ಶ್ರೀಲಂಕಾದಲ್ಲಿ ಸರಣಿ ಸ್ಫೋಟ
ಮೈಸೂರು

ಶ್ರೀಲಂಕಾದಲ್ಲಿ ಸರಣಿ ಸ್ಫೋಟ

April 22, 2019

ಕೊಲಂಬೋ (ಶ್ರೀಲಂಕಾ): ಎಲ್‍ಟಿಟಿಇ ಪತನದ ನಂತರ ಹತ್ತು ವರ್ಷಗಳ ಕಾಲ ಶಾಂತಿ ಜೀವನ ನಡೆಸುತ್ತಿದ್ದ ಶ್ರೀಲಂಕಾ ಪ್ರಜೆಗಳು, ಇಂದು ಮತ್ತೊಂದು ಭಯೋತ್ಪಾದಕ ಸಂಘಟನೆಯ ದಾಳಿಯಿಂದಾಗಿ ಆಘಾತಗೊಂಡಿದ್ದಾರೆ.

ಕ್ರೈಸ್ತರು ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಭಯೋತ್ಪಾ ದಕರು ಶ್ರೀಲಂಕಾದ ಮೂರು ಚರ್ಚ್‍ಗಳು ಮತ್ತು ಮೂರು ಪಂಚತಾರಾ ಹೋಟೆಲ್‍ಗಳು ಸೇರಿದಂತೆ 8 ಕಡೆ ಸರಣಿ ಬಾಂಬ್ ಸ್ಫೋಟ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ಭಾನುವಾರ ಬೆಳಿಗ್ಗೆ 8.45ರ ಸುಮಾರಿನಲ್ಲಿ ಚರ್ಚ್‍ಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯೇ ಬಾಂಬ್‍ಗಳು ಸ್ಫೋಟವಾಗಿವೆ. ಈ ಸರಣಿ ಸ್ಫೋಟದಲ್ಲಿ ಮೂವರು ಭಾರತೀಯರು, ಅಮೇರಿಕಾ ಮತ್ತು ಇಂಗ್ಲೆಂಡ್ ಪ್ರಜೆಗಳೂ ಸೇರಿದಂತೆ 35 ವಿದೇಶಿಯರು ಸಾವನ್ನಪ್ಪಿ ದ್ದಾರೆ. ಈವರೆವಿಗೂ ಒಟ್ಟಾರೆ 207 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿರುವ ಸೇಂಟ್ ಅಂಥೋಣಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೋದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಪೂರ್ವ ಬ್ಯಾಟಿಕೋಲೋ ದಲ್ಲಿರುವ ಮತ್ತೊಂದು ಚರ್ಚ್ ಬಾಂಬ್ ಸ್ಫೋಟಕ್ಕೆ ಗುರಿಯಾಗಿದೆ. ಉಗ್ರಗಾಮಿಗಳು ಪಂಚತಾರಾ ಹೋಟೆಲ್‍ಗಳಾದ ಶಾಂಗ್ರಿಲಾ, ಚಿನ್ನಾಮೋನ್ ಗ್ರಾಂಡ್ ಮತ್ತು ಕಿಂಗ್ಸ್‍ಬರಿ ಹೋಟೆಲ್‍ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ಸರಣಿ ಸ್ಫೋಟಗಳು ಆತ್ಮಹತ್ಯಾ ಬಾಂಬರ್‍ಗಳಿಂದ ನಡೆದಿದೆ ಎಂದು ಪ್ರಾಥಮಿಕ ವರದಿ ಗಳು ತಿಳಿಸಿವೆ. ಸರಣಿ ಸ್ಫೋಟ ಸಂಭವಿಸುತ್ತಿದ್ದಂತೆಯೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳನ್ನು ಕೈಗೊಂಡಿವೆ.

ಧಾರ್ಮಿಕ ಉಗ್ರಗಾಮಿಗಳಿಂದ ಈ ದಾಳಿ ನಡೆದಿದೆ. ಈ ಸಂಬಂಧ 7 ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆದರೆ ಯಾವುದೇ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ಧನ್ ತಿಳಿಸಿದ್ದಾರೆ. ದಾಳಿಯಲ್ಲಿ ಮೂವರು ಪೊಲೀಸರೂ ಕೂಡ ಬಲಿಯಾಗಿದ್ದಾರೆ. 8 ಕಡೆ ದಾಳಿಯಾಗಿದ್ದು, ಎರಡರಲ್ಲಿ ಆತ್ಮಾಹುತಿ ಬಾಂಬ್ ಬಳಕೆಯಾಗಿದೆ
ಎಂದು ವರದಿಗಳು ಹೇಳಿವೆ. ಭಯೋತ್ಪಾದಕರ ದಾಳಿ ಮತ್ತೆ ನಡೆಯುವ ಆತಂಕ ವಿರುವುದರಿಂದ ಶ್ರೀಲಂಕಾದ್ಯಂತ ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಸಂಜೆ 6 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಲಾಗಿದೆ. ಮತ್ತೆ ದಾಳಿಯಾಗುವ ಅಪಾಯ ವಿರುವುದರಿಂದ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಶ್ರೀಲಂಕಾ ಸರ್ಕಾರ ಎಚ್ಚರಿಸಿದೆ. ಸರಣಿ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಅಂಗಡಿ-ಮುಂಗಟ್ಟು ಗಳು ಮುಚ್ಚಲ್ಪಟ್ಟು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸ್ಫೋಟ ನಡೆದ ಸ್ಥಳಗಳಲ್ಲಿ ಗಾಯಾಳುಗಳು ಹಾಗೂ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವದಂತಿಗಳು ಹರಡಬಹುದು ಎಂಬ ಕಾರಣಕ್ಕಾಗಿ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಬ್ಯಾನ್ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

