ಮೂವರು ಅರಣ್ಯ ಸಿಬ್ಬಂದಿ ಅಮಾನತು: ಎಸಿಎಫ್, ಆರ್‍ಎಫ್‍ಓಗೆ ನೋಟೀಸ್ ಜಾರಿ
ಮೈಸೂರು

ಮೂವರು ಅರಣ್ಯ ಸಿಬ್ಬಂದಿ ಅಮಾನತು: ಎಸಿಎಫ್, ಆರ್‍ಎಫ್‍ಓಗೆ ನೋಟೀಸ್ ಜಾರಿ

April 22, 2019

ಮೈಸೂರು: ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯದಲ್ಲಿ ಮರಗಳ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವ ರನ್ನು ಅಮಾನತು ಮಾಡಿ, ಎಸಿಎಫ್ ಮತ್ತು ಆರ್‍ಎಫ್‍ಓಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.

ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿ ಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಮೇಟಿಕುಪ್ಪೆ ವಲಯದ ಸೋರೆ ಕುಪ್ಪೆ ಬೀಟ್‍ನ ಕಲ್ಲಹಳ್ಳ-ಗುಡಿಹಳ್ಳದ ಬಳಿ ಲಕ್ಷಾಂತರ ರೂ. ಮೌಲ್ಯದ 8 ರಿಂದ 10 ಸಾಗುವಾನಿ ಮರಗಳ 3 ದಿನಗಳ ಹಿಂದೆ ಕಡಿಯಲಾಗಿದೆ. ಸ್ಥಳದಲ್ಲಿದ್ದ ಸುಮಾರು 8 ರಿಂದ 10 ಅಡಿ ಉದ್ದದ, 2 ರಿಂದ 3 ಅಡಿ ಸುತ್ತಳತೆಯ 8 ಮರದ ತುಂಡು ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೆ, ಕೆಲ ದಿನಗಳ ಹಿಂದೆ ಅದೇ ವಲಯದ ಅಗಸನಹುಂಡಿ ವಿಭಾಗದ ಮೇಟಿಕುಪ್ಪೆ-2 ಬೀಟ್‍ನಲ್ಲಿ 5ರಿಂದ 6 ಸಾಗುವಾನಿ ಮರಗಳು ಕಳುವಾಗಿದ್ದವು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿತ್ತು. ಅಲ್ಲದೆ, ಸಿಬ್ಬಂದಿ ಶಾಮೀ ಲಾಗಿರುವ ಶಂಕೆಯೂ ವ್ಯಕ್ತವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿ ಗಣಿಸಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ನಾರಾಯಣ ಸ್ವಾಮಿ, ಪ್ರಕರಣದ ವರದಿಯನ್ನು ಮೇಲಾ ಧಿಕಾರಿಗಳಿಗೆ ನೀಡಿದ್ದರು. ಈ ಹಿನ್ನೆಲೆ ಯಲ್ಲಿ ಸೋರೆಕುಪ್ಪೆ ಗಸ್ತಿನ ಅರಣ್ಯ ರಕ್ಷಕ ಬಿ.ದಾನಶೇಖರ, ಮೇಟಿಕುಪ್ಪೆ ಗಸ್ತಿನ ಅರಣ್ಯ ರಕ್ಷಕ ಕೆ.ಪಿ.ರವಿಕುಮಾರ್ ಹಾಗೂ ಉಪವಲಯ ಅರಣ್ಯಾಧಿಕಾರಿ ಸಿ.ಎಂ. ಸಂಜಯ್‍ಕುಮಾರ್ ಅವರನ್ನು ಅಮಾ ನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಎಸಿಎಫ್ ಕೇಶವೇಗೌಡ ಹಾಗೂ ಆರ್‍ಎಫ್‍ಓ ಸಂತೋಷ್ ಮನೋಹರ್ ಹೂಗಾರ್ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.
ಮರಗಳವು ನಡೆದ ಸ್ಥಳಕ್ಕೆ ಸಮೀಪ ದಲ್ಲಿರುವ ಸಿದ್ದಾಪುರ ಮತ್ತು ಕೊತ್ತನಹಳ್ಳಿ ಕಳ್ಳಬೇಟೆ ತಡೆ ಶಿಬಿರದ ಕಾವಲುಗಾರರು ಹಾಗೂ ಕಲ್ಲಹಟ್ಟಿ ತನಿಖಾ ಠಾಣೆ ಸಮೀ ಪದಲ್ಲಿ ವಸತಿ ಗೃಹದಲ್ಲಿರುವ ಸಿಬ್ಬಂದಿ ಮರ ಕಡಿಯುತ್ತಿರುವುದನ್ನು ತಡೆಯುವಲ್ಲಿ ವಿಫಲವಾಗಿರುವುದರಿಂದ ಈ ಮೂರು ಸ್ಥಳಲ್ಲಿರುವ ಸಿಬ್ಬಂದಿ ವರ್ಗಾಯಿಸಲು ನಿರ್ಧರಿಸಲಾಗಿದೆ.

Translate »