ಶ್ರೀಗಂಧ ತುಂಡುಗಳ ಮಾರಾಟಕ್ಕೆ ಯತ್ನ 10 ಮಂದಿ ಬಂಧನ
ಕೊಡಗು

ಶ್ರೀಗಂಧ ತುಂಡುಗಳ ಮಾರಾಟಕ್ಕೆ ಯತ್ನ 10 ಮಂದಿ ಬಂಧನ

April 24, 2021

ಕೊಳ್ಳೇಗಾಲ, ಏ.23(ಎನ್.ನಾಗೇಂದ್ರ)- ಗಂಧದ ಮರ ಕಡಿದು ಮಾರಾಟಕ್ಕೆ ಯತ್ನಿಸಿದ್ದ 10 ಮಂದಿ ಮರಗಳ್ಳರನ್ನು ಮಹದೇಶ್ವರ ವನ್ಯ ಧಾಮದ ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 5 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಬೆರಿಕಾಮ್ ಸಮೀಪದ ರಾಮನದೊಡ್ಡಿ ಗ್ರಾಮದವರಾದ ರಾಜ(32), ಅಪೆÇೀಜಿ(35), ರಾಜಪ್ಪ(32), ಸೋಮಯ್ಯ(50), ಮುನಿಯಪ್ಪ(55), ಬೈರಮ್ಮ(25), ಶಾತಮ್ಮ(27), ಸಾಲಮ್ಮ(28), ಬಸವರಾಜು(27), ಬಸವರಾಜು(40) ಬಂಧಿತ ಆರೋಪಿಗಳಾಗಿದ್ದು. ನಾಗರಾಜು (30), ಪಾಂಡ್ಯ(25), ಮುರುಗನ್(28), ಸುರೇಶ್(25), ನರಸಿಂಹ(30) ತಲೆ ಮರೆಸಿಕೊಂಡಿದ್ದಾರೆ.

ಇವರಲ್ಲಿ 8 ಮಂದಿ ಆರೋಪಿಗಳು ಸತ್ತೇಗಾಲ-ಜಾಗೇರಿ ಸಮೀಪದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನುಸುಳಿ ಶ್ರೀ ಗಂಧದ ಮರಗಳನ್ನು ಕಡಿದು ತುಂಡುಗಳನ್ನು ಮಾಡಿ ಚೀಲದಲ್ಲಿ ತುಂಬಿಕೊಂಡು ಭರಚುಕ್ಕಿ ಗಸ್ತಿನ ಕಾಲವಾದಿಗೇಮ್ ರಸ್ತೆಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಡಿಸಿಎಫ್ ಏಡು ಕೊಂಡಲು ಮಾರ್ಗದರ್ಶನ, ಎಸಿಎಫ್ ವನಿತಾ ನೇತೃತ್ವದಲ್ಲಿ ವಾರದಿಂದಲೇ ಕಾರ್ಯ ಚರಣೆ ಕೈಗೊಂಡಿದ್ದ ಆರ್‍ಎಫ್‍ಓ ಪ್ರವೀಣ್ ಛಲವಾದಿ ತಂಡದ ಕಣ್ಣಿಗೆ ಬಿದ್ದಿದ್ದಾರೆ. ಆರೋಪಿಗಳನ್ನು ತಡೆದು ತಪಾಸಣೆ ನಡೆಸಿ ದಾಗ ಶ್ರೀಗಂಧದ ಮರದ ತುಂಡುಗಳು, ಕೃತ್ಯಕ್ಕೆ ಬಳಸಿದ್ದ ಪರಿಕರಗಳು ಪತ್ತೆಯಾಗಿವೆ.

ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೋಲಾರ ಮೂಲದ ವ್ಯಕ್ತಿಯೋರ್ವನಿಗೆ ಮಾರಾಟ ಮಾಡುವ ಉದ್ದೇಶದಿಂದ ಗಂಧದ ತುಂಡು ಗಳು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಕಾರ್ಯಚರಣೆ ವೇಳೆ ಮತ್ತಿಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ಬಂಧಿತ ರಿಂದ ಮಾಕಳಿಬೇರು ವಶಕ್ಕೆ ಪಡೆಯಲಾಗಿದೆ.

ತನಿಖೆಯನ್ನು ಚುರುಕುಗೊಳಿಸಿದ ತನಿಖಾಧಿಕಾರಿಗಳ ತೀವ್ರ ವಿಚಾರಣೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 5 ಆರೋಪಿಗಳು ತಲೆ ಮರೆಸಿಕೊಂಡಿ ರುವುದು ತಿಳಿದು ಬಂದಿದೆ. ಒಟ್ಟಾರೇ ಬಂಧಿತರಿಂದ 24 ಕೆ.ಜಿ. ತೂಕದ ಗಂಧದ ಮರದ ತುಂಡುಗಳು, 30 ಕೆ.ಜಿ. ಮಾಕಳಿಬೇರು, ಕೃತ್ಯಕ್ಕೆ ಬಳಸಿದ್ದ ಮಚ್ಚು, ಹಾರೆಯಂತಹ ಉಪಕರಣಗಳು ಸೇರಿದಂತೆ 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರಿಗೆ ಕೊರೊನಾ: ಕೃತ್ಯದಲ್ಲಿ ಸಿಕ್ಕಿಬಿದ್ದ 10 ಮಂದಿ ಆರೋಪಿಗಳ ಪೈಕಿ, ಇಬ್ಬರಿ(ದಂಪತಿ)ಗೆ ಕೊರೊನಾ ದೃಢಪಟ್ಟಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೂ ಅರಣ್ಯ ಇಲಾಖೆ ಬಲೆ ಬೀಸಿದೆ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಹಾನಂದ ದೀಪಕ್, ಕೃಷ್ಣಪ್ಪ, ರವಿಕಿರಣ್ ಮತ್ತಿತ್ತರಿದ್ದರು.

Translate »