ಇಸ್ರೋ ವಿಶ್ವದಲ್ಲೇ ಉನ್ನತ ಬಾಹ್ಯಾಕಾಶ ಸಂಸ್ಥೆ
ಚಾಮರಾಜನಗರ

ಇಸ್ರೋ ವಿಶ್ವದಲ್ಲೇ ಉನ್ನತ ಬಾಹ್ಯಾಕಾಶ ಸಂಸ್ಥೆ

October 16, 2018

ಚಾಮರಾಜನಗರ:  ಭಾರತದ ಇಸ್ರೋ ಸಂಸ್ಥೆಯು ಪ್ರಪಂಚದಲ್ಲಿ ಉನ್ನತ ವಾದ ಬಾಹ್ಯಕಾಶ ಸಂಶೋಧನ ಸಂಸ್ಥೆ ಯಾಗಿದೆ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಸಿ.ಡಿ. ಪ್ರಸಾದ್ ಹೇಳಿದರು.

ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ರುವ ಕೆಡಿಪಿ ಸಭಾಂಗಣದಲ್ಲಿ ಸ್ಥಳೀಯ ವಿಜ್ಞಾನಾಸ್ತಕರಿಂದ ಪ್ರಾರಂಭವಾದ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ವಿಜ್ಞಾನಿಗಳು ಗ್ರಾಮೀಣ ಪ್ರದೇಶದಿಂದಲೇ ಬೆಳಕಿಗೆ ಬಂದವರು. ಇವರುಗಳು ವಿಜ್ಞಾನ ವಿಷಯದಲ್ಲಿ ಅತ್ಯು ತ್ತಮ ಸಂಶೋಧನೆಗಳನ್ನು ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಲ್ಲಿ ವಿಜ್ಞಾನಿಗಳ ಪಾತ್ರ ಅಪಾರ ವಾಗಿದ್ದು, ಇತ್ತೀಚಿನ ದಿನದಲ್ಲಿ ಉಡಾ ಯಿಸಿದ ಪಿಎಸ್‍ಎಲ್‍ವಿ ರಾಕೆಟ್‍ನಲ್ಲಿ 104 ಉಪಗ್ರಹಗಳನ್ನು ಉಡಾಯಿಸುವು ದರ ಮೂಲಕ ಪ್ರಪಂಚದಲ್ಲೇ ಅದ್ಬುತ ಸಾಧನೆ ಮಾಡಿದ್ದಾರೆ. ಇದು ವಿಶ್ವ ದಾಖಲೆ ಯಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಅಭಿಷೇಕ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸಿ ಸಂಸ್ಥೆಯು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳು ಸೇರಿದಂತೆ ರೈತರು, ವಿದ್ಯಾರ್ಥಿಗಳು ಜನಸಾಮಾನ್ಯರಿಗೆ ವಿಜ್ಞಾನದ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ವಿಜ್ಞಾನದ ಬಗೆಗೆ ತರಬೇತಿಗಳನ್ನು ನೀಡುವುದು ಅತ್ಯವಶ್ಯಕ ಹಾಗೂ ಸಮಾಜ ದಲ್ಲಿ ವಿಜ್ಞಾನದ ಬಗೆಗೆ ಅರಿವು ಮೂಡಿ ಸುವುದರಲ್ಲಿ ಇಂತಹ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.

ಧೀನಬಂದು ಸಂಸ್ಥೆಯ ಗೌರವ ಕಾರ್ಯ ದರ್ಶಿ ಪ್ರೊ. ಜಿ.ಎನ್. ಜಯದೇವ ಮಾತ ನಾಡಿ, ವಿಜ್ಞಾನವನ್ನು ಬರಿ ಪುಸ್ತಕ ಓದುವುದರಿಂದ ಕಲಿಯಲು ಸಾಧ್ಯವಿಲ್ಲ. ಪ್ರಾಯೋಗಿಕವಾಗಿ ಕಲಿಯಬೇಕು. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಿಂ ದಲೇ ಸಂಶೋಧನೆಯ ಮಹತ್ವವನ್ನು ತಿಳಿಸಿಕೊಡಬೇಕೆಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಪೌರಾಯುಕ್ತ ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ವತಿಯಿಂದ ಪ್ರತಿ ತಿಂಗಳಿಗೆ ನಾಲ್ಕು ಶಾಲಾ ಕಾಲೇಜು ಗಳಲ್ಲಿ ವಿಜ್ಞಾನ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ಮಂಜುಳ, ನಗರಸಭೆ ಪೌರಾಯುಕ್ತ ರಾಜಣ್ಣ, ಸಂಸ್ಥೆಯ ಉಪಾಧ್ಯಕ್ಷ ಭವಾನಿ ಶಂಕರ್, ಖಜಾಂಚಿ ಪುಷ್ಕಲ ಮುರಳಿ, ನಿರ್ದೇಶಕರುಗಳಾದ ಎನ್. ನಾಗೇಂದ್ರ ಮೂರ್ತಿ, ಮಹೇಶ ಕುಮಾರ್, ಸೋಮ ರಾಜ್, ಗಾಯಿತ್ರಿ, ನಾಗೇಂದ್ರ ಅಯ್ಯರ್ ಸೇರಿದಂತೆ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳೊಡನೆ ವಿಜ್ಞಾನಿ ಸಿ.ಡಿ. ಪ್ರಸಾದ್ ಸಂವಾದ ನಡೆಸಿದರು.

Translate »