ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಜಾರಿಗೊಳಿಸಿದ ಜಿಲ್ಲಾಡಳಿಗ್ಪಿ ಚಾಮರಾಜನಗರದಲ್ಲಿ ಅಘೋಷಿತ ಬಂದ್ ವಾತಾವರಣ
ಚಾಮರಾಜನಗರ

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಜಾರಿಗೊಳಿಸಿದ ಜಿಲ್ಲಾಡಳಿಗ್ಪಿ ಚಾಮರಾಜನಗರದಲ್ಲಿ ಅಘೋಷಿತ ಬಂದ್ ವಾತಾವರಣ

April 24, 2021

ಚಾಮರಾಜನಗರ, ಏ.23(ಎಸ್‍ಎಸ್)- ಕೊರೊನಾ 2ನೇ ಅಲೆ ನಿಯಂತ್ರಣ ಸಂಬಂಧ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿ ಸಿದ ಪರಿಣಾಮ, ಜಿಲ್ಲಾ ಕೇಂದ್ರ ಚಾಮ ರಾಜನಗರದಲ್ಲಿ ಶುಕ್ರವಾರ ಅಘೋಷಿತ ಬಂದ್ ವಾತಾವರಣ ಕಂಡುಬಂತು.

ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ, ಉಳಿದೆಲ್ಲ ವ್ಯಾಪಾರವನ್ನು ಗುರು ವಾರ ಮಧ್ಯಾಹ್ನವೇ ಬಂದ್ ಮಾಡಿಸ ಲಾಗಿತ್ತು. ಇದು ಶುಕ್ರವಾರವೂ ಮುಂದು ವರೆದ ಪರಿಣಾಮ ಪ್ರಮುಖ ವಹಿವಾಟು ಪ್ರದೇಶವಾದ ದೊಡ್ಡ ಅಂಗಡಿ ಹಾಗೂ ಚಿಕ್ಕ ಅಂಗಡಿ ಬೀದಿ ಜನರಿಲ್ಲದೆ, ಬಿಕೋ ಎನ್ನುತ್ತಿತು. ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಬಂದ್ ಪರಿಸ್ಥಿತಿ ಗೋಚರಿಸಿತು.

ಆಸ್ಪತ್ರೆ, ಕ್ಲಿನಿಕ್, ಔಷಧಿ, ದಿನಸಿ, ಹಣ್ಣಿನ ಅಂಗಡಿಗಳು, ಬೇಕರಿ, ಹೋಟೆಲ್, ಕ್ಯಾಂಟೀನ್ ತರಕಾರಿ ಅಂಗಡಿಗಳು ಬಾಗಿಲು ತೆರೆದಿದ್ದವು. ಬೇಕರಿ, ಹೋಟೆಲ್, ಕ್ಯಾಂಟೀನ್ ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿತ್ತು. ಇನ್ನುಳಿದಂತೆ ಚಿನ್ನ-ಬೆಳ್ಳಿ ಅಂಗಡಿ, ಬಟ್ಟೆ, ಪಾತ್ರೆ, ಫುಟ್‍ವೇರ್, ಬಣ್ಣ, ಕಬ್ಬಿಣದಂಗಡಿಗಳು, ಬುಕ್ ಡಿಪೋ ಸೇರಿದಂತೆ ಅಗತ್ಯವಲ್ಲದ ವಸ್ತುಗಳ ಮಾರಾಟದ ಅಂಗಡಿಗಳು ದಿನವೀಡಿ ಮುಚ್ಚಿದ್ದದವು. ಇದರಿಂದ ಜನಸಂದಣಿ ವಿರಳವಾಗಿತ್ತು.

ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಇರಲಿಲ್ಲ. ಹಾಗಾಗಿ ಕೆಲ ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆಟೋಗಳ ಸಂಚಾರವೂ ಸಹ ವಿರಳವಾಗಿತ್ತು.

ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಿದರೂ ಸಾರ್ವ ಜನಿಕರ ಭೇಟಿಯೂ ವಿರಳವಾಗಿತ್ತು. ಬೈಕ್ ಹಾಗೂ ವಾಹನಗಳ ಸಂಚಾರವೂ ಅಷ್ಟೇನೂ ಕಂಡು ಬರಲಿಲ್ಲ. ಜನರ ಓಡಾಟ ಕಡಿಮೆ ಇದ್ದರಿಂದ ಅಘೋಷಿತ ಬಂದ್ ವಾತಾವರಣ ಕಂಡು ಬಂತ್ತು.

Translate »