ಇಂದಿನಿಂದ ಚಾಮರಾಜನಗರದಲ್ಲಿ ದಸರಾ ಸಂಭ್ರಮ
ಚಾಮರಾಜನಗರ

ಇಂದಿನಿಂದ ಚಾಮರಾಜನಗರದಲ್ಲಿ ದಸರಾ ಸಂಭ್ರಮ

October 13, 2018

ಚಾಮರಾಜನಗರ:  ಜಿಲ್ಲಾಡ ಳಿತ ಹಾಗೂ ಮೈಸೂರಿನ ದಸರಾ ಮಹೋ ತ್ಸವ ಸಮಿತಿಯ ಆಶ್ರಯದಲ್ಲಿ ಚಾಮರಾಜನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ದಸರಾ ಮಹೋತ್ಸವ 2018ಕ್ಕೆ ನಾಳೆ (ಅ.13) ಚಾಲನೆ ದೊರೆಯಲಿದೆ.

ಅ.13ರಿಂದ 16ರವರೆಗೆ ನಡೆಯಲಿರುವ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಬೆ.10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಲನೆ ದೊರೆಯಲಿದೆ. ನಂತರ ಚಲನಚಿತ್ರೋತ್ಸವ, ಸಂಜೆ 4 ಗಂಟೆಗೆ ಕಲಾ ತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿ ಗಳ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಾ ಲಯದ ಮುಂಭಾಗ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳ ಉದ್ಘಾಟನೆ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ಸಂಗೀತ ರಸ ಸಂಜೆ ನಡೆಸಿ ಕೊಡಲಿದ್ದು, ಇದು ಇಂದಿನ ಪ್ರಮುಖ ಆಕರ್ಷಣೆ ಆಗಿದೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ವಿರಳವಾಗಿರುವುದರಿಂದ ಇಂದಿನ ಕಾರ್ಯಕ್ರಮಕ್ಕೆ ಸಾವಿರಾರು ನಾಗರಿಕರು, ಸಂಗೀತ ಪ್ರಿಯರು ಆಗಮಿಸುವ ನಿರೀಕ್ಷೆ ಇದೆ.

ಚಾಮರಾಜನಗರದಲ್ಲಿ ನಡೆಯುತ್ತಿರುವ ಈ ದಸರಾ ಮಹೋತ್ಸವ 5ನೇಯದು. 2013ರಿಂದ ಜಿಲ್ಲೆಯಲ್ಲೂ ದಸರಾ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂ ರಿಗೆ ಸೀಮಿತವಾಗಿದ್ದ ದಸರಾ ಮಹೋ ತ್ಸವವನ್ನು ಚಾಮರಾಜನಗರ ಜಿಲ್ಲೆಗೆ ತಂದ ಕೀರ್ತಿ ದಿ.ಹೆಚ್.ಎಸ್.ಮಹದೇವ ಪ್ರಸಾದ್ ಅವರಿಗೆ ಸಲ್ಲುತ್ತದೆ. 2013ರಲ್ಲಿ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರ ವಿಶೇಷ ಕಾಳಜಿಯಿಂದ ಮೊದಲ ಬಾರಿಗೆ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಕಾರ್ಯಕಮ್ರಗಳು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ದಸರಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಒಮ್ಮೆ ಮಾತ್ರ ಜಿಲ್ಲೆಯಲ್ಲಿಬ್ಬರ ಆವರಿಸಿದ್ದರಿಂದ ದಸರಾ ನಡೆಯಲಿಲ್ಲಾ.

ಜಿಲ್ಲಾಡಳಿತ ಈ ಕಾರ್ಯಕ್ರಮಗಳೊ ಗಾಗಿ ರಾಜ್ಯ ಸರ್ಕಾರದಿಂದ 1 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಈ ಅನುದಾನಕ್ಕೆ ಸೀಮಿತವಾದಂತೆ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಇದರಲ್ಲಿ ಹೆಚ್ಚು ಎಂದರೆ ಸುಮಾರು 12 ಲಕ್ಷ ರೂ.ಗಳನ್ನು ಅರ್ಜುನ್ ಜನ್ಯ ಅವರಿಗೆ ನೀಡಲಾಗುತ್ತಿದೆ ಎಂದು ಸ್ವತಹ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಕಂಗೊಳಿಸುತ್ತಿರುವ ದೀಪಾಲಂಕಾರ: ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನವನ, ತ್ಯಾಗರಾಜ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಗೆ ದೀಪಾಲಂಕಾರ ಮಾಡಲಾಗಿದೆ. ಇದ ರಿಂದ ಈ ರಸ್ತೆಗಳು ಬಣ್ಣ ಬಣ್ಣದ ದೀಪ ಗಳಿಂದ ಕಂಗೊಳಿಸುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿರುವ ಅದ್ಧೂರಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದೆ. ಪ್ರತಿದಿನ ಸಂಜೆ 4.30ಕ್ಕೆ ಕಾರ್ಯಕ್ರಮಗಳು ಆರಂಭವಾಗಲಿದೆ. ಮೊದಲಿಗೆ ಜಿಲ್ಲೆಯ ಸ್ಥಳೀಯ ಕಲಾ ವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ನಂತರ ಕಾಲೇಜು ವಿದ್ಯಾರ್ಥಿಗಳು, ತದನಂತರ ಹೊರ ಜಿಲ್ಲೆಯ ಖ್ಯಾತ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಡಲಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧ ಗೊಂಡಿದ್ದು, ಬಣ್ಣ-ಬಣ್ಣದ ದೀಪಗಳಿಂದ ವೇದಿಕೆ ಪ್ರಜ್ವಲಿಸುತ್ತಿದೆ. ಕಲಾಸಕ್ತರನ್ನು ಕೈ ಬಿಸಿ ಕರೆಯುತ್ತಿದೆ.

Translate »