ತಾಲೂಕು ಕಚೇರಿ ಎಫ್‍ಡಿಸಿ ಎಸಿಬಿ ಬಲೆಗೆ
ಕೊಡಗು

ತಾಲೂಕು ಕಚೇರಿ ಎಫ್‍ಡಿಸಿ ಎಸಿಬಿ ಬಲೆಗೆ

November 12, 2020

ಮಡಿಕೇರಿ, ನ.11- ಗ್ರಾಮ ಪಂಚಾಯಿತಿಯ ನಿವೃತ್ತ ಪಂಪ್ ಆಪರೇಟರ್ ಒಬ್ಬರಿಂದ ನಿವೃತ್ತಿ ಉಪ ಧನ ಮಂಜೂರು ಮಾಡಲು 1,500 ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಪೊನ್ನಂಪೇಟೆ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಭಾಸ್ಕರ್ ಬಂಧಿತ ಆರೋಪಿಯಾಗಿದ್ದು, ಆತನಿಂದ 1,500 ರೂ. ನಗದನ್ನು ಎಸಿಬಿ ಅದಿ üಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಹಿನ್ನಲೆ: ವಿರಾಜಪೇಟೆ ತಾಲೂಕು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಬಿ.ಕೆ. ರಾಘವ ಎಂಬವರು ಮಾಲ್ದಾರೆ ಗ್ರಾಮ ಪಂಚಾಯಿತಿಯಲ್ಲಿ 1991ರಿಂದ ಪಂಪ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸಿ ಕೆಲ ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವರಿಗೆ 15 ತಿಂಗಳ ನಿವೃತ್ತಿ ಉಪ ಧನ ಬರಲು ಬಾಕಿ ಇದ್ದ ಹಿನ್ನಲೆಯಲ್ಲಿ ಅದನ್ನು ಮಂಜೂರು ಮಾಡುವಂತೆ ಅಕ್ಟೋಬರ್ 6ರಂದು ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪೊನ್ನಂಪೇಟೆ ತಾಲೂಕು ಕಚೇರಿಯಿಂದ ಅನು ಮೋದನೆ ಪಡೆದು ಕೊಂಡು ವಿಲೇವಾರಿ ಯಾಗಬೇಕಿತ್ತು. ಬಿ.ಕೆ. ರಾಘವ ಅವರು ಪೊನ್ನಂಪೇಟೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣ್ ಭಾಸ್ಕರ್‍ನನ್ನು ಭೇಟಿ ಯಾಗಿ ತಮ್ಮ ಕಡತವನ್ನು ವಿಲೇವಾರಿ ಮಾಡುವಂತೆ ಮನವಿ ಮಾಡಿದ್ದರು. ಈ ಸಂದರ್ಭ ಅರುಣ್ ಭಾಸ್ಕರ್ 5 ಸಾವಿರ ರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟು, ಮೊದಲ ಕಂತಿನ ರೂಪದಲ್ಲಿ 2 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದ. ಇನ್ನುಳಿದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟ ಸಂದರ್ಭ ಕೆ.ಬಿ ರಾಘವ ಹೆಚ್ಚುವರಿ ಹಣ ನೀಡಲು ನಿರಾಕರಿಸಿದಾಗ ಮತ್ತೆ 1,500ರೂ. ನೀಡುವಂತೆ ಅರುಣ್ ಭಾಸ್ಕರ್ ಒತ್ತಾಯಿ ಸಿದ್ದ. ಇದರಿಂದ ನೊಂದ ಬಿ.ಕೆ. ರಾಘವ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ನ.10 ರಂದು ಪೊನ್ನಂಪೇಟೆ ತಾಲೂಕು ಕಚೇರಿ ಯಲ್ಲಿ ಅರುಣ್ ಭಾಸ್ಕರ್, ದೂರುದಾರ ಬಿ.ಕೆ. ರಾಘವ ಅವರಿಂದ 1,500ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆತನನ್ನು ನಗದು ಸಹಿತ ಬಂಧಿ ಸಿದ್ದಾರೆ. ಎಸಿಬಿ ಉಪ ಅಧೀಕ್ಷಕ ಸದಾ ನಂದ ತಿಪ್ಪಣ್ಣನವರ್, ವೃತ್ತ ನಿರೀಕ್ಷಕ ರಾದ ಶ್ರೀಧರ್, ಶಿಲ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »