ಚಾಮರಾಜನಗರ: ಒಂದೇ ನಂಬರಿನ ಎರಡು ಲಾರಿಗಳನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಜಬೀವುಲ್ಲಾ ಹಾಗೂ ಜಾವೀದ್ ಪಾಷ ಬಂಧಿತ ಆರೋಪಿಗಳು. ಇಂದು ಪಟ್ಟಣದ ಗಾಳಿಪುರ ಬಡಾವಣೆಯಲ್ಲಿ ಒಂದೇ ನಂಬರಿನ (ಕೆಎ.07 4799) ಎರಡು ಲಾರಿಗಳು ನಿಂತಿದ್ದವು. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ವೃತ್ತ ನಿರೀಕ್ಷಕ ಮಹದೇವಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಲಾರಿಗಳನ್ನು ವಶಕ್ಕೆ ಪಡೆದು ಠಾಣೆ ಮುಂದೆ ನಿಲ್ಲಿಸಿ ದ್ದಾರೆ….
ಗ್ರಾಮ ವಿದ್ಯುತ್ ಪ್ರತಿನಿಧಿ ಮೇಲೆ ಹಲ್ಲೆ
October 1, 2018ಚಾಮರಾಜನಗರ: ಮನೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಂಬ ಕಾರಣಕ್ಕೆ ಗ್ರಾಮ ವಿದ್ಯುತ್ ಪ್ರತಿನಿಧಿಯೊಬ್ಬರ ಮೇಳೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೊಡಿಉಗನೆ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಬಿಸಲವಾಡಿ ಗ್ರಾಮದ ಗ್ರಾಮ ವಿದ್ಯುತ್ ಪ್ರತಿನಿಧಿ ಎನ್.ಕುಮಾರ್ ಹಲ್ಲೆ ಗೊಳಗಾದವರು. ದೇ ಗ್ರಾಮದ ಮಲ್ಲಿಕಾರ್ಜುನ ಎಂಬುವರು ಹಲ್ಲೆ ನಡೆಸಿದವರು. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಲ್ಲಿಕಾರ್ಜುನ ತಮ್ಮ ಮನೆಯ ವಿದ್ಯುತ್ ಬಿಲ್ ಹಣ 1300 ರೂ. ಪಾವತಿಸಿರ ಲಿಲ್ಲ. ಇದರಿಂದ ವಿದ್ಯುತ್ ಸಂಪರ್ಕ…
ಗುಂಡ್ಲುಪೇಟೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
October 1, 2018ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಪುರಾತನ ದೇವಾಲಯವಾದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಹಿನ್ನೆಲೆಯಲ್ಲಿ ದೇವಾಲಯ ದಲ್ಲಿರುವ ಶ್ರೀ ಗಣಪತಿ ಮೂರ್ತಿಗೆ ವಿಶೇಷ ಭಸ್ಮಾಲಂಕಾರವನ್ನು ಮಾಡಲಾಗಿತ್ತು. ಪ್ರತಿ ತಿಂಗಳ ಸಂಕಷ್ಟ ಹರ ಚತುರ್ಥಿಯಂತೆ ಈ ಬಾರಿಯೂ ಸಹ ದೇವಾಲ ಯವನ್ನು ಶುದ್ಧೀಕರಿಸಿ ವಿವಿಧ ಹೂವು ಮತ್ತು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿರುವ ಶ್ರೀಗಣಪತಿ ಮತ್ತು ಈಶ್ವರ ಮತ್ತು ಪಾರ್ವತಮ್ಮ ನವರ ಮೂರ್ತಿ ಗಳಿಗೆ ವಿಶೇಷ ಅಲಂಕಾರ ಮತ್ತು ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕರಾದ ಶಂಕರನಾರಾಯಣಜೋಯಿಸ್ ಮತ್ತು…
ರಸ್ತೆಗಾಗಿ ಭೂಸ್ವಾಧೀನಕೊಳಪಟ್ಟ ಜಮೀನಿನ ರೈತರಿಗೆ ಪರಿಹಾರ ವಿತರಣೆ
September 29, 2018ಹನೂರು: ಕೊಳ್ಳೇ ಗಾಲದಿಂದ ಹನೂರು ರಸ್ತೆ ಅಭಿವೃದ್ದಿ ಕೆಶಿಫ್ ಯೋಜನೆಯಡಿ ಭೂಸ್ವಾಧೀನಕ್ಕೆ ಮಂಜೂರಾತಿ ದೊರೆತಿದ್ದು, ರೈತರು, ಮಳಿಗೆ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ನೊಂದಾಣಿ ಮಾಡಿ, ಪರಿಹಾರ ಪಡೆದು ಅಭಿವೃದ್ಧಿಗೆ ಸಹಕಾರ ಪರಿಹಾರ ನೀಡುವಂತೆ ಕೊಳ್ಳೇಗಾಲ ಉಪವಿಭಾಗಾಧಿ ಕಾರಿ ಬಿ.ಫೌಜಿಯ ತರುನ್ನುಮ್ ತಿಳಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಭೂಸ್ವಾಧೀನ ರೈತರಿಗೆ ಪರಿಹಾರ ಚೆಕ್ ವಿತರಣೆ ಮಾಡಿ, ನಂತರ ಅವರು ಮಾತನಾಡಿದರು.ಕೆಶಿಫ್ ಯೋಜನೆಯಡಿ ಪ್ಯಾಕೇಟ್ ಕೊಳ್ಳೇ ಗಾಲದಿಂದ ಹನೂರುವರಗೆ 23.8 ಕೀಲೋ ಮೀಟರ್…
