ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ; ಯುವಕನಿಗೆ 53 ಲಕ್ಷ ಪರಿಹಾರ
ಮೈಸೂರು

ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ; ಯುವಕನಿಗೆ 53 ಲಕ್ಷ ಪರಿಹಾರ

November 12, 2020

ಕೇರಳದ ಯುವಕ ಮೈಸೂರಿನಲ್ಲಿ ನೌಕರಿಯಲ್ಲಿದ್ದ
ತಿರುವನಂತಪುರ, ನ.11- ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ 52.7 ಲಕ್ಷ ರೂ. ಪರಿಹಾರ ಧನವನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ (ಎಂಎಸಿಟಿ) ಘೋಷಿಸಿದೆ. ಬಡ್ಡಿ ಸೇರಿ 68 ಲಕ್ಷ ರೂ. ಪರಿಹಾರ ಧನ ಗಾಯಾಳುವಿಗೆ ದೊರೆಯಲಿದೆ.

ಮಲಪ್ಪುರಂನ ಮನಿಯೂರ್ ಗ್ರಾಮದ ನಿವಾಸಿ ಬಿಜು(29) ಅವರಿಗೆ 2016ರ ಜುಲೈ ತಿಂಗಳಲ್ಲಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಸೊಂಟದ ಕೆಳಗಿನ ಭಾಗ ಪಾರ್ಶ್ವ ವಾಯುಗೆ ತುತ್ತಾಗಿ ದುರ್ಬಲಗೊಂಡಿದೆ. ಬಿಜು ವಿವಾಹವಾದ 7 ತಿಂಗಳಿನ ಬಳಿಕ ಈ ಅಪಘಾತ ಸಂಭವಿಸಿತ್ತು. ಫುಟ್‍ಬಾಲ್ ಆಟಗಾರರೂ ಆಗಿದ್ದ ಬಿಜು ಅವರು ಮೈಸೂರಿನಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದರು. ನಂತರ ವಿದೇಶಕ್ಕೆ ತೆರಳುವ ಕನಸು ಹೊತ್ತು ಕೆಲಸ ಬಿಟ್ಟಿದ್ದರು. ಬಿಜು ಅವರ ದೇಹದ ಶೇ.80ರಷ್ಟು ಭಾಗ ಸರಿಯಾಗಿ ಕಾರ್ಯನಿರ್ವಹಿಸು ತ್ತಿಲ್ಲ. ಸಾಮಾನ್ಯ ಕೆಲಸ ಮಾಡಲು ಬೇರೆ ವ್ಯಕ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಬಿಜು ಅವರ ವಯಸ್ಸು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರ ಧನ ನೀಡಲಾಗಿದೆ ಎಂದು ವಕೀಲರು ಹೇಳಿದರು. ಅಪಘಾತದಲ್ಲಿ ಗಾಯಗೊಂಡು ಅಂಗವಿಕಲನಾದೆ. ವ್ಹೀಲ್‍ಛೇರ್ ಮತ್ತು ಹಾಸಿಗೆಗಷ್ಟೇ ಸೀಮಿತವಾದೆ. ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಪರಿಹಾರಧನ ಸ್ವಲ್ಪ ಸಮಾಧಾನವನ್ನು ನೀಡಿದೆ ಎಂದು ಬಿಜು ಹೇಳಿದರು. ಈಗಾಗಲೇ ಬಿಜು ಅವರ ಚಿಕಿತ್ಸೆಗೆ 4 ಲಕ್ಷ ರೂ. ಖರ್ಚಾಗಿದೆ.

Translate »