ಮೇ1 ರಿಂದ ಕಂಜಿತಂಡ ಕಪ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ಕೊಡಗು

ಮೇ1 ರಿಂದ ಕಂಜಿತಂಡ ಕಪ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

April 23, 2019

ಮಡಿಕೇರಿ: ಇದೇ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ‘ಕಂಜಿತಂಡ ಶಟಲ್ ಬ್ಯಾಡ್ಮಿಂಟನ್ ಕಪ್-2019’ ಡಬಲ್ಸ್ ಪಂದ್ಯಾವಳಿಯು ಹೊದಕೇರಿಯ ವಿ. ಬಾಡಗದಲ್ಲಿ ಐನ್ ಮನೆಯನ್ನು ಹೊಂದಿ ರುವ ಕಂಜಿತಂಡ ಕುಟುಂಬದ ವತಿಯಿಂದ ಮೇ1 ರಿಂದ 5ರವರೆಗೆ ಬಿಟ್ಟಂಗಾಲದ ಹೆಲ್ತ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಜಿತಂಡ ಕುಟುಂಬದ ಅಧ್ಯಕ್ಷÀ ಕಂಜಿ ತಂಡ ಅಯ್ಯಪ್ಪ, ಪ್ರತಿಭಾವಂತ ಶಟಲ್ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿ ರುವ ಈ ಪಂದ್ಯಾವಳಿಯಲ್ಲಿ ಒಂದು ಕೊಡವ ಕುಟುಂಬದಿಂದ ಒಂದು ತಂಡ ಭಾಗವಹಿ ಸಲು ಮಾತ್ರ ಅವಕಾಶವನ್ನು ನೀಡಲಾಗಿದೆ. ತಂಡದಲ್ಲಿ ವಯೋಮಿತಿಯ ಭೇದವಿಲ್ಲದೆ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ ಎಂದರು.

ಪಂದ್ಯಾವಳಿಯಲ್ಲಿ 80ರಿಂದ 100 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ವಿಜೇತ ತಂಡವನ್ನು ಒಳಗೊಂಡಂತೆ ಮೊದಲ ಮೂರು ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪ್ರತಿ ತಂಡಕ್ಕೆ 800ರೂ. ಪ್ರವೇಶ ಶುಲ್ಕವÀನ್ನು ನಿಗದಿಪಡಿಸಲಾಗಿದೆ. ಹೆಸರು ನೋಂದಾ ಯಿಸಿಕೊಳ್ಳಲು ಏ.27 ಕೊನೆಯ ದಿನಾಂಕ ವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಂದ್ಯಾ ವಳಿ 9535536795, 9008433094, 9845859550, 9845337842, 9740663111, 9686963365ನ್ನು ಸಂಪರ್ಕಿಸಬಹುದಾಗಿದೆಯೆಂದು ಕಂಜಿತಂಡ ಅಯ್ಯಪ್ಪ ತಿಳಿಸಿದರು.

ಜಿಲ್ಲೆಯ ಹಲವು ಕ್ರೀಡಾ ಪಟುಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಗೌರವ ಮತ್ತು ಹೆಮ್ಮೆಯ ಕೆಲಸವನ್ನು ಮಾಡಿರುವುದು ಶ್ಲಾಘನೀಯ. ಆದರೆ, ಅನೇಕ ಕ್ರೀಡಾ ಪಟುಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗದೆ ವಂಚಿತರಾಗಿ ದ್ದಾರೆ. ಈ ನಿಟ್ಟಿನಲ್ಲಿ ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಂಜಿತಂಡ ಕುಟುಂಬದ ವತಿಯಿಂದ ಪ್ರಪ್ರಥಮವಾಗಿ ಶÀಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಂಜಿತಂಡ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷರಾದ ಕಂಜಿತಂಡ ಕೆ. ಪ್ರಕಾಶ್ ಮಂದಣ್ಣ, ಸದಸ್ಯರಾದ ಚೇಂದ್ರಿಮಾಡ ಮಧು ಗಣಪತಿ, ಕಂಜಿತಂಡ ಚರಣ್ ಉಪಸ್ಥಿತರಿದ್ದರು.

Translate »