ಎನ್.ಮಹೇಶ್ ವಿರುದ್ಧ ಮತ್ತೆ ಹರಿಹಾಯ್ದ ಪುಟ್ಟರಂಗಶೆಟ್ಟಿ
ಚಾಮರಾಜನಗರ

ಎನ್.ಮಹೇಶ್ ವಿರುದ್ಧ ಮತ್ತೆ ಹರಿಹಾಯ್ದ ಪುಟ್ಟರಂಗಶೆಟ್ಟಿ

September 28, 2018

ಚಾಮರಾಜನಗರ:  ಜಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ತಮ್ಮ ಸಂಪುಟ ಸಹೋದ್ಯೋಗಿ ಸಚಿವ ಎನ್.ಮಹೇಶ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

ಚಾಮರಾಜನಗರ ಮತ್ತು ಯಳಂದೂರು ಕೆರೆಗಳಿಗೆ ನೀರು ತುಂಬಿಸುವ ಕಾಮ ಗಾರಿ ಪರಿಶೀಲನೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್. ಮಹೇಶ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೆ ಸರ್ಕಾರವೇನೂ ಉರುಳುವುದಿಲ್ಲ. ಆದರೆ, ಕಾಂಗ್ರೆಸ್ ಕೈಕೊಟ್ಟರೆ ಮಹೇಶ್ ಸಚಿವ ಸ್ಥಾನ ಕಳೆದು ಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಕೋಮುವಾದಿ ಪಕ್ಷವನ್ನು ಹೊರಗಿಡ ಬೇಕೆಂಬ ಉದ್ದೇಶದಿಂದ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಎನ್.ಮಹೇಶ್ ಪಕ್ಷದಲ್ಲಿ ಅವರೊಬ್ಬರು ಮಾತ್ರ ಶಾಸಕರಾಗಿದ್ದು, ಅವರಿಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಿದೆ ಎಂದಿದ್ದಾರೆ. ಸರ್ಕಾರಲ್ಲಿದ್ದುಕೊಂಡೇ ಕಾಂಗ್ರೆಸ್‍ನ್ನು ಕಿತ್ತು ಹಾಕುತ್ತೇನೆ ಎಂದು ಹೇಳಿದರೆ ಸುಮ್ಮನಿರಲು ಸಾಧ್ಯವೆ? ಎಂದು ಪ್ರಶ್ನಿಸಿದ ಅವರು, ಮಹೇಶ್ ರಾಜೀನಾಮೆ ಕೊಟ್ಟು ಹೋಗಲಿ ಸರ್ಕಾರ ಅದ್ಹೇಗೆ ಬೀಳುತ್ತದೆ ನೋಡೋಣ ಎಂದು ಸವಾಲೆಸೆದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಇರುವ ಅವರು ಸಿದ್ಧಾಂತಕ್ಕೆ ತಕ್ಕಂತೆ ನಡೆಯಬೇಕು ಎಂದರು.

Translate »