ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತೆ
ಕೊಡಗು

ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತೆ

April 17, 2019

ವಿರಾಜಪೇಟೆ:ನಾಳೆ ನಡೆಯುವ ಲೋಕಸಭಾ ಚುನಾವಣೆಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ 274 ಮತಗಟ್ಟೆಗಳಿಗೆ 2,500 ಅಧಿಕಾರಿಗಳು, 550 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, 127 ವಾಹನಗಳನ್ನು ನಿಯೋಜಿಸಲಾಗಿದೆ.

ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಚುನಾವಣಾ ಮತಗಟ್ಟೆಯ ಸಾಮಾಗ್ರಿಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿದ ಚುನಾವಣಾಧಿಕಾರಿ ತಹಶಿಲ್ದಾರ್ ಬಿ.ಎಂ.ಗೋವಿಂದರಾಜು ಮಾತನಾಡಿ, 274 ಮತಗಟ್ಟೆಗಳಿಗೆ 1,350 ಪೊಲಿಂಗ್ ಅಧಿಕಾರಿಗಳು, ಸೂಕ್ಷ್ಮ-ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಯಾವುದೇ ಘಟನೆಗಳು ನಡೆಯದಂತೆ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು. ವಿಕಲಚೇತನರು ಮತದಾನ ಮಾಡಲು ವಾಹನ ಮತ್ತು ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಮತದಾನಕ್ಕಾಗಿ 119 ಮಾರ್ಗಗಳಿಗೆ 48 ಕೆಎಸ್‍ಆರ್‍ಟಿಸಿ ಬಸ್ಸುಗಳು, ಮಿನಿ ಬಸ್ಸು 35 ಮತ್ತು 44 ಜೀಪುಗಳನ್ನು ನೇಮಿಸ ಲಾಗಿದ್ದು. ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಗೋವಿಂದರಾಜು ತಿಳಿಸಿದರು. ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೊಬಸ್ತ್ ವ್ಯೆವಸ್ಥೆ ಮಾಡಲಾಗಿದ್ದು ಡಿವೈಎಸ್‍ಪಿ 3, ಸರ್ಕಲ್ ಇನ್ಸ್‍ಪ್ಯೆಕ್ಟರ್ 6, ಸಬ್‍ಇನ್ಸ್‍ಪ್ಯೆಕ್ಟರ್ 5, ಎಎಸ್‍ಐ 30, ಪೊಲೀಸ್ ಸಿಬ್ಬಂದಿಗಳು 300, ಹೋಮ್ ಗಾರ್ಡ್ 200, ಕೆಎಸ್‍ಆರ್‍ಪಿ 1, ಡಿಆರ್ 5 ಮತ್ತು ಮೇಲುಸ್ತುವಾರಿ ಡಿವೈಎಸ್‍ಪಿ 3, ಗಡಿ ಭಾಗವಾದ ಕುಟ್ಟ, ಶ್ರೀಮಂಗಲ ಮತ್ತು ಮಾಕುಟ್ಟದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿರಾಜಪೇಟೆ ಡಿವೈಎಸ್‍ಪಿ ನಾಗಪ್ಪ ತಿಳಿಸಿದರು.

Translate »