ್, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಪಿ.ಎನ್.ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಸಿಇಓ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇತರೆ ಗಣ್ಯರು ಹಾಜರಿದ್ದರು.

ಗುಂಪು ಚದುರಿಸಲು ಹರಸಾಹಸ: ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ವೇದಿಕೆಯ ಅಕ್ಕ-ಪಕ್ಕದಲ್ಲಿದ್ದ ಯುವಕರ ಗುಂಪುಗಳು ನೆಚ್ಚಿನ ಸಂಗೀತ ನಿರ್ದೇಶಕನನ್ನು ಕಂಡು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಜನ್ಯ ಸಂಗೀತ ಕೇಳಿ ಹುಚ್ಚೆದ್ದು ಕುಣಿಯಲಾರಂಭಿಸಿ ದರು. ಈ ವೇಳೆ ನುಕ್ಕೂನುಗ್ಗಲು ಉಂಟಾದ ಕಾರಣ ಪೊಲೀಸರು ಯುವಕರ ಗುಂಪುನ್ನು ನಿಯಂತ್ರಿಸಲು ಹರಸಾಹಸಪಡುವಂತಾಯಿತು.ಈ ವೇಳೆ ಕೆಲವು ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ ಪ್ರಸಂಗವು ನಡೆಯಿತು.

ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಜಿಲ್ಲೆಯಲ್ಲೂ ಆಯೋಜಿತವಾಗಿರುವ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಶನಿವಾರ ಬೆಳಿಗ್ಗೆ ಸಾಂಪ್ರದಾಯಿಕ ಚಾಲನೆ ದೊರೆಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಚಾಮುಂಡೇಶ್ವರಿ, ಕೆಂಪನಂಜಾಂಭ ಅಮ್ಮನವರಿಗೆ ಪೂಜೆ ಸಲ್ಲಿಸಲಾಯಿತು. ನಾದಸ್ವರ, ಬೀಸು ಕಂಸಾಳೆ, ಗೊರವರ ಕುಣಿತ ಸೇರಿದಂತೆ ಜಾನಪದ, ಪಾರಂಪರಿಕ ಕಲಾತಂಡಗಳ ಪ್ರದರ್ಶನದೊಂದಿಗೆ ದಸರಾ ಸಂಭ್ರಮ ಮೇಳೈಸಿತು.

ಅದ್ಧೂರಿ ಮೆರವಣಿಗೆ

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಜಿಲ್ಲಾಡಳಿತ ಭವನದ ಮುಂಭಾಗ ನಂದಿ ಕಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎನ್.ಮಹೇಶ್ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆಯು ಜೋಡಿರಸ್ತೆ ಸೇರಿ ದಂತೆ ಪ್ರಮುಖ ಬೀದಿಗಳಲ್ಲಿ ಸಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಶ್ರೀ ಚಾಮರಾಜೇಶ್ವರ ದೇವ ಸ್ಥಾನದ ಮುಂಭಾಗ ಮುಕ್ತಾಯಗೊಂಡಿತು. ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ನಂದಿಕಂಬ, ವೀರಗಾಸೆ, ಡೊಳ್ಳು ಕುಣಿತ, ಮಂಗಳವಾದ್ಯ, ಬ್ಯಾಂಡ್‍ಸೆಟ್, ಹುಲಿ ವೇಷಾಧಾರಿಗಳು, ಗೊರವರ ಕುಣಿತ, ಕಂಸಾಳೆ, ಕೋಲು ಕುಣಿತ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಬಂದರು.

ಇಂದಿನ ಕಾರ್ಯಕ್ರಮದ ವಿವರ

ದಸರಾ ಮಹೋತ್ಸವದ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಸಂಜೆ 4.30 ರಿಂದ 4.50 ಗಂಟೆಯವರೆಗೆ ರಾಮಸಮುದ್ರದ ರಾಜಪ್ಪ ಮತ್ತು ತಂಡದವರಿಂದ ಜನಪದ ಸಂಗೀತ, 4.50 ರಿಂದ 5.20ರವರಗೆ ರಾಮಸಮುದ್ರದ ಶ್ರೀ ಮಲೆ ಮಹದೇಶ್ವರ ಕಲಾತಂಡದಿಂದ ಬೀಸು ಕಂಸಾಳೆ, 5.20 ರಿಂದ 5.40ರವರೆಗೆ ಯಳಂದೂರಿನ ಅರುಣ್‍ಕುಮಾರ್ ತಂಡದಿಂದ ಭಾವಗೀತೆ, ಸಂಜೆ 5.40ರಿಂದ 6 ಗಂಟೆಯರವರೆಗೆ ಚಾಮರಾಜನಗರ ನಗರದ ಶಾರದ ನೃತ್ಯ ಶಾಲೆ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಾಡಿಸಲಾಗಿದೆ.

ಸಂಜೆ 6 ರಿಂದ 7 ಗಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7 ರಿಂದ 8.15 ರವರೆಗೆ ಖ್ಯಾತ ಪ್ರಭಾತ್ ಕಲಾ ವಿದರು ನೃತ್ಯವೈಭವ ಪ್ರಸ್ತುತ ಪಡಿಸುವರು. 8.15 ರಿಂದ 10.30 ರವರೆಗೆ ಹೆಸರಾಂತ ಗಾಯಕಿ ಸಂಗೀತ ಕಟ್ಟಿ ಮತ್ತು ತಂಡದವರಿಂದ ನವರಸ ಗಾಯನ ಕಾರ್ಯಕ್ರಮ ನಡೆಯಲಿದೆ.

Translate »