2.5 ಲಕ್ಷ ಮತಗಳಿಂದ ಗೆಲ್ಲುತ್ತೇನೆ: ಪ್ರಜ್ವಲ್ ವಿಶ್ವಾಸ
ಹಾಸನ

2.5 ಲಕ್ಷ ಮತಗಳಿಂದ ಗೆಲ್ಲುತ್ತೇನೆ: ಪ್ರಜ್ವಲ್ ವಿಶ್ವಾಸ

April 22, 2019

ಹಾಸನ: ಕಾರ್ಯಕರ್ತರು ಹಾಗೂ ಮುಖಂಡರ ವರದಿ ಪ್ರಕಾರ 2.5 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲು ತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾ ಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 10 ತಿಂಗಳ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮನ್ನು ಕೈ ಹಿಡಿಯಲಿವೆ ಎಂದರು.

ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯ ವಿಲ್ಲ. ಬಿಜೆಪಿಯಲ್ಲಿ ಒಡಕಿಲ್ಲವೇ? ಕಾಂಗ್ರೆಸ್ ಶೇ.90 ರಷ್ಟು ನಾಯಕರು ಪ್ರಾಮಾಣಿಕ ವಾಗಿ ಸಹಕಾರ ಮಾಡಿದ್ದಾರೆ. ನನ್ನ ರಾಜ ಕೀಯ ಅನುಭವದಲ್ಲಿ ಈ ಚುನಾವಣೆ ಯಲ್ಲಿ ಸಾಕಷ್ಟು ಒತ್ತಡ ಅನುಭವಿಸಿದ್ದೇನೆ. ಕಡಿಮೆ ಅವಧಿಯಲ್ಲೇ ಹಲವು ಮುಖಂ ಡರು ಹಾಗೂ ಹಳ್ಳಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಜನಾಶೀರ್ವಾದ ಮಾಡಿ ದರೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ದೇಶದ ಪ್ರಜಾಪ್ರಭುತ್ವ ದೊಡ್ಡದು. ಅದರ ಮುಂದೆ ಯಾರೂ ದೊಡ್ಡವರಲ್ಲ. ಬೇರೆ ಬೇರೆ ಮಾರ್ಗದಲ್ಲಿ ನನ್ನ ಮೇಲೆ ಕಪ್ಪುಚುಕ್ಕೆ ತರಲು ಯತ್ನಿಸುತ್ತಿದ್ದಾರೆ. ಹಾಗೇನಾದರೂ ನನ್ನ ವಿರುದ್ಧ ದಾಖ ಲಾತಿಗಳಿದ್ದರೆ ಎ.ಮಂಜು ನ್ಯಾಯಾಲಯದ ಮೆಟ್ಟಿಲು ಏರಲಿ. ಅಲ್ಲಿಯೇ ಸೂಕ್ತ ಉತ್ತರ ಕೊಡುತ್ತೇನೆ. ನಾನು ಷೇರು ಹೊಂದಿ ದ್ದೇನೆ ಎಂದು ಆರೋಪಿಸುತ್ತಿರುವ ಕಂಪನಿ ಯಲ್ಲಿ ಈಗಾಗಲೇ ಎನ್‍ಒಸಿ ತೆಗೆದು ಕೊಂಡಿದ್ದೇನೆ. ವೆಬ್‍ಸೈಟ್‍ನಲ್ಲಿ ನನ್ನ ಹೆಸರು ತೆಗೆದಿಲ್ಲವೆಂದರೆ ನಾನು ಅದಕ್ಕೆ ಹೊಣೆಯಲ್ಲ ಎಂದು ಬಿಜೆಪಿ ನಾಯ ಕರಿಗೆ ಟಾಂಗ್ ನೀಡಿದರು.

Translate »