ಎಲ್‍ಟಿಟಿಇ ಪತನದ ನಂತರ ಕಳೆದ 10 ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ಶ್ರೀಲಂಕಾ ಪ್ರಜೆಗಳು ಈ ಸರಣಿ ಸ್ಫೋಟದಿಂದ ಜರ್ಝರಿತರಾಗಿದ್ದಾರೆ. ಶ್ರೀಲಂಕಾದಲ್ಲಿ ಮತ್ತೊಮ್ಮೆ ಸಂಘಟಿತ ಭಯೋತ್ಪಾದನೆ ತಲೆ ಎತ್ತಿರುವುದು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2009ರಲ್ಲಿ ಎಲ್‍ಟಿಟಿಇ ಅಧ್ಯಾಯ ಮುಗಿದ ನಂತರ ನಮ್ಮ ಜೀವನ ಬಹಳ ಸುಂದರವಾಗಿತ್ತು. ಅಂದಿನಿಂದ ಈವರೆವಿಗೂ ಒಂದೇ ಒಂದು ಭಯೋತ್ಪಾದನೆ ಘಟನೆ ನಡೆದಿರಲಿಲ್ಲ. ನಾವು ಶಾಂತಿಯ ಫಲ ಅನುಭವಿಸುತ್ತಿ ದ್ದೆವು. ಆದರೆ ಇಂದಿನ ಘಟನೆ ಆಘಾತವನ್ನುಂಟು ಮಾಡಿದೆ ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪಾಧ್ಯಕ್ಷ ಶಶಿಧನತುಂ ತಿಳಿಸಿದ್ದಾರೆ. ಅವರು ಇಂದು ಕೊಲಂಬೋದ ಹೋಟೆಲ್‍ವೊಂದರಲ್ಲಿ ಕುಟುಂಬದವರೊಡಗೂಡಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿದ್ದರು. ಶ್ರೀಲಂಕಾ ವಿಮಾನ ಯಾನ ಸಚಿವರೂ ಆದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ ಅವರು ನನಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಸರಣಿ ಸ್ಫೋಟ ಸಂಭವಿಸಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ನಾನು ಗರ ಬಡಿದಂತವನಾಗಿಬಿಟ್ಟೆ ಎಂದರು.

ಮಂಗಳೂರಿನ ಇಬ್ಬರು ಸೇರಿ ಮೂವರು ಭಾರತೀಯರ ಸಾವು!
ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಬೈಕಂಪಾಡಿ ಮೂಲದ ಕುಕ್ಕಾಡಿಯ ರಝೀನಾ ಖಾದರ್ ಕುಕ್ಕಾಡಿ, ಅಲ್ಲದೆ ಮಂಗಳೂರಿ ನವರೇ ಆದ ನಿತೀಶ್ ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಕ್ರಿಶ್ಚಿಯನ್ನರ ಪವಿತ್ರ ದಿನವಾದ ಇಂದು ಶ್ರೀಲಂಕಾ ದಲ್ಲಿ ರಕ್ತದೋಕುಳಿ ಹರಿದಿದೆ. 8 ಕಡೆ ನಡೆದ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ 35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ. 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎಫ್‍ಪಿ ವರದಿ ಮಾಡಿದೆ. ಬಹುತೇಕ ಆತ್ಮಾಹುತಿ ಬಾಂಬರ್ ದಾಳಿಯಾಗಿದ್ದು, ಈ ದಾಳಿಯ ಹಿಂದೆ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಏಳು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ತಿಳಿಸಿದ್ದಾರೆ. ಕೊಲಂಬೊ ದಲ್ಲಿನ 3 ಹೋಟೆಲ್ ಹಾಗೂ ಚರ್ಚ್‍ನಲ್ಲಿ ಮೊದಲ ಬಾಂಬ್ ಸ್ಫೋಟಿಸಿದ್ದರೆ, ಕೊಲಂಬೊ ಹೊರವಲಯದಲ್ಲಿನ ಇನ್ನಿತರ ಎರಡು ಚರ್ಚ್‍ಗಳಲ್ಲಿ ಸಾಮೂ ಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬ್ ಸ್ಫೋಟಿಸಿದೆ. ತದನಂತರ ದಾಹಿವಾಲಾ ದಲ್ಲಿನ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದಲ್ಲಿನ ಎದುರುಗಡೆಯ ಹೋಟೆಲ್ ನಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್ ಖಂಡನೆ
ನೆರೆಯ ಶ್ರೀಲಂಕಾದಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಶ್ರೀಲಂಕಾ ಜನರೊಂದಿಗೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ ನೆರವಿಗೂ ಸಿದ್ಧ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶ್ರೀಲಂ ಕಾದ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಕಟು ಶಬ್ದ ಗಳಿಂದ ಖಂಡಿಸುತ್ತೇನೆ. ಇಂತಹ ಅನಾಗರಿಕತೆಗೆ ಯಾವುದೇ ಜಾಗವಿಲ್ಲ. ಶ್ರೀಲಂಕಾದ ಜೊತೆ ಭಾರತವಿದ್ದು, ದಾಳಿಯಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಇದೇ ವಿಚಾರವನ್ನು ಸಿಂಹಳೀಯ ಭಾಷೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಂತೆಯೇ ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡ ಟ್ವೀಟ್ ಮೂಲಕ ಸಂತ್ರಸ್ಥರ ಆತ್ಮಕ್ಕೆ ಶಾಂತಿ ಕೋರಿದ್ದು, ಭಾರತ ಸರ್ಕಾರ ಶ್ರೀಲಂಕಾ ಸರ್ಕಾರದೊಂದಿ ಗಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಮಾಡಿರುವ ಈ ದಾಳಿಯನ್ನು ಭಾರತ ಖಂಡಿಸುತ್ತದೆ. ಅಂತೆಯೇ ‘ಶ್ರೀಲಂಕಾದ ಜೊತೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ ನೆರವಿಗೂ ಸಿದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

10 ದಿನಗಳ ಹಿಂದೆಯೇ ದಾಳಿ ಬಗ್ಗೆ ಎಚ್ಚರಿಕೆ
ಕೊಲಂಬೋ: ಈಸ್ಟರ್ ಸಂಡೇ ದಿನ ಶ್ರೀಲಂಕಾದ ಮೂರು ಚರ್ಚ್‍ಗಳಲ್ಲಿ ಬಾಂಬ್ ದಾಳಿಗಳಾಗಿದ್ದು 207 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಹೊರಬಂದಿದ್ದು, ಹತ್ತು ದಿನಗಳ ಹಿಂದೆಯೇ ಶ್ರೀಲಂಕಾದ ಪಾರಂ ಪರಿಕ ಚರ್ಚ್‍ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಶ್ರೀಲಂಕಾ ಪೆÇಲೀಸ್ ಮುಖ್ಯಸ್ಥ ಪೂಜೂತ್ ಜಯಸುಂದರ ಏ.11ರಂದು ಶ್ರೀಲಂಕಾದ ಉನ್ನತ ತನಿಖಾಧಿಕಾರಿ ಗಳಿಗೆ ಈ ಕುರಿತು ಎಚ್ಚರಿಕೆ ನೀಡಿದ್ದರು ಎಂದು ಎ.ಎಫ್.ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. “ಪ್ರಮುಖ ಚರ್ಚುಗಳು ಮತ್ತು ಕೊಲಂಬೋದಲ್ಲಿನ ಭಾರತೀಯ
ಹೈಕಮಿಷನರ್ ಕಛೇರಿಯನ್ನು ಗುರಿಯಾಗಿಟ್ಟು ಆತ್ಮಹತ್ಯೆ ದಾಳಿಯನ್ನು ನಡೆಸಲು ಎನ್.ಟಿ.ಜೆ (ನ್ಯಾಷನಲ್ ಥೌಹೀತ್ ಜಮಾಥ್) ಸಂಘಟನೆ ಯೋಜಿಸುತ್ತಿದೆ ಎಂದು ಒಂದು ವಿದೇಶಿ ಗುಪ್ತಚರ ಸಂಸ್ಥೆ ವರದಿ ಮಾಡಿದೆ” ಎಂದು ಜಯಸುಂದರ ಎಚ್ಚರಿಕೆ ನೀಡಿದ್ದರು. ಎನ್‍ಟಿಜೆ ಶ್ರೀಲಂಕಾದಲ್ಲಿನ ಒಂದು ಮೂಲಭೂತವಾದಿ ಮುಸ್ಲಿಂ ಸಂಘಟನೆ ಯಾಗಿದ್ದು ಅದು ಬೌದ್ಧ ಪ್ರತಿಮೆಗಳ ನಾಶದ ಘಟನೆ ನಡೆದಾಗ ಜಗತ್ತಿನ ಗಮನ ಸೆಳೆದಿತ್ತು.

Translate »