ಲೋಕಸಭಾ ಚುನಾವಣೆ ಇಂದು ಮತದಾನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಹಾಸನ

ಲೋಕಸಭಾ ಚುನಾವಣೆ ಇಂದು ಮತದಾನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

April 17, 2019

ಹಾಸನ: ಲೋಕಸಭಾ ಚುನಾ ವಣೆ ಇಂದು ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲು ಜಿಲ್ಲಾ ಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾ ವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಬುಧವಾರ ಎಲ್ಲಾ ವಿಧಾನಸಭಾ ಕ್ಷೇತ್ರವಾರು ರ್ಯಾಂಡ ಮೈಜೇಷನ್ ಪ್ರಕ್ರಿಯೆ ನಡೆಯಿತು.

ಎಲ್ಲಾ ಚುನಾವಣಾ ಅಧಿಕಾರಿ, ಸಿಬ್ಬಂದಿ ಗಳು ಮತಯಂತ್ರ ಹಾಗೂ ವಿ.ವಿ.ಪ್ಯಾಟ್ ಗಳೊಂದಿಗೆ ತಮಗೆ ನಿಯೋಜಿಸಿದ್ದ ಮತ ಗಟ್ಟೆಗಳನ್ನು ತಲುಪಿದ್ದಾರೆ. ಮತದಾನ ಪ್ರಕ್ರಿ ಯೆಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಈ ಬಾರಿ ಚುನಾವಣಾ ಸಿಬ್ಬಂದಿಗಳ ಯೋಗ ಕ್ಷೇಮದ ಬಗ್ಗೆಯೂ ಒತ್ತು ನೀಡಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉತ್ತಮ ಉಪಹಾರ, ಉಟೋಪಚಾರಗಳ ವ್ಯವಸ್ಥೆ ಮಾಡಲಾ ಗಿದೆ. ಎಲ್ಲಾ ಸಿಬ್ಬಂದಿಗಳಿಗೆ ವ್ಯವಸ್ಥಿತ ತರಬೇತಿ ನೀಡಿ ಜೊತೆಗೆ ಬಿಸ್ಕೆಟ್, ಚಾಕೋಲೇಟ್, ಒ.ಆರ್.ಎಸ್ ಪುಡಿ, ಮಾತ್ರೆಗಳು, ಬ್ಯಾಂಡೇಜ್‍ಗೆ ಬೇಕಾದ ಬಟ್ಟೆಗಳನ್ನು ನೀಡಲಾಗಿದೆ.

ಇಂದು ಮಸ್ಟರಿಂಗ್ ಕೇಂದ್ರದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳಿಗೆ ಅಚ್ಚು ಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತು. ತರಬೇತಿ ವ್ಯವಸ್ಥೆ ಬಗ್ಗೆಯೂ ಚುನಾವ ಣೆಗೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್ ಸಿಂಗ್ ರಾಥೋಡ್ ಅವರು ವಿವಿಧ ತಾಲೂಕುಗಳ ರ್ಯಾಂಡಮೈಜೇಷನ್ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ಲೋಪಗಳಿಲ್ಲದಂತೆ ಕರ್ತವ್ಯ ನಿರ್ವಹಿಸಿ ಒತ್ತಡಗಳಿಗೆ ಒಳಗಾಗದೆ ಕೆಲಸ ಮಾಡಿ ತುರ್ತು ಸಂದರ್ಭದಲ್ಲಿ 1950 ಸಹಾಯ ವಾಣಿಗೆ ಕರೆ ಮಾಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 2,235 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 421 ಸೂಕ್ಷ್ಮ, 23 ಅತೀ ಸೂಕ್ಷ್ಮ ಮತಗಟ್ಟೆ ಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆ ಕೇಂದ್ರಗಳಲ್ಲಿ ಅರೆಸೇನಾ ಪಡೆ ನಿಯೋ ಜನೆ ಜೊತೆಗೆ ವೀಡಿಯೋ ಚಿತ್ರೀಕರಣ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋಡ್ ತಿಳಿಸಿದರು.

ಹಾಸನದಲ್ಲಿ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ತಹಶೀ ಲ್ದಾರ್ ಶ್ರೀನಿವಾಸಯ್ಯ ಅವರು ಮಸ್ಟರಿಂಗ್ ಕಾರ್ಯ ನಡೆಸಿದರು.
ಮದ್ಯ ಮಾರಾಟ ನಿಷೇಧ: ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಸುಗಮ ವಾಗಿ ನಡೆಸುವ ಉದ್ದೇಶದಿಂದ ಏ.19 ಬೆಳಿಗ್ಗೆ 6 ಗಂಟೆವರೆಗೆ ಹಾಗೂ ಮೇ 22ರ ಮಧ್ಯರಾತ್ರಿ 12ರಿಂದ ಮೇ 24ರ ಬೆಳಿಗ್ಗೆ 6 ಗಂಟೆವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಲಾಗಿದೆ.

Translate »