ಮನೆ ಮೇಲೆ ದಾಳಿ: ಗಾಂಜಾ, ಅಕ್ರಮ ಮದ್ಯ ವಶ
ಚಾಮರಾಜನಗರ

ಮನೆ ಮೇಲೆ ದಾಳಿ: ಗಾಂಜಾ, ಅಕ್ರಮ ಮದ್ಯ ವಶ

September 28, 2018

ಕೊಳ್ಳೇಗಾಲ:  ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅಕ್ರಮ ವಾಗಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಪಿ. ಕೆಂಪೇಗೌಡ ಎಂಬಾತನಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮನೆಯಲ್ಲಿ ಅಕ್ರಮವಾಗಿ ಸಂಸ್ಕರಿಸಿ ಇಡಲಾಗಿದ್ದ 60 ಸಾವಿರ ರೂ. ಮೌಲ್ಯದ ಗಾಂಜಾ ಅಲ್ಲದೆ ಅಕ್ರಮವಾಗಿ ಇಟ್ಟುಕೊಂಡಿದ್ದ 4176 ರೂ ಮೌಲ್ಯದ ವಿವಿಧ ಬ್ರಾಂಡಿನ ಮದ್ಯದ ಬಾಟಲಿ ಹಾಗೂ ಟೆಟ್ರಾಪ್ಯಾಕ್‍ಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿ ಕೆಂಪೇಗೌಡ ದಾಳಿಯ ವೇಳೆ ಪರಾರಿಯಾಗಿದ್ದು ಈತನ ಪತ್ತೆಗೆ ಕ್ರಮವಹಿಸಲಾಗಿದೆ. ಎನ್.ಡಿ.ಪಿ.ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ಚಾಮರಾಜನಗರ ಅಬಕಾರಿ ಉಪ ಆಯುಕ್ತ ಎ.ಎಲ್. ನಾಗೇಶ್ ಮಾರ್ಗದರ್ಶನದಲ್ಲಿ ಮೈಸೂರು ವಿಭಾಗದ ಅಬಕಾರಿ ಅಧೀಕ್ಷಕ ಡಿ. ನಾಗೇಶ್ ಕುಮಾರ್, ಉಪಅಧೀಕ್ಷಕ ಗಂಗಾಧರ್ ಹೆಚ್.ಮುದೆಣ್ಣವರ್, ನಿರೀಕ್ಷಕರಾದ ಎ.ಎ. ಮುಜಾವರ್, ಕೆ.ವಿ. ಲೋಹೀತ್, ಅರಣ್ಯ ಅಧಿಕಾರಿಗಳಾದ ಮಹೇಶ್, ನಾಗಪ್ಪ ಪಟ್ಟಾತ್ತರ್, ಅಬಕಾರಿ ಸಿಬ್ಬಂದಿ ರವಿಕುಮಾರ್, ಕೃಷ್ಣಮೂರ್ತಿ, ಪ್ರದೀಪ್, ಜಯಪ್ರಕಾಶ್, ಸುಂದ್ರಪ್ಪ, ವೀರತ್ತಪ್ಪ, ಮಂಜುನಾಥ್, ಮಹೇಶ್, ಆನಂದ್, ಹೇಮಂತ್, ಮೋಹನ್ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೆಂದು ಪ್ರಕಟಣೆ ತಿಳಿಸಿದೆ.

Translate »