ಎಪಿಎಂಸಿ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ, ಉಪಾಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆ
ಚಾಮರಾಜನಗರ

ಎಪಿಎಂಸಿ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ, ಉಪಾಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆ

September 29, 2018

ಚಾಮರಾಜನಗರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿ ತಿಯ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ ಹಾಗೂ ಉಪಾ ಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಹಾಗೂ ಉಪಾಧ್ಯಕ್ಷ ಎಂ.ಮಹದೇವಸ್ವಾಮಿ ಅವರ 20 ತಿಂಗಳ ಅಧಿಕಾರದ ಅವಧಿ ಅ.2 ರಂದು ಪೂರ್ಣವಾಗುವ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಮ್ಮತ್ತೂರು ಕ್ಷೇತ್ರದ ಬಿ.ಎಸ್.ಶಂಕರಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗವಳ್ಳಿ ಕ್ಷೇತ್ರದ ನಂಜುಂಡಸ್ವಾಮಿ ನಾಮಪತ್ರ ಸಲ್ಲಿಸಿದರು. ಈ ಸ್ಥಾನ ಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರಾಗಿ ಬಿ.ಎಸ್.ಶಂಕರಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ನಂಜುಂಡ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಪುರಂದರ್ ಸಭೆಯಲ್ಲಿ ಘೋಷಿಸಿದರು.
ಚುನಾವಣೆಯಲ್ಲಿ ನಿರ್ದೇಶಕರಾದ ಬಿ.ಕೆ.ರವಿಕುಮಾರ್, ಎಂ.ಮಹ ದೇವಸ್ವಾಮಿ, ಹೆಗ್ಗೂರಶೆಟ್ಟಿ, ಕೆ.ಎಸ್. ಚಂದ್ರಶೇಖರ್, ಡಿ. ನಾಗೇಂದ್ರ, ಎಂ.ವಿಶ್ವನಾಥ್, ಎಸ್.ಬಸವನಾಯಕ, ಪಿ.ಚಾಮರಾಜು, ವೆಂಕಟಶೇ ಷಯ್ಯ, ಪುಟ್ಟಸುಬ್ಬಪ್ಪ, ಜಿ.ಸುಂದ್ರಮ್ಮ, ನಾಗಮ್ಮ, ಕಾರ್ಯದರ್ಶಿ ಪ್ರಕಾಶ್ ಭಾಗವಹಿಸಿದ್ದರು.

ಎಪಿಎಂಸಿ ಅಭಿವೃದ್ದಿಗೆ ಶ್ರಮಿಸುವೆ: ನೂತನ ಅಧ್ಯಕ್ಷ ಬಿ.ಎಸ್. ಶಂಕರಮೂರ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರೈತರ ಸಂಸ್ಥೆಯಾದ ಕೃಪಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಮಿತಿಯಲ್ಲಿ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಿ, ಪ್ರಗತಿ ಯಲ್ಲಿರುವ ಆರಿಶಿನ ಸಂಸ್ಕರಣ ಘಟಕ ಪೂರ್ಣಗೊಳಿಸಲು, ಲ್ಯಾಬ್ ಸ್ಥಾಪನೆಗೆ ಒತ್ತು ನೀಡಿ ಸಮಿತಿ ಅಭಿವೃದ್ದಿ ಶ್ರಮಿಸುತ್ತೇನೆ ಎಂದರು.

ಸನ್ಮಾನ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್.ಶಂಕರಮೂರ್ತಿ, ನಂಜುಂಡಸ್ವಾಮಿ ಅವರನ್ನು ಮಾಜಿ ಶಾಸಕ ಎಸ್.ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಉಪಾಧ್ಯಕ್ಷ ಯೋಗೇಶ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಸದಾಶಿವ ಮೂರ್ತಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವು, ಚಿಕ್ಕಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ಸ್ವಾಮಿ, ಆರ್.ದ್ರುವನಾರಾಯಣ್ ಬಳಗದ ಅಧ್ಯಕ್ಷ ಕಾಗಲ ವಾಡಿಚಂದ್ರು, ಬಿ.ಪಿ.ಪ್ರಕಾಶ್, ರಾಜು, ನಾಗೇಶ್, ಡಿ.ಎನ್. ನಟರಾಜು, ಮುಡುಗುಂಡಶಾಂತು, ಶಿವಶಂಕರ್, ಕಂದಹಳ್ಳಿ ನಂಜುಂಡಸ್ವಾಮಿ, ನಾಗಯ್ಯ ಇತರರು ಹಾಜರಿದ್ದರು.

Translate »