ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಆಹಾರ ಪದಾರ್ಥಗಳ ಮಂಗಮಾಯ ಪ್ರಕರಣ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕ ಅಮಾನತು
ಚಾಮರಾಜನಗರ

ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಆಹಾರ ಪದಾರ್ಥಗಳ ಮಂಗಮಾಯ ಪ್ರಕರಣ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕ ಅಮಾನತು

September 29, 2018

ಕೊಳ್ಳೇಗಾಲ: ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಪಡಿತರ ಆಹಾರ ಪದಾರ್ಥಗಳ ದುರುಪ ಯೋಗಕ್ಕೆ ಸಂಬಂಧಿಸಿದಂತೆ ಆಹಾರ ನಿರೀ ಕ್ಷಕ ಮತ್ತು ಆಹಾರ ಶಿರಸ್ತೇದಾರರನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳು ಅಮಾನತುಪಡಿಸಿದ್ದಾರೆ.

ಪ್ರಭಾರ ಆಹಾರ ಶಿರಸ್ತೇದಾರರಾದ ಬಿಸಲಯ್ಯ ಮತ್ತು ಪ್ರಭಾರ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಅಮಾನತಿಗೊಳ ಗಾದವರಾಗಿದ್ದು, ಇವರುಗಳು ಟಿಎಪಿಸಿ ಎಂಎಸ್‍ಗೆ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿ ಗಳಿಗೆ ವರದಿ ನೀಡದೆ ಬಡತನ ರೇಖೆ ಗಿಂತ ಕೆಳಗಿರುವ ಮತ್ತು ದುರ್ಬಲ ವರ್ಗದ ಜನರಿಗೆ ಸಕಾಲದಲ್ಲಿ ಆಹಾರ ಪದಾರ್ಥಗಳು ವಿತರಣೆಯಾಗುವಲ್ಲಿ ವಿಫಲರಾಗಿದ್ದು, ಕರ್ತವ್ಯ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂಬ ಆರೋಪದಡಿ ಹಾಗೂ ಇವರನ್ನು ಕರ್ತವ್ಯದಲ್ಲಿ ಮುಂದುವರೆಸಿದರೆ ದಾಖ ಲೆಗಳನ್ನು ನಾಶಪಡಿಸುವ ಸಾಧ್ಯತೆಗಳಿದೆ ಎಂಬ ಕಾರಣಕ್ಕಾಗಿ ಇವರನ್ನು ಅಮಾನ ತುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ: ಕೊಳ್ಳೇಗಾಲ ಟಿಎಪಿಸಿಎಂಎಸ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಟಿಎಪಿಸಿಎಂಎಸ್‍ನ ಗೋದಾ ಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಾಗ 2261.58 ಕ್ವಿಂಟಾಲ್ ಅಕ್ಕಿ, 234.57 ಕ್ವಿಂಟಾಲ್ ತೊಗರಿಬೇಳೆ, 530.17 ಕ್ವಿಂಟಾಲ್ ಸಕ್ಕರೆ, 15,831 ಲೀಟರ್ ತಾಳೆ ಎಣ್ಣೆ ಕಡಿಮೆ ದಾಸ್ತಾನಿರುವುದು ಪತ್ತೆಯಾಗಿದೆ. ಇದಕ್ಕೆ ಗೋದಾಮಿನ ವ್ಯವಸ್ಥಾಪಕ ಸಿದ್ದಪ್ಪ ಅವರು 530.17 ಕ್ವಿಂಟಾಲ್ ಸಕ್ಕರೆ ನೀರು ಬಿದ್ದು ಹಾಳಾದ ಕಾರಣ ಹಾಗೂ 15813 ಲೀಟರ್ ತಾಳೆ ಎಣ್ಣೆ ಮಾನವ ಉಪಯೋಗಕ್ಕೆ ಯೋಗ್ಯವಲ್ಲದಂತೆ ಹಾಳಾಗಿದ್ದ ಕಾರಣ ಆಡಳಿತ ಮಂಡಳಿ ಗಮನಕ್ಕೆ ತಂದು ವಿಲೇವಾರಿ ಮಾಡಲಾಗಿದೆ. ಆದರೆ ಈ ವಿಷ ಯವನ್ನು ಇಲಾಖೆಯ ಗಮನಕ್ಕೆ ತಂದಿ ರುವುದಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆ ಯಲ್ಲಿ ಗೋದಾಮಿನ ವ್ಯವಸ್ಥಾಪಕ ಸಿದ್ದಪ್ಪ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ ಟಿಎಪಿಸಿಎಂಎಸ್‍ನ ಕಾರ್ಯದರ್ಶಿ ನೀಡಲಾಗಿದ್ದ ಪ್ರಾಧಿಕಾರ ಪತ್ರವನ್ನು ಅಮಾ ನತುಗೊಳಿಸಿ ಪಡಿತರ ಚೀಟಿದಾರರಿಗೆ ಹಾಗೂ ಹಾಸ್ಟೆಲ್‍ಗಳಿಗೆ ಪಡಿತರ ವಿತರಿ ಸುವ ಜವಾಬ್ದಾರಿಯನ್ನು ಕೊಳ್ಳೇಗಾಲದ ಕೆಎಫ್‍ಸಿಎಸ್‍ಸಿಗೆ ಹಸ್ತಾಂತರಿಸಲಾಗಿತ್ತು. ಅಲ್ಲದೇ ಹೆಚ್ಚಿನ ತನಿಖೆಗಾಗಿ ಟಿಎಪಿಸಿ ಎಂಎಸ್ ಗೋದಾಮಿಗೆ ಬೀಗಮುದ್ರೆ ಹಾಕಿ, ಅಲ್ಲಿನ ಆಹಾರ ಪದಾರ್ಥ ಮತ್ತು ಎರಡು ಬಿಲ್ ಬುಕ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಬಗ್ಗೆ `ಮೈಸೂರು ಮಿತ್ರ’ ಸೆ.23ರ ಸಂಚಿಕೆಯಲ್ಲಿ `4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿ ಸಿದ್ದನ್ನು ಸ್ಮರಿಸಬಹುದು.

Translate »