ಇಬ್ಬರು ಖದೀಮರ ಸೆರೆ: 6.38 ಲಕ್ಷ ಮೌಲ್ಯದ ವಸ್ತುಗಳ ವಶ
ಚಾಮರಾಜನಗರ

ಇಬ್ಬರು ಖದೀಮರ ಸೆರೆ: 6.38 ಲಕ್ಷ ಮೌಲ್ಯದ ವಸ್ತುಗಳ ವಶ

September 28, 2018

ಚಾಮರಾಜನಗರ: ಚಾಮರಾಜನಗರದ ಮತ್ತು ಸುತ್ತಮುತ್ತಲ ಪ್ರದೇಶಗಳ ಮನೆ, ದೇವಸ್ಥಾನ ಸೇರಿದಂತೆ ಇತರ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ರಿಂದ 6,38,580 ರೂ. ಮೌಲ್ಯದ ಸ್ವತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ ಇಲಿಯಾಸ್ ನಗರದ ನಿವಾಸಿ, ಗಾಳೀಪುರ ಮಕ್ಕಾ ಹೊಟೇಲ್ ನಲ್ಲಿ ಪರೋಟ ಮಾಡುತ್ತಿದ್ದ ಮಹಮ್ಮದ್ ಇರ್ಫಾನ್ ಖಾನ್ ಉ.ಚೋಟು(21) ಹಾಗೂ ನೂರ್ ಮೊಹಲ್ಲಾ ಬಡಾವಣೆಯ ನಿವಾಸಿ ಲಾರಿ ಕ್ಲೀನರ್ ಆಗಿದ್ದ ಅಬ್ದುಲ್ ಇಮ್ರಾನ್ ಉ.ಇಮ್ಮು ಬಂಧಿತರು. ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಈ ವಿಷಯ ತಿಳಿಸಿದರಲ್ಲದೇ ಘಟನೆಗಳ ಬಗ್ಗೆ ಪೂರ್ಣವಾಗಿ ವಿವರಿಸಿದರು.
ಚಾಮರಾಜನಗರ ಹಾಗೂ ಸುತ್ತಮು ತ್ತಲ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವತ್ತು ಕಳುವು ಪ್ರಕರಣಗಳು ಏರಿಕೆ ಆಗುತ್ತಿದ್ದವು. ಇದನ್ನು ಪತ್ತೆ ಹಚ್ಚುವ ಸಲುವಾಗಿ ಚಾಮ ರಾಜನಗರ ಉಪ ವಿಭಾಗದ ಮಟ್ಟದಲ್ಲಿ ಒಂದು ವಿಶೇಷ ಅಪರಾಧ ತನಿಖಾ ದಳ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 14 ಮನೆಗಳ್ಳತನ, 3 ದೇವಸ್ಥಾನ ಕಳ್ಳತನ, 1 ಡಾಬಾದಲ್ಲಿನ ಕಳ್ಳತನ, 5 ಬ್ಯಾಟರಿಗಳ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. 2017ನೇ ಸಾಲಿನ 10 ಪ್ರಕರಣ, 2018ನೇ ಸಾಲಿನ 13 ಪ್ರಕರಣ ಸೇರಿದಂತೆ ಒಟ್ಟು 23 ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿ ಆಗಿರುವ ಅನುಮಾನ ಇದೆ. ಹೀಗಾಗಿ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಎಸ್ಪಿ ತಿಳಿಸಿದರು. ಬಂಧಿತ ಇಬ್ಬರು ಆರೋಪಿಗಳು ಸುಮಾರು 10,15,080 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ದ್ದರು. ಅವರಿಂದ 6,38,580 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಕೊಳ್ಳಲಾಗಿದೆ. ಅಟ್ಟು ಗೂಳಿಪುರದಲ್ಲಿ ಮನೆ ಕಳ್ಳತನ, ಸಿರಗಳ್ಳಿ ಲಕ್ಷ್ಮೀದೇವಿ ದೇವಸ್ಥಾನದ 2 ಕಳವು ಪ್ರಕ ರಣ, ಬೊಮ್ಮೇಶ್ವರ ದೇವಸ್ಥಾನದಲ್ಲಿ ಕಳವು ಪ್ರಕರಣ, ಸಂತೃಪ್ತಿ ಡಾಬಾದಲ್ಲಿ ನಡೆದಿದ್ದ ಕಳವು ಪ್ರಕರಣ ಸೇರಿದಂತೆ ಇತ್ಯಾದಿ ಪ್ರಕ ರಣಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ಧರ್ಮೇಂದರ್ ಕುಮಾರ್ ಮೀನಾ ತಿಳಸಿದರು.

ಚಾಮರಾಜನಗರ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಅವರ ನೇತೃ ತ್ವದಲ್ಲಿ, ಪಿಎಸ್‍ಐ ಬಿ.ಪುಟ್ಟಸ್ವಾಮಿ, ಎಸ್.ಎಸ್. ರವಿಕಿರಣ್, ಸಿಬ್ಬಂದಿಗಳಾದ ಡಿ.ಶಾಂತರಾಜು, ಸೈಯದ್ ಹುಸೇನ್, ಮಹದೇವಸ್ವಾಮಿ, ನಿಂಗರಾಜು, ಜಗದೀಶ್, ಚಿನ್ನಸ್ವಾಮಿ, ಬಾಬು, ರಮೇಶ್‍ಕುಮಾರ್, ಚಂದ್ರು, ಜೆ.ಡಿ.ರವಿ, ಕಿಶೋರ್, ಎಂ.ಕುಮಾರಸ್ವಾಮಿ, ನಾಗ ನಾಯಕ, ಮಂಜುನಾಥ್, ಬಂಟಪ್ಪ, ಮಹೇಶ್, ರಾಜು, ಮಹೇಶ್, ಜಗದೀಶ್ ಅವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ತಂಡಕ್ಕೆ ಉತ್ತಮ ಬಹುಮಾನವನ್ನು ಘೋಷಿಸಲಾಗಿದೆ ಎಂದು ಎಸ್ಪಿ ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈ ಎಸ್‍ಪಿ ಜಯಕುಮಾರ್ ಸುದ್ದಿಗೋಷ್ಟಿ ಯಲ್ಲಿ ಹಾಜರಿದ್ದರು.

Translate »