ಗ್ರಾಮೀಣ ಸೊಗಡು ಬಿಂಬಿಸಿದ ರೈತ ದಸರಾ
ಚಾಮರಾಜನಗರ

ಗ್ರಾಮೀಣ ಸೊಗಡು ಬಿಂಬಿಸಿದ ರೈತ ದಸರಾ

October 16, 2018

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಚಾ.ನಗರದಲ್ಲಿ ಇಂದು ನಡೆದ ರೈತ ದಸರಾ ಕಾರ್ಯಕ್ರಮವು ಸಂಪೂರ್ಣವಾಗಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಮೂಲಕ ಎಲ್ಲರ ಗಮನ ಸೆಳೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರೈತ ದಸರಾ ಅಂಗವಾಗಿ ಅಲಂಕೃತಗೊಂಡ ಎತ್ತಿನಗಾಡಿ ಮೆರವಣಿಗೆಗೆ ಚಾಮರಾಜೇ ಶ್ವರ ದೇವಾಲಯ ಬಳಿ ಹಿಂದುಳಿದ ವರ್ಗ ಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ಸ್ವತಃ ಉಸ್ತುವಾರಿ ಸಚಿವರೇ ಎತ್ತಿನ ಗಾಡಿಯಲ್ಲಿ ನಿಂತು ಚಾಮರಾಜೇಶ್ವರ ದೇವಾಲಯದಿಂದ ಜೈ ಭುವನೇಶ್ವರಿ ವೃತ್ತದ ವರೆಗೂ (ಪಚ್ಚಪ್ಪ ವೃತ್ತ) ಮೆರವಣಿಗೆಯಲ್ಲಿ ಬಂದರು. ಜಿಪಂ ಅಧ್ಯಕ್ಷರಾದ ಶಿವಮ್ಮ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಸಹ ಉಸ್ತುವಾರಿ ಸಚಿವರ ಜತೆಯಲ್ಲಿ ಎತ್ತಿನ ಗಾಡಿ ಯಲ್ಲಿ ನಿಂತು ಮೆರವಣಿಗೆಯಲ್ಲಿ ಸಾಗಿದರು.

ಬಳಿಕ ನಗರದ ಜೆ.ಎಚ್. ಪಟೇಲ್ ಸಭಾಂಗಣದ ಮುಖ್ಯದ್ವಾರದ ಬಳಿ ರಾಶಿ ಪೂಜೆ ಮಾಡುವ ಮೂಲಕ ಜಿಲ್ಲಾ ಉಸ್ತು ವಾರಿ ಸಚಿವರು ರೈತ ದಸರಾ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ರೈತರು ದೇಶದ ಬೆನ್ನೆ ಲುಬು. ಯೋಧರು ನಮ್ಮನ್ನು ಪರಕೀಯ ರಿಂದ ರಕ್ಷಣೆ ಮಾಡಲು ಹಗಲಿರುಳು ಶ್ರಮಿಸು ತ್ತಿದ್ದಾರೆ. ಇದೇ ರೀತಿ ರೈತರು ನಮ್ಮ ಬದುಕು ರಕ್ಷಣೆಗೆ ಆಹಾರ ಬೆಳೆದು ಕಾಪಾಡುತ್ತಿದ್ದಾರೆ. ಕೃಷಿಕರು, ಯೋಧರು ದೇಶದ ಮುಖ್ಯ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.

