ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದಲು ಸಲಹೆ
ಹಾಸನ

ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದಲು ಸಲಹೆ

April 22, 2019

ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಸ್ಪಷ್ಟ ಗುರಿ ಹಾಗೂ ಅದಮ್ಯ ಆತ್ಮವಿಶ್ವಾಸವಿರಬೇಕು ಎಂದು ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಲ್.ಶಿವಕುಮಾರ್ ಹೇಳಿದರು.

ತಾಲೂಕಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ನಡುವಿನ ಸಂಬಂಧಗಳಿಗೆ ವಿಶೇಷ ಅರ್ಥವಿದೆ, ಆಚಾರ್ಯ ದೇವೋಭವ ಎಂಬ ಮಾತಿನಂತೆ ಗುರುವಿನಲ್ಲಿ ಭಗವಂತನ ಸ್ವರೂಪವನ್ನು ಕಾಣುವ ನಮ್ಮ ದೇಶದಲ್ಲಿ ಈ ಸಂಬಂಧ ಅತ್ಯಂತ ಪವಿತ್ರವಾದದ್ದು ಎಂದು ತಿಳಿಸಿದರು.

ಸ್ನಾತಕೋತ್ತರ ವಿಭಾಗದ ಸಂಯೋಜಕ ಪೆÇ್ರ.ಮೋವಿನಕುಮಾರ್ ಮಾತನಾಡಿ, ಸ್ನಾತಕೋತ್ತರ ವಿಭಾಗ ಪ್ರತಿ ವರ್ಷವೂ ಉತ್ತಮ ಫಲಿತಾಂಶ ಪಡೆಯುತ್ತಿದ್ದು, ಈ ಬಾರಿಯೂ ಪ್ರತಿಶತ ಫಲಿತಾಂಶವನ್ನು ಪಡೆಯುವಂತೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ವಿನಾಯಕನ ವಿಗ್ರಹವನ್ನು ನೆನಪಿನ ಕಾಣಿಕೆಯಾಗಿ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಬೋಧಕೇತರ ಸಿಬ್ಬಂದಿ ಪೂರ್ಣಿಮಾ, ರೂಪಾ, ಗೀತಾ, ಪ್ರಕಾಶ್‍ಕುಮಾರ್, ಮಧುಸೂದನ್, ರಘು, ಲಕ್ಕೇಗೌಡ, ಪೂರ್ಣಿಮಾ.ಆರ್, ದಯಾನಂದ ಉಪಸ್ಥಿತರಿದ್ದರು.

Translate »