ಎಪಿಎಂಸಿ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ, ಉಪಾಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆ
September 29, 2018ಚಾಮರಾಜನಗರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿ ತಿಯ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ ಹಾಗೂ ಉಪಾ ಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಹಾಗೂ ಉಪಾಧ್ಯಕ್ಷ ಎಂ.ಮಹದೇವಸ್ವಾಮಿ ಅವರ 20 ತಿಂಗಳ ಅಧಿಕಾರದ ಅವಧಿ ಅ.2 ರಂದು ಪೂರ್ಣವಾಗುವ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಮ್ಮತ್ತೂರು ಕ್ಷೇತ್ರದ ಬಿ.ಎಸ್.ಶಂಕರಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗವಳ್ಳಿ ಕ್ಷೇತ್ರದ ನಂಜುಂಡಸ್ವಾಮಿ ನಾಮಪತ್ರ…
ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಆಹಾರ ಪದಾರ್ಥಗಳ ಮಂಗಮಾಯ ಪ್ರಕರಣ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕ ಅಮಾನತು
September 29, 2018ಕೊಳ್ಳೇಗಾಲ: ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಪಡಿತರ ಆಹಾರ ಪದಾರ್ಥಗಳ ದುರುಪ ಯೋಗಕ್ಕೆ ಸಂಬಂಧಿಸಿದಂತೆ ಆಹಾರ ನಿರೀ ಕ್ಷಕ ಮತ್ತು ಆಹಾರ ಶಿರಸ್ತೇದಾರರನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳು ಅಮಾನತುಪಡಿಸಿದ್ದಾರೆ. ಪ್ರಭಾರ ಆಹಾರ ಶಿರಸ್ತೇದಾರರಾದ ಬಿಸಲಯ್ಯ ಮತ್ತು ಪ್ರಭಾರ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಅಮಾನತಿಗೊಳ ಗಾದವರಾಗಿದ್ದು, ಇವರುಗಳು ಟಿಎಪಿಸಿ ಎಂಎಸ್‍ಗೆ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿ ಗಳಿಗೆ ವರದಿ ನೀಡದೆ ಬಡತನ ರೇಖೆ ಗಿಂತ ಕೆಳಗಿರುವ ಮತ್ತು ದುರ್ಬಲ ವರ್ಗದ ಜನರಿಗೆ ಸಕಾಲದಲ್ಲಿ ಆಹಾರ ಪದಾರ್ಥಗಳು ವಿತರಣೆಯಾಗುವಲ್ಲಿ ವಿಫಲರಾಗಿದ್ದು,…
ಪೊಲೀಸ್ ದೂರು ಪ್ರಾಧಿಕಾರದ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನ
September 29, 2018ಚಾಮರಾಜನಗರ: ನಗರದಲ್ಲಿರುವ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ನಾಗರಿಕ ಸೇವಾ ಸಮಾಜದಿಂದ ಹೊಸದಾಗಿ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಜಾರಿ ಯಲ್ಲಿದ್ದು, ಸದಸ್ಯತ್ವಕ್ಕಾಗಿ ಅಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸೈದ್ದಾಂತಿಕ ಗುಂಪುಗಳ್ಲಿ ಗುರುತಿಸಿಕೊಂಡಿರಬಾರದು. ಸಮಾಜ ವಿರೋಧಿ ಅಥವಾ ರಾಷ್ಟ್ರೀಯ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬಾರದು. ಯಾವುದೇ ಸಂಜ್ಞೆ ಅಥವಾ ಅಸಂಜ್ಞೆಯ ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗಿರಬಾರದು. ಶಿಕ್ಷಣ, ಆರೋಗ್ಯ ಹಾಗೂ ಹಿಂದುಳಿದ ವರ್ಗಗಳ ಉನ್ನತೀಕರಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರಾಗಿಬೇಕು….
ಆರು ತಿಂಗಳೊಳಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ
September 28, 2018ಚಾಮರಾಜನಗರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ತಾಲೂಕಿನ 22 ಕೆರೆಗಳು ಮತ್ತು ನಂಜನಗೂಡಿನ 2 ಕೆರೆಗಳು ಸೇರಿದಂತೆ ಒಟ್ಟು 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಕಾಮಗಾರಿಯು ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ಸುತ್ತೂರು ಏತ ಯೋಜನೆಯಡಿ ಕೈಗೆತ್ತಿ ಕೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆಯನ್ನು ಸುತ್ತೂರು ಜಾಕ್‍ವೆಲ್ ಬಳಿಯಿಂದ ಆರಂಭಿಸಿದ ಸಚಿವರು ಹಲವು ಕೆರೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಒಟ್ಟು…
ಇಬ್ಬರು ಖದೀಮರ ಸೆರೆ: 6.38 ಲಕ್ಷ ಮೌಲ್ಯದ ವಸ್ತುಗಳ ವಶ
September 28, 2018ಚಾಮರಾಜನಗರ: ಚಾಮರಾಜನಗರದ ಮತ್ತು ಸುತ್ತಮುತ್ತಲ ಪ್ರದೇಶಗಳ ಮನೆ, ದೇವಸ್ಥಾನ ಸೇರಿದಂತೆ ಇತರ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ರಿಂದ 6,38,580 ರೂ. ಮೌಲ್ಯದ ಸ್ವತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಇಲಿಯಾಸ್ ನಗರದ ನಿವಾಸಿ, ಗಾಳೀಪುರ ಮಕ್ಕಾ ಹೊಟೇಲ್ ನಲ್ಲಿ ಪರೋಟ ಮಾಡುತ್ತಿದ್ದ ಮಹಮ್ಮದ್ ಇರ್ಫಾನ್ ಖಾನ್ ಉ.ಚೋಟು(21) ಹಾಗೂ ನೂರ್ ಮೊಹಲ್ಲಾ ಬಡಾವಣೆಯ ನಿವಾಸಿ ಲಾರಿ ಕ್ಲೀನರ್ ಆಗಿದ್ದ ಅಬ್ದುಲ್ ಇಮ್ರಾನ್ ಉ.ಇಮ್ಮು ಬಂಧಿತರು. ನಗರದ ತಮ್ಮ ಕಚೇರಿಯಲ್ಲಿ ಗುರುವಾರ…
ಮನೆ ಮೇಲೆ ದಾಳಿ: ಗಾಂಜಾ, ಅಕ್ರಮ ಮದ್ಯ ವಶ
September 28, 2018ಕೊಳ್ಳೇಗಾಲ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅಕ್ರಮ ವಾಗಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಪಿ. ಕೆಂಪೇಗೌಡ ಎಂಬಾತನಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮನೆಯಲ್ಲಿ ಅಕ್ರಮವಾಗಿ ಸಂಸ್ಕರಿಸಿ ಇಡಲಾಗಿದ್ದ 60 ಸಾವಿರ ರೂ. ಮೌಲ್ಯದ ಗಾಂಜಾ ಅಲ್ಲದೆ ಅಕ್ರಮವಾಗಿ ಇಟ್ಟುಕೊಂಡಿದ್ದ 4176 ರೂ ಮೌಲ್ಯದ ವಿವಿಧ ಬ್ರಾಂಡಿನ ಮದ್ಯದ ಬಾಟಲಿ ಹಾಗೂ ಟೆಟ್ರಾಪ್ಯಾಕ್‍ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಕೆಂಪೇಗೌಡ…