ಕೊಡಗು ಜಿಲ್ಲಾದ್ಯಂತ ಮತದಾನಕ್ಕೆ ಸಜ್ಜು
ಕೊಡಗು

ಕೊಡಗು ಜಿಲ್ಲಾದ್ಯಂತ ಮತದಾನಕ್ಕೆ ಸಜ್ಜು

April 17, 2019

ಮಡಿಕೇರಿ: ದೇಶದ 17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೊಡಗು ಜಿಲ್ಲೆ ಸಲಕ ರೀತಿಯಲ್ಲಿ ಸನ್ನದ್ಧಗೊಂಡಿದ್ದು, ಮತದಾರನ ನಿರ್ಣಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಅಧಿಕಾರಿ ವರ್ಗ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ, ಸುಡುವ ಬಿಸಿಲಿನ ನಡುವೆಯೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಬೆವರು ಹರಿಸುವ ಕಸರತ್ತನ್ನು ಮಾಡಿ ಮುಗಿಸಿದ್ದಾರೆ.

ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ 269 ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ದಲ್ಲಿ 274 ಎಲೆಕ್ಷನ್ ಬೂತ್‍ಗಳು ಸೇರಿ ದಂತೆ ಜಿಲ್ಲೆಯಲ್ಲಿರುವ ಒಟ್ಟು 543 ಮತ ಗಟ್ಟೆಗಳಿಗೆ ಮತಯಂತ್ರಗಳನ್ನು ಚುನಾವಣಾ ಸಿಬ್ಬಂದಿಗಳಿಗೆ ವಿತರಿಸಿ, ಬಿಗಿ ಭದ್ರತೆಯಲ್ಲಿ ಆಯಾಯ ಮತಗಟ್ಟೆಗಳಿಗೆ ರವಾನಿ ಸಲಾಗಿದೆ. 21ನೇ ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ 8 ಕ್ಷೇತ್ರ ಗಳಲ್ಲಿ ಏ.18ರ ಬೆಳಿಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕ್ಷೇತ್ರದ ಚುನಾವಣಾ ಅಖಾಡದಲ್ಲಿರುವ ಒಟ್ಟು 22 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಪ್ರಭು ಬರೆ ಯಲಿದ್ದಾನೆ. ಕೊಡಗು ಜಿಲ್ಲೆಯಲ್ಲಿ 2,18, 867 ಪುರುಷ ಮತ್ತು 2,21,838 ಮತ ದಾರರು ಸೇರಿದಂತೆ ಒಟ್ಟು 4,40,730 ಮತದಾರರಿದ್ದು, ದೇಶದ ಭವಿಷ್ಯಕ್ಕೆ ಬುನಾ ದಿಯಾಗಬಲ್ಲ ತಮ್ಮ ಲೋಕಸಭಾ ಕ್ಷೇತ್ರದ ನೆಚ್ಚಿನ ಅಭ್ಯರ್ಥಿಯ ಪರ ಮತ ಚಲಾಯಿ ಸಲಿದ್ದಾರೆ. ಮತದಾರರು ಯಾವ ಅಭ್ಯ ರ್ಥಿಗೆ ಆಶೀರ್ವದಿಸಿದ್ದಾರೆ ಎನ್ನುವ ರೋಚಕ ರಹಸ್ಯ ಮೇ.23ರಂದು ಬಹಿರಂಗ ವಾಗಲಿದ್ದು, ಅಲ್ಲಿಯವರೆಗೆ ಚುನಾವಣೆಯ ಕೌತುಕವೂ ಮುಂದುವರಿಯಲಿದೆ.

ಬಿಗಿ ಭದ್ರತೆ: ಕೊಡಗು-ಮೈಸೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿ ದಂತೆ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಚುನಾವಣೆ ಕರ್ತವ್ಯಕ್ಕೆಂದು 3 ಪೊಲೀಸ್ ಉಪ ಅಧೀಕ್ಷಕರು, 36 ವೃತ್ತ ನಿರೀ ಕ್ಷಕರು, 1200 ಪೊಲೀಸ್ ಸಿಬ್ಬಂದಿ, ಗಡಿ ಭದ್ರತಾ ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ರಾಜ್ಯ ಪೊಲೀಸ್ ಮೀಸಲು ಪಡೆ, 500 ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸ ಲಾಗಿದೆ. 49 ಪೊಲೀಸ್ ಅಧಿಕಾರಿ ಗಳನ್ನು ಸೆಕ್ಟರ್ ಅಧಿಕಾರಿಗಳಾಗಿ ಚುನಾ ವಣಾ ಕರ್ತವ್ಯಕ್ಕೆ ನೇಮಿಸಲಾಗಿದೆ. ಅದ ರೊಂದಿಗೆ ಕೊಡಗು ಜಿಲ್ಲಾ ನಕ್ಸಲ್ ನಿಗ್ರಹ ದಳ ನಕ್ಸಲ್ ಪೀಡಿತ ಗ್ರಾಮಗಳು ಮತ್ತು ಈ ಹಿಂದೆ ನಕ್ಸಲರು ಪ್ರತ್ಯಕ್ಷರಾದ ಸ್ಥಳ ಗಳು ಮತ್ತು ಜಿಲ್ಲೆಯ ಅರಣ್ಯ ಗಡಿ ಗಳಲ್ಲಿ ನಿರಂತರ ಕೂಂಬಿಂಗ್ ಕಾರ್ಯ ನಡೆಸಲಿದ್ದಾರೆ.

ಮಾತ್ರವಲ್ಲದೇ ಸೂಕ್ಷ್ಮ, ಅತೀ ಸೂಕ್ಷ್ಮ ಹಾಗೂ ಆಯಕಟ್ಟಿನ ಮತ ಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಅರೆ ಸೇನಾ ಪಡೆಯ ಸಿಬ್ಬಂದಿಗಳು ಪ್ರತಿ ಚಲನ ವಲನ ಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಜಿಲ್ಲೆಯ ಗಡಿ ಭಾಗ ಮತ್ತು ಜಿಲ್ಲೆ ಯನ್ನು ಬೆಸೆಯುವ ಕಡೆಗಳಲ್ಲಿ ಈಗಾ ಗಲೇ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ತಪಾಸಣೆ ಕಾರ್ಯವನ್ನು ಬಿರುಸು ಗೊಳಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ನಡೆಸಿ, ನಿರ್ಭೀತಿ ಯಿಂದ ಮತದಾರರು ಮತ ಚಲಾಯಿ ಸುವಂತೆ ಅಭಯವನ್ನೂ ನೀಡಿದ್ದಾರೆ.

Translate »