ಕೃಷಿ ಅಭಿವೃದ್ಧಿಗೆ ನಾನಾ ತಂತ್ರಜ್ಞಾನ ಬೆಳೆದಿದ್ದರೂ ಪಾರಂಪರಿಕ ಕೃಷಿ ಪದ್ಧತಿಗೆ ತನ್ನದೇ ಆದ ಇತಿಹಾಸ ವಿಶೇಷ ಪ್ರಾಮುಖ್ಯತೆ ಇದೆ. ಈ ಹಿಂದಿನ ಕೃಷಿ ಪರಿಕರಗಳನ್ನು ನೋಡುವುದೇ ಒಂದು ಆನಂದವಾಗಿದೆ. ತಾವು ಸಹ ಕೃಷಿಕ ಕುಟುಂಬದಿಂದ ಬಂದವ ರಾಗಿದ್ದು, ತಮ್ಮ ಸಹೋದರ ಕುಟುಂಬ ವರ್ಗ ಕೃಷಿ ಚಟುವಟಿಕೆಗಳಲ್ಲಿ ಒಟ್ಟಾಗಿ ಪಾಲ್ಗೊಂಡಿ ದ್ದನ್ನು ನೋಡಿದ್ದೇನೆ ಎಂದು ಸಚಿವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಚಾಮರಾಜನಗರ ಜಿಲ್ಲೆ ದಸರಾ ಮಹೋತ್ಸವದಲ್ಲಿ ಈ ಬಾರಿ ರೈತ ದಸರಾ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಬಾರಿಯ 4 ದಿನಗಳ ದಸರಾದಲ್ಲಿ ವೈವಿ ಧ್ಯಮಯ ಕಾರ್ಯಕ್ರಮಗಳನ್ನು ಆಯೋ ಜನೆ ಮಾಡಲಾಗಿದೆ. ಮುಂದಿನ ವರ್ಷ ದಿಂದ 9 ದಿನಗಳ ಕಾಲ ದಸರಾ ಮಹೋ ತ್ಸವ ಹಮ್ಮಿಕೊಂಡು ಇನ್ನಷ್ಟು ವಿಭಿನ್ನ ಕಾರ್ಯ ಕ್ರಮಗಳನ್ನು ಏರ್ಪಡಿಸಲು ಮುಂದಾಗುವು ದಾಗಿ ಉಸ್ತುವಾರಿ ಸಚಿವರು ತಿಳಿಸಿದರು.

ಜಿಲ್ಲೆಯು ಎಲ್ಲ ಬೆಳೆಗಳನ್ನು ಬೆಳೆಯುವ ಸೂಕ್ತ ವಾತಾವರಣವನ್ನು ಹೊಂದಿದೆ. ಕೆಲವೆಡೆ ಮಳೆ ಆಶ್ರಿತ ಬೇಸಾಯ ಪದ್ಧತಿ ಇದ್ದರೂ ಸಹ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ ಗಮನ ಕೊಡಲಾಗಿದೆ. ಗಂಗಾ ಕಲ್ಯಾಣ, ಹನಿ ನೀರಾ ವರಿ ಪದ್ಧತಿ ಸೌಲಭ್ಯ ಒದಗಿಸಿ ಅನುಕೂಲ ಕಲ್ಪಿಸಲಾಗುತ್ತಿದೆ. ಈ ಯೋಜನೆಗಳ ಪ್ರಯೋಜನ ಪಡೆದು ಕೃಷಿಕರು ಬದುಕು ಹಸನಾಗಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ನಮ್ಮ ದೇಶ ಕೃಷಿ ಅವಲಂಬಿತವಾಗಿದ್ದರೂ ರೈತರಿಗೆ ಕೃಷಿ ಲಾಭದಾಯಕವಾಗಿಲ್ಲ ಎಂಬ ಕೊರಗು ಇದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕಿದೆ. ಬೆಳೆ ನಷ್ಟವಾದಾಗ ಬೆಳೆ ವಿಮೆ ಸಹಾಯಕ್ಕೆ ಬರಲಿದೆ. ಆದರೆ ವಿಮಾ ಸೌಲಭ್ಯ ಸಕಾಲಕ್ಕೆ ದೊರಕುವಂತಾಗಬೇಕು. ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗಿ ಬೆಳೆ ರೈತರ ಕೈಗೆ ಸಿಗಲಿ ಎಂದು ಹಾರೈಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಸಿ.ಎನ್. ಬಾಲರಾಜು ಅವರು ಮಾತನಾಡಿ, ಆಧುನಿಕ ಕೃಷಿ ಪದ್ಧತಿ ನೆರವು ರೈತರಿಗೆ ಬೇಕಿದೆ. ರೈತರ ಅಭಿವೃದ್ಧಿಯಿಂದ ದೇಶದ ಆರ್ಥಿಕ, ಸಾಮಾಜಿಕ ಪ್ರಗತಿಯೂ ಆಗಲಿದೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಪೂರಕವಾಗಿ ಸರ್ಕಾರಗಳು ನೀಡುತ್ತಾ ಬಂದಿವೆ. ಮಳೆ ನೀರು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳುವ ಯೋಜನೆಗೆ ವಿಶೇಷ ಒತ್ತು ನೀಡಬೇಕಿದೆ ಎಂದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ದಸರಾ ಉತ್ಸವದಲ್ಲಿ ರೈತರನ್ನು ತೊಡಗಿಸಿ ಕೊಂಡು ಅವರ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಮಾಹಿತಿ ಒದಗಿಸುವ ಮತ್ತು ಸಂವಾದದ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ರೈತ ದಸರಾದ ಮೂಲಕ ಪ್ರಯತ್ನಿಸಲಾಗಿದೆ. ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಮ್ಮ ಅವರು ಭತ್ತ ಕುಟ್ಟುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾ ಯತ್ ಸದಸ್ಯರಾದ ಲೇಖಾ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಾಥ್ ನೀಡಿದರು.

