ಕುರ್ಚಿಯಲ್ಲಿ ಕಾಡಾನೆ ದಾಳಿ: ಕಾರ್ಮಿಕನಿಗೆ ತೀವ್ರ ಗಾಯ
ಕೊಡಗು

ಕುರ್ಚಿಯಲ್ಲಿ ಕಾಡಾನೆ ದಾಳಿ: ಕಾರ್ಮಿಕನಿಗೆ ತೀವ್ರ ಗಾಯ

April 17, 2019

ಗೋಣಿಕೊಪ್ಪಲು: ಕಾಡಾನೆ ದಾಳಿಗೆ ತೋಟದ ಕಾರ್ಮಿಕ ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮ ದಲ್ಲಿ ನಡೆದಿದೆ. ಅಲ್ಲಿನ ತೋಟದ ಮನೆಯಲ್ಲಿ ವಾಸ ವಿರುವ ಪಂಜಿರಿ ಎರ ವರ ಮಾರ(65) ಗಾಯಾಳುವಾಗಿದ್ದು, ಕಾಲು ಹಾಗೂ ಕೈಗೆ ದೊಡ್ಡ ಮಟ್ಟದ ಗಾಯವಾಗಿದೆ. ಶ್ರೀ ಮಂಗಲ ಕರುಣಾ ಟ್ರಸ್ಟ್ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗೋಣಿಕೊಪ್ಪ ಸಮು ದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕುರ್ಚಿ ಗ್ರಾಮದ ಅಜ್ಜಮಾಡ ಸುಬ್ರಮಣಿ ಎಂಬು ವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದಾಳಿ ನಡೆದಿದ್ದು, ಎಡಗಾಲಿನ ತೊಡೆಯ ಭಾಗ ಸಂಪೂರ್ಣ ಸೀಳಿದೆ, ಎಡಗೈ ಕೂಡ ತಿವಿತಕ್ಕೆ ಒಳ ಗಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಮಾರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಕೋರೆಯಿಂದ ಸೀಳಿದ ಪರಿಣಾಮ ಎಡಗಾಲಿನ ತೊಡೆಯ ಭಾಗ ಸಂಪೂರ್ಣವಾಗಿ ಮೂಳೆ ಕಾಣುವಷ್ಟು ಗಾಯವಾ ಗಿದೆ. ಎಡಕೈ ಭುಜ ಭಾಗಕ್ಕೂ ಸೀಳಿದೆ. ಕೈ ಕೂಡ ಗಾಯವಾಗಿದೆ. ಶ್ರೀಮಂಗಲ ಕರುಣಾ ಟ್ರಸ್ಟ್ ಆರೋಗ್ಯ ಕೇಂದ್ರದಲ್ಲಿ ಡಾ. ಗೌತಂ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಅಧಿಕಾರಿ ವೀರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಾಳಿ ವಿಚಾರ ತಿಳಿಯುತ್ತಿದ್ದಂತೆ ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಮುಖಂಡ ರುಗಳು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡರು. ಚರ್ಚೆ ನಡೆಸಿದ ರೈತ ಮುಖಂಡರುಗಳು, ತುರ್ತಾಗಿ ಚಿಕಿ ತ್ಸೆಗೆ ಪರಿಹಾರ ಧನ ನೀಡುವಂತೆ ಒತ್ತಾಯಿಸಿ ದರು. ನಂತರ ಗಾಯಾಳು ಮಾರ ಅವರ ಮಗ ಸಿದ್ದ ಅವರಿಗೆ ವಲಯ ಅಧಿಕಾರಿ ವೀರೇಂದ್ರ 10 ಸಾವಿರ ಚಿಕಿತ್ಸಾ ವೆಚ್ಚ ವಿವರಿಸಿದರು.
ಒತ್ತಾಯ: ಕುರ್ಚಿ ಭಾಗದಲ್ಲಿ ಕಾಡಾನೆ ಬಗ್ಗೆ ನಿಗಾ ವಹಿಸಲು ಅರಣ್ಯ ಇಲಾಖೆ ನೇಮಿಸಿರುವ ಸಿಬ್ಬಂದಿ ಮನೋಹರ್ ಸರಿಯಾಗಿ ಕಾರ್ಯನಿರ್ವ ಹಿಸದೇ ಇರುವುದೇ ದಾಳಿಗೆ ಪ್ರಮುಖ ಕಾರಣ ಎಂದು ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಆರೋಪಿಸಿದರು. ಇಲಾಖೆ ಅವರ ಸ್ಥಾನಕ್ಕೆ ಬೇರೆಯ ವರನ್ನು ನೇಮಕ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ರೈತ ಮುಖಂಡರುಗಳಾದ ಅಯ್ಯಮಾಡ ಹ್ಯಾರಿ ಸೋಮೇಶ್, ಮಚ್ಚಮಾಡ ರಂಜಿ, ಚಂಗುಲಂಡ ರಾಜಪ್ಪ, ಶ್ರೀಮಂಗಲ ಗ್ರಾಪಂ ಸದಸ್ಯ ಅಜ್ಜಮಾಡ ಜಯ ಇದ್ದರು.

Translate »