ಜೋಡುಪಾಲ ಬಳಿ ಹೆದ್ದಾರಿ ಬರೆ ಕುಸಿತ
ಕೊಡಗು

ಜೋಡುಪಾಲ ಬಳಿ ಹೆದ್ದಾರಿ ಬರೆ ಕುಸಿತ

April 24, 2021

ಮಡಿಕೇರಿ, ಏ.23- ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲದ ಬಳಿ ಹೆದ್ದಾರಿ ಬದಿಯ ಬರೆ ಕುಸಿತವಾಗಿದೆ. ಪರಿಣಾಮ ಹೆದ್ದಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, ಸ್ಥಳದಲ್ಲಿ ಪೊಲೀಸರು ಎಚ್ಚರಿಕಾ ಫಲಕಗಳನ್ನು ಅಳವಡಿಸಿ ವಾಹನ ಚಾಲಕರಿಗೆ ನಿಧಾನ ಗತಿಯಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಕುಸಿತವಾದ ಸ್ಥಳದಲ್ಲಿ ಪ್ಲಾಸಿಕ್ ಹೊದಿಕೆ ಅಳವಡಿಸಿ ಮಳೆಯ ನೀರು ಹರಿದುಹೋಗದಂತೆ ಎಚ್ಚರಿಕೆ ವಹಿಸ ಲಾಗಿದೆ. ಸ್ಥಳದಲ್ಲಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Translate »