ಮಡಿಕೇರಿ, ಏ.23- ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದರಿಂದ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇಂತಹ ಕ್ರಮ ಅನಿವಾರ್ಯ ಎಂದು ಸಂಸದ ಪ್ರತಾಪ್‍ಸಿಂಹ ಸರಕಾರದ ಕ್ರಮವನ್ನು ಸಮರ್ಥಿ ಸಿಕೊಂಡರು. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸಹಕಾರ ನೀಡಿದರೆ ವಾರ ಅಥವಾ ಹತ್ತು ದಿನದಲ್ಲಿ ಪರಿಸ್ಥಿತಿ ಹಿಡಿತಕ್ಕೆ ಬರಬಹುದು. ಆಮೇಲೆ ಕಠಿಣ ಕ್ರಮ ಸಡಿಲಿಕೆ ಆಗಬಹುದು. ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದರು. ಸರ್ಕಾರದ ಕಠಿಣ ಕ್ರಮದ ಬಗ್ಗೆ ಮಾಜಿ ಸಿ.ಎಂ. ಸಿದ್ದರಾಮಯ್ಯ ಅವರ ಟೀಕೆ…
ಹನೂರು ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ 27.06 ಕೋಟಿ ವೆಚ್ಚದ ವಿವಿಧ ಇಲಾಖೆಗಳ ಕಟ್ಟಡ ಲೋಕಾರ್ಪಣೆ
April 24, 2021ಹನೂರು, ಏ.23(ಸೋಮು)-ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 27.06 ಕೋಟಿ ರೂ. ವೆಚ್ಚದಲ್ಲಿ ಪೂರ್ಣ ಗೊಂಡಿರುವ ಚೆಕ್ ಡ್ಯಾಂ, ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ವಿವಿಧ ಇಲಾಖೆಯ ನೂತನ ಕಟ್ಟಡಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಲೋಕಾರ್ಪಣೆಗೊಳಿಸಿದರು. ಹನೂರು ಪಟ್ಟಣದ ಹೊರವಲಯ ದಲ್ಲಿರುವ ಹುಲಸುಗುಡ್ಡೆ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಐಟಿಐ ಕಾಲೇಜು ಕಟ್ಟಡ, ಪಟ್ಟಣದ ಪೆÇಲೀಸ್ ವಸತಿ ಗೃಹ ಬಳಿ ಜಿಪಂ ಮತ್ತು ಕೃಷಿ ಇಲಾಖೆ ಯಿಂದ ಆರ್‍ಐಡಿಎಫ್-23…
ಕೋವಿಡ್ ನಿಯಮ ಉಲ್ಲಂಘನೆ: ಕಲ್ಯಾಣ ಮಂಟಪ ಮಾಲೀಕರ ವಿರುದ್ಧ ಎಫ್‍ಐಆರ್
April 24, 2021ಹನೂರು, ಏ.23(ಸೋಮು)-ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ವಿವಾಹ ನಡೆಸುತ್ತಿದ್ದ ಕಲ್ಯಾಣ ಮಂಟಪಗಳ ಮೇಲೆ ವೃತ್ತನಿರೀಕ್ಷಕ ಸಂತೋಷ್ ಕಶ್ಯಪ್ ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ. ಕಲ್ಯಾಣ ಮಂಟಪದ ಮಾಲೀಕರು ಪೂರ್ವಾನುಮತಿ ಪಡೆಯದೆ ಹಾಗೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ಸೇರಿ ಕೊಂಡು ವಿವಾಹ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹನೂರು ಪಟ್ಟಣ ಠಾಣೆಯ ವೃತ್ತನಿರೀಕ್ಷಕ ಸಂತೋಷ ಕಶ್ಯಪ್ ನೇತೃತ್ವ ತಂಡ ಇಂದು ಕಾರ್ಯಾಚರಣೆ ನಡೆಸಿತು. ಈ ವೇಳೆ ನಿಯಮ ಉಲ್ಲಂಘಿಸಿದ ಪಟ್ಟಣದ ವಾಸವಿ ಮಹಲ್…
ಶ್ರೀಗಂಧ ತುಂಡುಗಳ ಮಾರಾಟಕ್ಕೆ ಯತ್ನ 10 ಮಂದಿ ಬಂಧನ
April 24, 2021ಕೊಳ್ಳೇಗಾಲ, ಏ.23(ಎನ್.ನಾಗೇಂದ್ರ)- ಗಂಧದ ಮರ ಕಡಿದು ಮಾರಾಟಕ್ಕೆ ಯತ್ನಿಸಿದ್ದ 10 ಮಂದಿ ಮರಗಳ್ಳರನ್ನು ಮಹದೇಶ್ವರ ವನ್ಯ ಧಾಮದ ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 5 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಬೆರಿಕಾಮ್ ಸಮೀಪದ ರಾಮನದೊಡ್ಡಿ ಗ್ರಾಮದವರಾದ ರಾಜ(32), ಅಪೆÇೀಜಿ(35), ರಾಜಪ್ಪ(32), ಸೋಮಯ್ಯ(50), ಮುನಿಯಪ್ಪ(55), ಬೈರಮ್ಮ(25), ಶಾತಮ್ಮ(27), ಸಾಲಮ್ಮ(28), ಬಸವರಾಜು(27), ಬಸವರಾಜು(40) ಬಂಧಿತ ಆರೋಪಿಗಳಾಗಿದ್ದು. ನಾಗರಾಜು (30), ಪಾಂಡ್ಯ(25), ಮುರುಗನ್(28), ಸುರೇಶ್(25), ನರಸಿಂಹ(30) ತಲೆ ಮರೆಸಿಕೊಂಡಿದ್ದಾರೆ. ಇವರಲ್ಲಿ 8 ಮಂದಿ ಆರೋಪಿಗಳು…
ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ
April 24, 2021ಮಡಿಕೇರಿ, ಏ.23- ಕುಶಾಲನಗರ 220/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಹೆಬ್ಬಾಲೆ, ಭುವನಗರಿ ಎಫ್6 ಇಂಡಸ್ಟ್ರಿಯಲ್ ಏರಿಯಾ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಏಪ್ರಿಲ್, 24 ಮತ್ತು 25 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹೆಬ್ಬಾಲೆ, ಕಣಿವೆ, ಹಕ್ಕೆ, ಹಳೆಗೋಟೆ, ಭುವನಗಿರಿ, ಯಡವನಾಡು, ಹುದುಗೂರು, ಹಾರಂಗಿ, ದೊಡ್ಡತ್ತೂರು, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ…
