ನಾಪೆÉÇೀಕ್ಲು: ಪ್ರಕೃತಿ ವಿಕೋ ಪದ ಹಿನ್ನೆಲೆಯಲ್ಲಿ 22 ವರ್ಷದಿಂದ ನಡೆಯುತ್ತಾ ಬಂದಿರುವ ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾ ಟವನ್ನು ಕೊಡವ ಹಾಕಿ ಅಕಾಡೆಮಿ ಕೈಬಿಟ್ಟಿ ರುವುದು ಉತ್ತಮ ಬೆಳವಣಿಗೆ ಅಲ್ಲ. ಇದರಿಂದಾಗಿ ಜನಾಂಗದ ಪಂದ್ಯಾಟ ತನ್ನ ದಾಖಲೆಯನ್ನು ಕಳೆದುಕೊಂಡಿದೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಡ ರಮೇಶ್ ಕುಟ್ಟಪ್ಪ ಹೇಳಿದರು. ಅವರು ಪ್ರಕೃತಿ ವಿಕೋಪದಿಂದ ತತ್ತರಿ ಸಿದ ಪ್ರದೇಶದ 14 ಕುಟುಂಬಗಳಿಗೆ ಕಕ್ಕಬ್ಬೆಯ ಹೈಲ್ಯಾಂಡ್ ಕ್ಲಬ್‍ನವರು ನಾಪೆÉÇೀಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಆಹ್ವಾನಿತ…
ಕಾಡಾನೆ ದಾಳಿ: ಫಸಲು ನಾಶ
April 23, 2019ವಿರಾಜಪೇಟೆ: ಸಮೀಪದ ಐಮಂಗಲ ಗ್ರಾಮದ ಕುಂಡ್ರಂಡ ಪೊನ್ನಪ್ಪ [ಕಸ್ತೂರಿ] ಅವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ಏ.22 ರಂದು ರಾತ್ರಿ ಕಾಡಾನೆಗಳು ದಾಳಿ ನಡೆಸಿ ಕಾಫಿ ಮತ್ತು ಬಾಳೆ ಫಸಲು ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು. ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವಂತೆ ಪೊನ್ನಪ್ಪ ಒತ್ತಾಯಿಸಿದ್ದಾರೆ. ಮನೆಯ ಪಕ್ಕದಲ್ಲಿಯೇ ಬಂದ ಕಾಡಾನೆ ಫಸಲು ಬಿಟ್ಟಿದ್ದ ಬಾಳೆ ಹಾಗೂ ಕಾಫಿ ಬೆಳೆಯನ್ನು ನಾಶ ಮಾಡಿರುವುದರಿಂದ ಇಲಾಖೆ ಪರಿಹಾರ ಒದಗಿಸಬೇಕು. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಹಾಗೂ ಶಾಲಾ…
ಮಳೆಗಾಲಕ್ಕೂ ಮುನ್ನ ಪ್ರವಾಹ ನಿರಾಶ್ರಿತರ ಮನೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ
April 23, 2019ಮಡಿಕೇರಿ: ಕಳೆದ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಂದರ್ಭ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಿಗೆ ಕರ್ನಾಟಕ ರಾಜೀವ್ ಗಾಂಧಿ ಪುನರ್ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಈ ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆಯಾದರೂ ಎಲ್ಲಾ ಮನೆಗಳ ನಿರ್ಮಾಣ ಕಾಮಗಾರಿ ಮಳೆಗಾಲ ಪ್ರಾರಂಭವಾಗುವ ಮನ್ನ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೊದಲ ಹಂತವಾಗಿ 400ಕ್ಕೂ ಹೆಚ್ಚು ಮನೆಗಳ ನಿರ್ಮಾಣ ವಾಗಲಿದೆ ಎಂದು ತಿಳಿದು ಬಂದಿದೆ. ಆದರೆ, ಜಿಲ್ಲೆಯಲ್ಲಿ ಈಗಾಗಲೇ…
ಗೋಣಿಕೊಪ್ಪ ಬಳಿ ಕಾಡಾನೆ ಹಿಂಡು ದಾಳಿ5 ಎಕರೆ ಬಾಳೆ ಫಸಲು ನಾಶ
April 23, 2019ಗೋಣಿಕೊಪ್ಪಲು: ಕುಮಟೂರು ಗ್ರಾಮದಲ್ಲಿ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟಿ ರುವ ಕಾಡಾನೆ ಹಿಂಡು ಸುಮಾರು 5 ಎಕರೆಯಷ್ಟು ತೋಟದ ಬಾಳೆ ಬೆಳೆ ನಾಶ ಮಾಡಿವೆ. ಇದರಿಂದ ಗಾಬರಿಗೊಂಡಿ ರುವ ಗ್ರಾಮದ ಕೃಷಿಕರು ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಭಾನುವಾರ ರಾತ್ರಿ 16 ಕಾಡಾನೆಗಳಿದ್ದ ಹಿಂಡು ಕುಮಟೂರು ಗ್ರಾಮದ ಕೋಟೃಂ ಗಡ ಮಂದಣ್ಣ, ಹರೀಶ್ ಹಾಗೂ ನಂಜಪ್ಪ ಎಂಬುವವರಿಗೆ ಸೇರಿದ 20 ಎಕರೆ ತೋಟದಲ್ಲಿ 5 ಎಕರೆ ಬೆಳೆಯನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ಅಂದಾಜು 25 ಲಕ್ಷ ವೆಚ್ಚದಲ್ಲಿ…
ಮೇ1 ರಿಂದ ಕಂಜಿತಂಡ ಕಪ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
April 23, 2019ಮಡಿಕೇರಿ: ಇದೇ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ‘ಕಂಜಿತಂಡ ಶಟಲ್ ಬ್ಯಾಡ್ಮಿಂಟನ್ ಕಪ್-2019’ ಡಬಲ್ಸ್ ಪಂದ್ಯಾವಳಿಯು ಹೊದಕೇರಿಯ ವಿ. ಬಾಡಗದಲ್ಲಿ ಐನ್ ಮನೆಯನ್ನು ಹೊಂದಿ ರುವ ಕಂಜಿತಂಡ ಕುಟುಂಬದ ವತಿಯಿಂದ ಮೇ1 ರಿಂದ 5ರವರೆಗೆ ಬಿಟ್ಟಂಗಾಲದ ಹೆಲ್ತ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಜಿತಂಡ ಕುಟುಂಬದ ಅಧ್ಯಕ್ಷÀ ಕಂಜಿ ತಂಡ ಅಯ್ಯಪ್ಪ, ಪ್ರತಿಭಾವಂತ ಶಟಲ್ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿ ರುವ ಈ ಪಂದ್ಯಾವಳಿಯಲ್ಲಿ ಒಂದು ಕೊಡವ ಕುಟುಂಬದಿಂದ ಒಂದು ತಂಡ ಭಾಗವಹಿ…
ಸೋಮವಾರಪೇಟೆಯಲ್ಲಿ ಮೂರು ದಿನದಿಂದ ನೀರು ಸರಬರಾಜಿಲ್ಲಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಎಫೆಕ್ಟ್
April 23, 2019ಸೋಮವಾರಪೇಟೆ: ಏ.18 ರಂದು ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರಿಳಿದ ಪರಿಣಾಮ ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಾರಂಗಿ ಡ್ಯಾಂ ನಿಂದ ಪಟ್ಟಣಕ್ಕೆ ನೀರು ಸರಬರಾಜಾಗುವ ಮಾರ್ಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 30 ಕಂಬಗಳು ನೆಲಕ್ಕುರಿಳಿದ್ದು ಸೆಸ್ಕ್ ಸಿಬ್ಬಂದಿ ಗಳು ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿ ದ್ದಾರೆ. ಇನ್ನೆರಡು ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು…
ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ
April 23, 2019ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ 9 ರಿಂದ 16 ವರ್ಷದ ಮಕ್ಕಳಿಗೆ ಮೇ 6 ರವರೆಗೆ ಉಚಿತವಾಗಿ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ನಗರದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,…
