ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ
ಹಾಸನ

ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ

April 17, 2019

ಅರಸೀಕೆರೆ: ಲೋಕಸಭಾ ಚುನಾವಣೆ ಗುರುವಾರ ನಡೆ ಯಲಿರುವ ಹಿನ್ನೆಲೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ಅವರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬುಧವಾರ ವಿತರಣೆ ಮಾಡಲಾಯಿತು.

ತಾಲೂಕಿನ 276 ಮತಗಟ್ಟೆಗಳಿಗೆ 1,216 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ನಗರದ ಸಂತ ಮೇರಿಯ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿರುವ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರಕ್ಕೆ ಆಗಮಿಸಿ ಮತಯಂತ್ರಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದರು. ಕೆಲವೊಂದು ಮಾಹಿತಿ ಗೊತ್ತಿಲ್ಲದ ಹಿನ್ನೆಲೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ತಮ್ಮಗೆ ನಿಯೋಜನೆಗೊಳಿಸಿದ್ದ ಸ್ಥಳಕ್ಕೆ ತೆರಳಿದರು.

ಚುನಾವಣೆ ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ಕರೆದೊಯ್ಯಲು 41 ಕೆಎಸ್‍ಆರ್‍ಟಿಸಿ ಬಸ್, 10 ಮ್ಯಾಕ್ಸಿ ಕ್ಯಾಬ್ ಮತ್ತು 14 ಜೀಪ್ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು. 276 ಮತಗಟ್ಟೆಗಳಲ್ಲಿ 64 ಸೂಕ್ಷ್ಮ, 3 ಅತಿ ಸೂಕ್ಷ್ಮ (ತಾಲೂಕಿನ 65, 68 ಮತ್ತು 132 ಸಂಖ್ಯೆ) ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಈ ಬಾರಿ ವಿಶೇಷವಾಗಿ ಪ್ರತೀ ಮತಗಟ್ಟೆಯಲ್ಲೂ ವಯೋ ವೃದ್ಧರು, ಅಂಗವಿಕಲರಿಗಾಗಿ ವ್ಹೀಲ್‍ಛೇರ್ ವ್ಯವಸ್ಥೆ ಹಾಗೂ ಅಂಧರಿ ಗಾಗಿ ವಿಶೇಷವಾಗಿ ಬ್ರೈಲ್ ಬ್ಯಾಲೆಟ್ ಪೇಪರ್‍ಗಳ ವ್ಯವಸ್ಥೆ ಮಾಡ ಲಾಗಿದೆ. ನಗರದ ಹೋಯ್ಸಳ ನಗರದಲ್ಲಿರುವ ಗೌರಮ್ಮ ಮತಗಟ್ಟೆ ಸಂಖ್ಯೆ 131 ಅನ್ನು ‘ಸಖಿ’ ಮತಗಟ್ಟೆಯಾಗಿ ಸ್ಥಾಪಿಸಲಾಗಿದೆ.

ಚುನಾವಣಾ ಕರ್ತವ್ಯಗಳನ್ನು ಮಹಿಳೆಯರೇ ನಿರ್ವಹಿಸಲಿ ದ್ದಾರೆ ಮತ್ತು ಮಹಿಳೆಯರು ಮಾತ್ರ ಮತ ಚಲಾಯಿಸಲಿದ್ದಾರೆ. ಜೊತೆಗೆ ಪ್ರತೀ ಮತಗಟ್ಟೆಗಳಲ್ಲಿ ಅವರ ಸಹಾಯಕ್ಕಾಗಿ ಒಬ್ಬರನ್ನು ಸ್ವಯಂ ಸೇವಕರಾಗಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಪೊಲೀಸ್ ಸಿಬ್ಬಂದಿ ಜೊತೆಗೆ, ಹೋಂಗಾಡ್ರ್ಸ್ ಹಾಗೂ ಪ್ಯಾರಾ ಮಿಲಿಟರಿ ಪಡೆಯನ್ನು ಅಗತ್ಯಕ್ಕೆ ತಕ್ಕಂತೆ ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಗಳು ನಡೆ ದಿದ್ದು, ತಾಲೂಕಿನಲ್ಲಿರುವ 2,10,648 ಮತದಾರರಲ್ಲಿ 10,5817 ಪುರುಷ, 10,4,823 ಮಹಿಳಾ ಹಾಗೂ 8 ಇತರೆ ಮತದಾರರು ಮತ ಚಲಾಯಿಸುವುದರ ಮೂಲಕ ಲೋಕಸಭಾ ಅಭ್ಯರ್ಥಿಗಳ ಹಣೆಬರಹವನ್ನು ಬರೆಯಲಿದ್ದಾರೆ.

ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಸಂತೋಷ್ ಕುಮಾರ್, ಉಪತಹಸೀಲ್ದಾರ್ ಪಾಲಾಕ್ಷಯ್ಯ, ಶಿರಸ್ತೆದಾರ್ ಶಿವಶಂಕರ್, ಆಹಾರ ಶಿರಸ್ತೆದಾರ್ ಬಾಲಚಂದ್ರು, ಚುನಾವಣಾ ಶಿರಸ್ತೆದಾರ್ ರವಿ, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ತಾಪಂ ಇಓ ಕೃಷ್ಣಮೂರ್ತಿ, ನಗರಸಭಾ ಆಯುಕ್ತ ಛÀಲಪತಿ, ಬಿಇಓ ಮೋಹನ್‍ಕುಮಾರ್, ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಸಿದ್ದರಾಮೇಶ್, ನಗರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ರಂಗಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಯ್ಕ್, ರಾಜಸ್ವ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Translate »