ಜೋಡುಪಾಲ ಬಳಿ ಹೆದ್ದಾರಿ ಬರೆ ಕುಸಿತ
April 24, 2021ಮಡಿಕೇರಿ, ಏ.23- ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲದ ಬಳಿ ಹೆದ್ದಾರಿ ಬದಿಯ ಬರೆ ಕುಸಿತವಾಗಿದೆ. ಪರಿಣಾಮ ಹೆದ್ದಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, ಸ್ಥಳದಲ್ಲಿ ಪೊಲೀಸರು ಎಚ್ಚರಿಕಾ ಫಲಕಗಳನ್ನು ಅಳವಡಿಸಿ ವಾಹನ ಚಾಲಕರಿಗೆ ನಿಧಾನ ಗತಿಯಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಕುಸಿತವಾದ ಸ್ಥಳದಲ್ಲಿ ಪ್ಲಾಸಿಕ್ ಹೊದಿಕೆ ಅಳವಡಿಸಿ ಮಳೆಯ ನೀರು ಹರಿದುಹೋಗದಂತೆ ಎಚ್ಚರಿಕೆ ವಹಿಸ ಲಾಗಿದೆ. ಸ್ಥಳದಲ್ಲಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು…
ಕೊಡಗಿನಲ್ಲಿ ಶುಕ್ರವಾರ 287 ಕೊರೊನಾ ಪ್ರಕರಣ ದೃಢ
April 24, 2021ಮಡಿಕೇರಿ, ಏ.23- ಜಿಲ್ಲೆಯಲ್ಲಿ ಶುಕ್ರವಾರ 287 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 260 ಆರ್‍ಟಿಪಿಸಿಆರ್ ಮತ್ತು 27 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 7652 ಆಗಿದ್ದು, 6562 ಮಂದಿ ಗುಣಮುಖರಾಗಿದ್ದಾರೆ. 1000 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 90 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 304 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.
ಪ್ರತಿ ತಾಲೂಕಿನಲ್ಲೂ ಕೊರೊನಾ ಸಹಾಯವಾಣಿ ಸ್ಥಾಪನೆಗೆ ಸಚಿವ ಸೋಮಣ್ಣ ಸೂಚನೆ
April 24, 2021ಮಡಿಕೇರಿ, ಏ.23- ಕೊಡಗಿನಲ್ಲಿ ಕೊರೊನಾ ನಿಯಂತ್ರಣಕ್ಕೆ 5 ತಾಲೂಕು ಗಳಲ್ಲಿಯೂ ಸಹಾಯವಾಣಿ ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚನೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಇಲಾಖಾಧಿಕಾರಿಗಳು, ಸಿಬ್ಬಂದಿ ಸೂಕ್ತ ಸಮನ್ವಯತೆ ಮತ್ತು ಸಹಕಾರ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಉಪ ವಿಭಾಗಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ…
ಹೆಂಡತಿ-ಮಕ್ಕಳ ಸಾಕಲಾರದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು
December 4, 2020ಪೊನ್ನಂಪೇಟೆ, ಡಿ.3-ಹೆಂಡತಿ-ಮಕ್ಕಳನ್ನು ಸಾಕ ಲಾರದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಕೃಷಿ ದಿನದ ಪ್ರಯುಕ್ತ ಏರ್ಪಡಿಸಿದ್ದ ಬಿದಿರು ಸಸ್ಯ ಕ್ಷೇತ್ರ, ಬಿದಿರು ಸಂಸ್ಕರಣೆ ಮತ್ತು ಬಿದಿರು ಮೌಲ್ಯವರ್ಧನ ಘಟಕ ಗಳನ್ನು ಅರಣ್ಯ ಸಚಿವ ಆನಂದ್ ಸಿಂಗ್ ಜೊತೆ ಗೂಡಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ದುಡಿದು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಹೀಗಿರು ವಾಗ ರೈತರು…
ತಾಲೂಕು ಕಚೇರಿ ಎಫ್‍ಡಿಸಿ ಎಸಿಬಿ ಬಲೆಗೆ
November 12, 2020ಮಡಿಕೇರಿ, ನ.11- ಗ್ರಾಮ ಪಂಚಾಯಿತಿಯ ನಿವೃತ್ತ ಪಂಪ್ ಆಪರೇಟರ್ ಒಬ್ಬರಿಂದ ನಿವೃತ್ತಿ ಉಪ ಧನ ಮಂಜೂರು ಮಾಡಲು 1,500 ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಪೊನ್ನಂಪೇಟೆ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಭಾಸ್ಕರ್ ಬಂಧಿತ ಆರೋಪಿಯಾಗಿದ್ದು, ಆತನಿಂದ 1,500 ರೂ. ನಗದನ್ನು ಎಸಿಬಿ ಅದಿ üಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಹಿನ್ನಲೆ: ವಿರಾಜಪೇಟೆ ತಾಲೂಕು ಮಾಲ್ದಾರೆ ಗ್ರಾಮ…