ಸಿರಿಧಾನ್ಯ ತಜ್ಞರಾದ ಡಾ. ಖಾದರ್ ಅವರು ದೇಸಿ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಆಗಬಹುದಾದ ಅನು ಕೂಲತೆಗಳ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು. ರೈತ ಮುಖಂಡರಾದ ಭಾಗ್ಯರಾಜ್, ಮಹೇಶ್ ಪ್ರಭು ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ರೈತ ಮುಖಂಡ ರಾದ ಕೆ.ಎಸ್. ನಾಗರಾಜಪ್ಪ, ಅಣಗಳ್ಳಿ ಬಸವರಾಜು, ಸಿದ್ಧರಾಜು, ಮಹ ದೇವಯ್ಯ, ಹೆಬ್ಬಸೂರು ಬಸವಣ್ಣ, ಪುಷ್ಪಲತಾ, ಜಯಶ್ರೀ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿ ಕುಮಾರ್, ಸದಸ್ಯರಾದ ನಾಗೇಂದ್ರ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರೈತ ಕುಟುಂಬದವರಾದ ಮಹದೇವಯ್ಯ ಮತ್ತು ಅವರ ಸಂಬಂಧಿಗಳಿಂದ ತಾಳ ವಾದ್ಯ ಮತ್ತು ಗಾಯನ ಕಾರ್ಯಕ್ರಮ ಸಭಿಕರನ್ನು ಮುದಗೊಳಿಸಿತು. ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಸಿರಿಧಾನ್ಯದಿಂದ ತಯಾರಿಸಿದ ರುಚಿಕರ ಖಾದ್ಯಗಳನ್ನು ಸವಿಯುವ ಅವ ಕಾಶ ದೊರೆಯಿತು. ಕೃಷಿ ಇಲಾಖೆ ಅಧಿಕಾರಿ ಸಿಬ್ಬಂದಿ ಎಲ್ಲರೂ ಪಂಚೆ, ಶಲ್ಯ ದಂತಹ ದೇಸಿ ಉಡುಪುಗಳನ್ನು ಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಇಂದಿನ ಸಾಂಸ್ಕøತಿಕ ಕಾರ್ಯಕ್ರಮ
ಚಾಮರಾಜನಗರ ದಸರಾ ಮಹೋತ್ಸವದ ಅಕ್ಟೋಬರ್ 16ರ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಅಕ್ಟೋಬರ್ 16ರಂದು ಸಂಜೆ 4.30 ರಿಂದ 4.45 ಗಂಟೆಯವರೆಗೆ ರಾಮ ಸಮುದ್ರದ ಆರ್.ಸಿ. ಸಿದ್ದರಾಜು ಮತ್ತು ತಂಡದವರಿಂದ ಡೋಲು ಕುಣಿತ, 4.45 ರಿಂದ 5 ಗಂಟೆಯವರೆಗೆ ಗುಂಡ್ಲುಪೇಟೆಯ ಪೃಥ್ವಿ ಬುದ್ದಿಮಾಂಧ್ಯ ಶಾಲೆ ವಿದ್ಯಾರ್ಥಿ ಗಳಿಂದ ಜಾನಪದ ನೃತ್ಯ, 5 ರಿಂದ 5.30 ಗಂಟೆವರೆಗೆ ಮಲೆಯೂರು ಡಾ. ಪ್ರೀತಮ್ ಅವರಿಂದ ಸುಗಮ ಸಂಗೀತ ಮತ್ತು ದೇವರ ನಾಮ ಕಾರ್ಯಕ್ರಮವಿದೆ.

5.30 ರಿಂದ 6 ಗಂಟೆಯವರೆಗೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ಎಂ. ಕೈಲಾಸಮೂರ್ತಿ ಮತ್ತು ತಂಡದಿಂದ ಜಾನಪದ ಗಾಯನ, 6 ರಿಂದ 6.30 ಗಂಟೆವರೆಗೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಎಸ್. ಜೈಗುರು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ. 6.30 ರಿಂದ 7.30 ಗಂಟೆವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. 7.30 ರಿಂದ 10.30ರವರೆಗೆ ಖ್ಯಾತ ಗಾಯಕ ಹೇಮಂತ್ ಮತ್ತು ತಂಡದಿಂದ ಕನ್ನಡ ರಸ ಸಂಜೆ ಕಾರ್ಯಕ್ರಮವಿದೆ.

Translate »