ಅರಸೀಕೆರೆ: ಸಂಸ್ಕಾರಯುತ ಜೀವನದ ಕೊರತೆಯಿಂದ ಇಂದಿನ ಆಧುನೀಕತೆಯ ಬದುಕಿನಲ್ಲಿ ಮನುಷ್ಯ ಸುಖ, ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ, ಧಾರ್ಮಿಕ ಕೇಂದ್ರ ಗಳ ಸತ್ಕಾರ್ಯಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಶಾಂತಿಯನ್ನು ಪಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಕಣಕಟ್ಟೆ ಹೋಬಳಿ ಬೊಮ್ಮಸಂದ್ರ ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರು ಆಯೋಜಿಸಿದ್ದ ಗ್ರಾಮ ದೇವರು ಚನ್ನಬಸವೇಶ್ವರ ಸ್ವಾಮಿ ದಿವ್ಯ ರಥೋತ್ಸವ ನಿಮಿತ್ತ ಜಂಪೋತ್ಸವ ಹಾಗೂ ಕೊಂಡೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ…
ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಿಶ್ವ ಭೂ ದಿನಾಚರಣೆಯಲ್ಲಿ ನ್ಯಾ.ನಿರ್ಮಲ ಅಭಿಮತ
April 24, 2019ಅರಸೀಕೆರೆ: ಪರಿಸರ ಮತ್ತು ಅಂತರ್ಜಲ ಸಂರಕ್ಷಣೆಯಂತಹ ಮಹ ತ್ಕಾರ್ಯಗಳಿಗೆ ಮುಂದಾದರೇ ಸಮಾನ ಮನಸ್ಕರು ಸಹಕಾರ ನೀಡುತ್ತಾರೆ. ಇದ ರಿಂದ ನಮ್ಮ ಪ್ರಯತ್ನ ಯಶಸ್ವಿಯಾಗ ಲಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಾ ಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀ ಶರೂ ಆದ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಹೇಳಿದರು. ತಾಲೂಕಿನ ಬಾಣಾವರ ಗ್ರಾಮದ ಅರ ಸನ ಭಾವಿ ಸಮೀಪವಿರುವ ಕಲ್ಯಾಣಿ ಬಳಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,…
ಜಿಲ್ಲೆಯಲ್ಲಿ ಅರ್ಥಪೂರ್ಣ ವಿಶ್ವ ಭೂ ದಿನಾಚರಣೆಖಾಸಗಿ ವಾಹನ ಬಿಟ್ಟು ಕಾಲ್ನಡಿಗೆಯಲ್ಲಿ ಕಚೇರಿಗೆ ಆಗಮಿಸಿದ ಅಧಿಕಾರಿಗಳು, ಪರಿಸರ ಸಂರಕ್ಷಣೆಗಾಗಿ ಜಾಗೃತಿ ಜಾಥಾ
April 22, 2019ಹಾಸನ: ನಗರದಲ್ಲಿ ಸೋಮ ವಾರ ಜಿಲ್ಲಾಡಳಿತ, ಹಸಿರು ಭೂಮಿ ಪ್ರತಿಷ್ಠಾನ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗ ದಿಂದ ಅರ್ಥಪೂರ್ಣವಾಗಿ ವಿಶ್ವ ಭೂ ದಿನ ಆಚರಿಸಲಾಯಿತು. ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿ ಕಾರಿ ಕಚೇರಿಯವರೆಗೆ ಪರಿಸರ ಕಾಳಜಿ ಸಾರುವ ಹಾಗೂ ವಾಯುಮಾಲಿನ್ಯ ನಿಯಂ ತ್ರಣದ ಅನಿವಾರ್ಯತೆ ತಿಳಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಗೃತಿ ಜಾಥಾ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣ ದಿಂದ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸೈಕಲ್ ಜಾಥಾಕ್ಕೆ ಜಿಲ್ಲಾ…
ಪರಿಸರ ಸಂರಕ್ಷಣೆಗೆ ಕೈಜೋಡಿಸಲು ಸಲಹೆ
