ಹನೂರು ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ 27.06 ಕೋಟಿ ವೆಚ್ಚದ ವಿವಿಧ ಇಲಾಖೆಗಳ ಕಟ್ಟಡ ಲೋಕಾರ್ಪಣೆ
ಕೊಡಗು

ಹನೂರು ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ 27.06 ಕೋಟಿ ವೆಚ್ಚದ ವಿವಿಧ ಇಲಾಖೆಗಳ ಕಟ್ಟಡ ಲೋಕಾರ್ಪಣೆ

April 24, 2021

ಹನೂರು, ಏ.23(ಸೋಮು)-ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 27.06 ಕೋಟಿ ರೂ. ವೆಚ್ಚದಲ್ಲಿ ಪೂರ್ಣ ಗೊಂಡಿರುವ ಚೆಕ್ ಡ್ಯಾಂ, ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ವಿವಿಧ ಇಲಾಖೆಯ ನೂತನ ಕಟ್ಟಡಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಲೋಕಾರ್ಪಣೆಗೊಳಿಸಿದರು.

ಹನೂರು ಪಟ್ಟಣದ ಹೊರವಲಯ ದಲ್ಲಿರುವ ಹುಲಸುಗುಡ್ಡೆ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಐಟಿಐ ಕಾಲೇಜು ಕಟ್ಟಡ, ಪಟ್ಟಣದ ಪೆÇಲೀಸ್ ವಸತಿ ಗೃಹ ಬಳಿ ಜಿಪಂ ಮತ್ತು ಕೃಷಿ ಇಲಾಖೆ ಯಿಂದ ಆರ್‍ಐಡಿಎಫ್-23 ಯೋಜನೆ ಯಡಿ ನಿರ್ಮಿಸಿರುವ 50 ಲಕ್ಷ ರೂ. ವೆಚ್ಚದ ರೈತ ಸಂಪರ್ಕ ಕೇಂದ್ರ, ಹನೂರು ಪಟ್ಟಣ ಚಿಂಚಳ್ಳಿ ರಸ್ತೆಯಲ್ಲಿ 3.25 ಕೋಟಿ ರೂ. ವೆಚ್ಚದ ನೂತನ ಬಿಸಿಎಂ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿದರು. ಬಂಡಳ್ಳಿ ಗ್ರಾಮದಲ್ಲಿ 1.94 ಕೋಟಿ ರೂ. ವೆಚ್ಚದ ನೂತನ ಪದವಿ ಪೂರ್ವ ಕಾಲೇಜು ಕಟ್ಟಡ ಲೋಕಾರ್ಪಣೆಗೊಳಿಸಿದರು.

ನಂತರ ಲಾಜರ್‍ದೊಡ್ಡಿ ಗ್ರಾಮದಲ್ಲಿ 1.90 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಕಮ್ ಬ್ಯಾರೇಜ್ ಉದ್ಘಾಟಿಸಿ, ಅಜ್ಜೀಪುರ ಗ್ರಾಮದಲ್ಲಿ 4.89 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರಕ್ಕೆ ಸಚಿವರು ಚಾಲನೆ ನೀಡಿದರು.

ರಾಮಾಪುರದಲ್ಲಿ 2.10 ಕೋಟಿ ರೂ. ವೆಚ್ಚದ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ, 44 ಲಕ್ಷ ರೂ. ವೆಚ್ಚದ ರೈತ ಸಂಪರ್ಕ ಕೇಂದ್ರ ಕಟ್ಟಡ, ಅಂತಾ ರಾಜ್ಯ ಸಂಪರ್ಕ ಕಲ್ಪಿಸುವ ನಾಲ್ ರೋಡ್‍ನಲ್ಲಿ ನಿರ್ಮಿಸಿರುವ 4.25 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದರು.

ಕಾಡಂಚಿನ ಗ್ರಾಮವಾದ ನಕ್ಕುಂದಿ ಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ 5.79 ಕೋಟಿ ರೂ. ವೆಚ್ಚದ ಬುಡಕಟ್ಟು ವಸತಿ ಶಾಲೆ ಕಟ್ಟಡವನ್ನೂ ಸಚಿವರು ಇದೇ ವೇಳೆ ಸಚಿವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ, ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರು, ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ, ಜಿಪಂ ಸಿಇಓ ಹರ್ಷಲ್ ಬೋಯರ್ ನಾರಾಯಣ್ ರಾವ್, ಜಿಪಂ ಸದಸ್ಯರಾದ ಬಸವರಾಜು, ಮರುಗದಮಣಿ, ತಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷೆ ರುಕ್ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮತಿ, ಡಿಹೆಚ್‍ಓ ಡಾ.ರವಿ ರಾಮಾಪುರ ವೈದ್ಯಾಧಿಕಾರಿ ಡಾ.ಪ್ರಕಾಶ್, ತಾಲೂಕು ವೈದ್ಯಾಧಿಕಾರಿ ಗೋಪಾಲ್ ಇನ್ನಿತರರಿದ್ದರು.

 

Translate »