ಕೊಡಗು ಜಿಲ್ಲೆಯಲ್ಲಿ ಶೇ.74.08 ಮತದಾನ: ಮಡಿಕೇರಿ ವಿಧಾನಸಭಾ ಕ್ಷೇತ್ರ ಶೇ.76.12, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶೇ.72.03
April 19, 2019ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಲೋಕಸಭಾ ಚುನಾವಣೆಗೆ ಮತ ದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾ ಗಿದೆ. ಜಿಲ್ಲೆಯಲ್ಲಿ ಶೇ.74.08 ರಷ್ಟು ಮತ ದಾನವಾಗಿದ್ದು, ಕಳೆದ ಬಾರಿಗಿಂತ ಶೇ.7.55 ರಷ್ಟು ಮತದಾನ ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಕಳೆದ 2014 ಲೋಕ ಸಭಾ ಚುನಾವಣೆಯಲ್ಲಿ ಶೇ.66.53ರಷ್ಟು ಮತದಾನವಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಒಟ್ಟು 269 ಹಾಗೂ ವಿರಾಜಪೇಟೆಯಲ್ಲಿ 274 ಬೂತ್ ಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಯಿತಾದರೂ, ಕೆಲ ಮತಗಟ್ಟೆ ಯಲ್ಲಿ…
ಮತದಾರರಿಗೆ ಕಾಡಾನೆ ಭಯ: ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ
April 19, 2019ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಇರುವಿಕೆ ಬಗ್ಗೆ ಮತದಾರರು ಭಯಭೀತರಾಗಿದ್ದರು. ಇದರಿಂದ ಅರಣ್ಯ ಇಲಾಖೆ ವತಿಯಿಂದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ಆರ್‍ಆರ್‍ಟಿ) ತಂಡವನ್ನು ಮತ ಕೇಂದ್ರಗಳಲ್ಲಿ ನಿಯೋಜನೆ ಮಾಡಲಾಗಿತ್ತು. ಮತದಾನಕ್ಕೆ ಯಾವುದೇ ರೀತಿಯಲ್ಲಿ ಆಡಚಣೆಯಾಗದಂತೆ ಸಿಬ್ಬಂದಿಗಳು ನಿಗಾವಹಿಸಿ ಕಾರ್ಮಿಕರಿಗೆ ರಕ್ಷಣೆ ನೀಡಿದರು. ಕರಡಿಗೊಡು ಗ್ರಾಮದ ಮತ ಕೇಂದ್ರ ವ್ಯಾಪ್ತೀಯ ಕಾಫಿ ತೋಟಗಳಲ್ಲಿ 3 ಕಾಡಾನೆಗಳು ಪ್ರತ್ಯಕ್ಷಗೊಂಡ ಹಿನ್ನಲೆ ಉಪವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದ ತಂಡ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಮತದಾನಕ್ಕೆ ಬರುವ…
ದೇವರಕಾಡು ಹಾಡಿ ನಿವಾಸಿಗಳ ಮತದಾನ ಬಹಿಷ್ಕಾರ
April 19, 2019ಗೋಣಿಕೊಪ್ಪಲು: ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಅರೋಪಿಸಿ ದೇವರ ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರ ಕಾಡು ಹಾಡಿ ನಿವಾಸಿಗಳು ಮತ ಬಹಿಷ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಾಡಿಯ ಮೈದಾನದಲ್ಲಿ ಕ್ರಿಕೆಟ್ ಆಟ ವಾಡುವ ಮೂಲಕ ಪುರುಷರು ದಿನ ಕಳೆ ದರು. ಹಾಡಿಯಲ್ಲಿ ವಾಸವಿರುವ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳ ಮತದಾ ರರು ಮತಗಟ್ಟೆಯತ್ತ ತೆರಳಲಿಲ್ಲ. ಇದನ್ನು ಅರಿತ ಒಂದು ಪಕ್ಷದ ಪ್ರಮುಖರು ಮತ ಹಾಕುವಂತೆ ಓಲೈಸಲು ಮುಂದಾದರೂ ಸ್ಪಂದಿಸಲಿಲ್ಲ. ಪಕ್ಷದ…