April 22, 2019ಬೇಲೂರು: ಪಟ್ಟಣದ ಲೋಕೋ ಪಯೋಗಿ ಇಲಾಖೆಯ ವಸತಿಗೃಹದಲ್ಲಿ ಸೋಮವಾರ ಪಟ್ಟಣದ ದೇಶಭಕ್ತರ ಬಳಗ ದಿಂದ ವಿಶ್ವ ಭೂ ದಿನ ಆಚರಿಸಲಾಯಿತು. ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿದು ಕಾಡು ನಾಶ ಮಾಡು ತ್ತಿರುವುದರಿಂದ ಭೂಮಿ ಬರಡಾಗಿದೆ. ಮರ ಗಳು ತನ್ನ ಬೇರಿನಿಂದ ನೀರಿನ ಅಂಶ ವನ್ನು ಹಿಡಿದಿಟ್ಟುಕೊಂಡು ಹೊರಬಿಡುತ್ತ್ತಿದೆ ಇದ್ದರಿಂದಾಗಿ ಮಾತ್ರ ಜಲ ಮೂಲ ಉಳಿಯುತ್ತಿದೆ. ಪ್ರತಿಯೊಬ್ಬರೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಈಗಾಗಲೇ ಎಲ್ಲೆಡೆ…
2.5 ಲಕ್ಷ ಮತಗಳಿಂದ ಗೆಲ್ಲುತ್ತೇನೆ: ಪ್ರಜ್ವಲ್ ವಿಶ್ವಾಸ
April 22, 2019ಹಾಸನ: ಕಾರ್ಯಕರ್ತರು ಹಾಗೂ ಮುಖಂಡರ ವರದಿ ಪ್ರಕಾರ 2.5 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲು ತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾ ಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 10 ತಿಂಗಳ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮನ್ನು ಕೈ ಹಿಡಿಯಲಿವೆ ಎಂದರು. ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯ ವಿಲ್ಲ. ಬಿಜೆಪಿಯಲ್ಲಿ ಒಡಕಿಲ್ಲವೇ?…
ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದಲು ಸಲಹೆ
April 22, 2019ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಸ್ಪಷ್ಟ ಗುರಿ ಹಾಗೂ ಅದಮ್ಯ ಆತ್ಮವಿಶ್ವಾಸವಿರಬೇಕು ಎಂದು ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಲ್.ಶಿವಕುಮಾರ್ ಹೇಳಿದರು. ತಾಲೂಕಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ನಡುವಿನ ಸಂಬಂಧಗಳಿಗೆ ವಿಶೇಷ ಅರ್ಥವಿದೆ, ಆಚಾರ್ಯ ದೇವೋಭವ ಎಂಬ ಮಾತಿನಂತೆ ಗುರುವಿನಲ್ಲಿ ಭಗವಂತನ ಸ್ವರೂಪವನ್ನು ಕಾಣುವ ನಮ್ಮ ದೇಶದಲ್ಲಿ ಈ…
ಲೋಕಸಭಾ ಚುನಾವಣೆ ಇಂದು ಮತದಾನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
April 17, 2019ಹಾಸನ: ಲೋಕಸಭಾ ಚುನಾ ವಣೆ ಇಂದು ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲು ಜಿಲ್ಲಾ ಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾ ವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಬುಧವಾರ ಎಲ್ಲಾ ವಿಧಾನಸಭಾ ಕ್ಷೇತ್ರವಾರು ರ್ಯಾಂಡ ಮೈಜೇಷನ್ ಪ್ರಕ್ರಿಯೆ ನಡೆಯಿತು. ಎಲ್ಲಾ ಚುನಾವಣಾ ಅಧಿಕಾರಿ, ಸಿಬ್ಬಂದಿ ಗಳು ಮತಯಂತ್ರ ಹಾಗೂ ವಿ.ವಿ.ಪ್ಯಾಟ್…
ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ
April 17, 2019ಅರಸೀಕೆರೆ: ಲೋಕಸಭಾ ಚುನಾವಣೆ ಗುರುವಾರ ನಡೆ ಯಲಿರುವ ಹಿನ್ನೆಲೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ಅವರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬುಧವಾರ ವಿತರಣೆ ಮಾಡಲಾಯಿತು. ತಾಲೂಕಿನ 276 ಮತಗಟ್ಟೆಗಳಿಗೆ 1,216 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ನಗರದ ಸಂತ ಮೇರಿಯ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿರುವ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರಕ್ಕೆ ಆಗಮಿಸಿ ಮತಯಂತ್ರಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದರು. ಕೆಲವೊಂದು ಮಾಹಿತಿ ಗೊತ್ತಿಲ್ಲದ ಹಿನ್ನೆಲೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ತಮ್ಮಗೆ ನಿಯೋಜನೆಗೊಳಿಸಿದ್ದ ಸ್ಥಳಕ್ಕೆ ತೆರಳಿದರು. ಚುನಾವಣೆ…
ಹೊಯ್ಸಳರ ನಾಡಿನಲ್ಲಿ ಚಲುವಚೆನ್ನಿಗನ ವಿಜೃಂಭಣೆಯ ರಥೋತ್ಸವ
April 17, 2019ಬೇಲೂರು: ಹೊಯ್ಸಳರ ನಾಡಾದ ಬೇಲೂರಿನಲ್ಲಿ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಬುಧ ವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆ ಯಿಂದ ನಾಡ ರಥೋತ್ಸವ ನೆರವೇರಿತು. ರಥವನ್ನು ದೇವಾಲಯದ ಮೂರು ದಿಕ್ಕುಗಳಲ್ಲಿಯೂ ಎಳೆದು ರಥದ ಮನೆಯ ಸ್ವಸ್ಥಾನದ ಸಮೀಪ ನಿಲ್ಲಿಸಲಾಯಿತು. ಈ ಮೂಲಕ ಸಾವಿರಾರು ಜನರು ನಾಡಿನ ರಥೋತ್ಸವಕ್ಕೆ ಸಾಕ್ಷೀಕರಿಸಿದರು. ಎರಡನೇ ದಿನವಾದ ಬುಧವಾರ ದಂದು ನಾಡ ರಥೋತ್ಸವವು ವಿಶೇಷ ವಾಗಿ ಗ್ರಾಮೀಣ ಪ್ರದೇಶದವರಿಗೆ ಮೀಸ ಲಾದ ರಥೋತ್ಸವವಾಗಿದೆ. ಪಟ್ಟಣದ ವಿಷ್ಣು ಸಮುದ್ರದ ಕಲ್ಯಾಣಿ…
ಸಂಭ್ರಮದ ಮಹಾವೀರ ಜಯಂತಿ ಆಚರಣೆ
April 17, 2019ಶ್ರವಣಬೆಳಗೊಳ: ಪಾರಂ ಪರಿಕ ನಂಬಿಕೆಗಳನ್ನು ಇಟ್ಟುಕೊಂಡು, ತನ್ನ ಧರ್ಮದ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪರಿಪಾಲನೆ ಮಾಡುತ್ತ ವಿಶ್ವದ ಅನಂತ ಸತ್ಯಗಳನ್ನು ಪ್ರತಿಪಾದಿಸುತ್ತಿರುವ ಅಹಿಂಸಾ ಧರ್ಮವೇ ಜೈನ ಧರ್ಮ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಶ್ರವಣಬೆಳಗೊಳದ ಜೈನ ಮಠದ ಆವರಣದಲ್ಲಿರುವ ಮಠದ ಬಸದಿಯಲ್ಲಿ ಬುಧವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಮಹತ್ವದ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಗೌತಮ ಬುದ್ಧನ ಸಮಕಾಲೀನರಾಗಿದ್ದು, ‘ಬದುಕು-ಬದುಕಲು ಬಿಡು’ ಎಂಬ…