ಸೋಮವಾರಪೇಟೆ: ಬೀಟೆ ಮರ ಕಳವು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತಾಲೂಕಿನ ಐಗೂರು ಗ್ರಾಮದ ವಸಂತ್ ಕುಮಾರ್ ಎಂಬವರ ತೋಟದಲ್ಲಿದ್ದ ಬೀಟೆ ಮರವನ್ನು ಫೆ.19ರಂದು ಕಳವು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀ ಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಆಗ ಆರೋಪಿಗಳಾದ ಹೊಸಬೀಡು ಹೆಚ್.ಎಂ.ಶಶಿಕುಮಾರ್ ಮತ್ತು ಐಗೂರು-ಕಾಜೂರು ಗ್ರಾಮದ ಚೇತನ್(ಚೇತು) ಪರಾರಿಯಾಗಿದ್ದರು. ಶನಿವಾರ ಆರೋಪಿಗಳು ಮನೆಯಲ್ಲಿರುವ ಬಗ್ಗೆ ಖಚಿತ…
ಶೌರ್ಯಚಕ್ರ ಪಡೆದ ಗೋಣಿಕೊಪ್ಪಲಿನ ವೀರಯೋಧ ಮಹೇಶ್
March 17, 2019ಕೊಡಗಿನ ಹೆಮ್ಮೆಯ ಪುತ್ರನ ಸಾಧನೆಗೆ ಜಿಲ್ಲೆಯ ಜನರಲ್ಲಿ ಹರ್ಷ ಮಡಿಕೇರಿ: ಸೈನಿ ಕರ ತವರು ಎನಿಸಿಕೊಂಡಿರುವ ಕೊಡಗು ಮತ್ತೊಂದು ಹೆಮ್ಮೆಯ ಗರಿ ಮುಡಿಗೇರಿಸಿ ಕೊಂಡಿದೆ. ಜಿಲ್ಲೆಯ ವೀರಯೋಧರೊ ಬ್ಬರು ಕಾಶ್ಮೀರ ಕಣಿವೆಯಲ್ಲಿ ಇಬ್ಬರು ಭಯೋ ತ್ಪಾದಕರನ್ನು ಯಮಪುರಿಗಟ್ಟಿದ್ದು, ಅದಕ್ಕಾಗಿ ಶೌರ್ಯಚಕ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಗೋಣಿಕೊ ಪ್ಪಲು ನಿವಾಸಿ, ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿ ರುವ ಹೆಚ್.ಎನ್.ಮಹೇಶ್ ಶೌರ್ಯಚಕ್ರ ಪಡೆದ ವೀರಯೋಧ. ರಾಷ್ಟ್ರಪತಿ ಭವನ ದಲ್ಲಿ ಗುರುವಾರ ನಡೆದ ಪ್ರಶಸ್ತಿ ಪ್ರಧಾನ…
ಬ್ರಹ್ಮಕಲಶೋತ್ಸವ ಪ್ರತ್ಯೇಕ ಸಮಿತಿ ರದ್ದು
March 17, 2019ಮಡಿಕೇರಿ: ಶ್ರೀ ಭಾಗಮಂಡಲ ತಲಕಾವೇರಿ ದೇಗುಲದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಅಷ್ಠಬಂಧ ಬ್ರಹ್ಮಕಲಶೋತ್ಸವವನ್ನು ಆಯೋಜಿಸಲು ಪ್ರತ್ಯೇಕವಾಗಿ ರಚನೆಗೊಂಡಿದ್ದ 19 ಮಂದಿಯ ಸಮಿತಿಯ ಅವಶ್ಯಕತೆ ಇನ್ನು ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಹೇಳಿದೆ. ಈ ಸಂಬಂಧ ಎಂ.ಬಿ.ದೇವಯ್ಯ ಮತ್ತಿತರೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಡಿಸಿ ಕೋರ್ಟ್ ವಜಾಗೊಳಿಸಿದೆ. 2017ರಲ್ಲಿ 19 ಮಂದಿಯ ಸಮಿತಿಯನ್ನು ರಚಿಸಿ ಬ್ರಹ್ಮಕಲ ಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಮತ್ತು ಸಮಿತಿಗೆ ಮಾನ್ಯತೆ ನೀಡಬೇಕೆಂದು ಎಂ.ಬಿ.ದೇವಯ್ಯ, ಎಂ.ಎ.ನಾಣಯ್ಯ, ಎಂ.ಬಿ.ಕುಮಾರ್, ಸಿ.ಜಿ.ಸತೀಶ್, ಕೆ.ರಮೇಶ್ ಮುದ್ದಯ್ಯ, ಬಿ.ಎ.ರಮೇಶ್ ಚಂಗಪ್ಪ…
ಲೋಕಸಭಾ ಚುನಾವಣೆ: ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಭೆ
March 16, 2019ಮಡಿಕೇರಿ: ಲೋಕಸಭಾ ಚುನಾ ವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರೊಂದಿಗೆ ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸ ಬೇಕು. ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬ ರಿಗೂ ಅನ್ವಯಿಸಲಿದ್ದು, ಅದರಂತೆ ಬ್ಯಾಂಕುಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಒಂದು ಬ್ಯಾಂಕಿನಿಂದ ಮತ್ತೊಂದು…
ಪ್ರಜಾಪ್ರಭುತ್ವ ಬಲಪಡಿಸಲು ಮತದಾನ ಮಾಡಿ: ಸಿಇಓ
March 16, 2019ಮಡಿಕೇರಿ: ಗೋಣಿಕೊಪ್ಪದ ಕಾವೇರಿ ಕಾಲೇಜು ಎನ್‍ಸಿಸಿ ಘಟಕ ಮತ್ತು ಕೊಡಗು ದಂತ ಮಹಾವಿದ್ಯಾಲಯ ಎನ್‍ಎಸ್‍ಎಸ್ ಘಟಕ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಕೋಟೆ ಆವರಣದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಅಭಿಯಾನ ನಡೆಯಿತು. ಜಾಗೃತಿ ಅಭಿಯಾನಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಇಓ ಕೆ.ಲಕ್ಷ್ಮಿಪ್ರಿಯಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು. ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದಿರುವವರು, ಮತದಾರರ ಪಟ್ಟಿಗೆ ಹೆಸರನ್ನು ನೊಂದಾಯಿಸಲು…
ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ರಮ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅಮಾನತು: ಎಚ್ಚರಿಕೆ
March 16, 2019ಮಡಿಕೇರಿ: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಸಶಕ್ತವಾಗಿ ಕಟ್ಟಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿರುವ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದಲೇ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಕೀಳು ಮಟ್ಟದ ರಾಜಕೀಯ ಮಾಡುವವನು ನಾನಲ್ಲ, ಮೌಲ್ಯ ಯುತವಾದ ರಾಜಕೀಯ ಮಾಡುವ ವ್ಯಕ್ತಿ ತಾನೆಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು….
ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಆದಿವಾಸಿಗಳ ಅತಂತ್ರ ಬದುಕು ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ
March 16, 2019ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಮಾಡು ಹಾಡಿಯಲ್ಲಿ ಕಳೆದ 20 ವರ್ಷಗಳಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಕಾಡುತೋಡಿನ ನೀರನ್ನೇ ಅವಲಂಬಿತರಾಗಿ ಅತಂತ್ರ ಬದುಕು ಸಾಗಿಸುತ್ತಿರುವ ಆದಿವಾಸಿಗಳ ಗೋಳು ಕೇಳುವವರಾರು ಎಂಬಂತಾಗಿದೆ. ಹಾಡಿಯಲ್ಲಿ ಸುಮಾರು 20 ಮನೆಗಳಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ನೂರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಸಮೀಪದ ಪೈಸಾರಿ ಜಾಗದಲ್ಲಿ ಪ್ಲಾಸ್ಟಿಕ್ ಟೆಂಟುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 20 ವರ್ಷಗಳ ಹಿಂದೆ ನಿರ್ಮಾಣವಾಗಿರುವ…
ಮತದಾನದ ಮಹತ್ವ ಕುರಿತ ಜಾಗೃತಿ ಜಾಥಾಗೆ ಚಾಲನೆ
March 15, 2019ಮಡಿಕೇರಿ: ಮತದಾನದ ಮಹತ್ವ ಕುರಿತ ಜಾಗೃತಿ ಜಾಥಾಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಅಧ್ಯಕ್ಷರಾದ ಕೆ.ಲಕ್ಷ್ಮಿ ಪ್ರಿಯಾ ಗುರುವಾರ ಚಾಲನೆ ನೀಡಿದರು. ಮತದಾನ ನಮ್ಮಿಂದ, ಮತದಾನ ಹೆಮ್ಮೆಯಿಂದ, ಮತ ಹಕ್ಕು ಚಲಾಯಿಸುವುದು ಕರ್ತವ್ಯವಾಗಿದೆ. ತಪ್ಪದೇ ಮತ ಚಲಾಯಿಸಿ ಎಂದು ಸ್ವೀಪ್ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ಕರೆ ನೀಡಿದರು. ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಚುನಾ ವಣಾ ಗುರುತಿನ ಚೀಟಿ ಪಡೆದು ಕಡ್ಡಾ ಯವಾಗಿ ಮತ ಚಲಾಯಿಸುವಂತಾಗ ಬೇಕು. ಜೊತೆಗೆ…
ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಆಗ್ರಹ
March 15, 2019ಸೋಮವಾರಪೇಟೆ: ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಬದಲಾವಣೆಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ಪ್ರಮುಖರು ಗುರು ವಾರ ಮಾಜಿ ಸಚಿವ ಜೀವಿಜಯ ಅವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇ ಗೌಡ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆ ಮುಂದಿಟ್ಟು ಸೂಕ್ತ ಪರಿಹಾರ ಸಿಗದಿದ್ದರೆ, ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯ ದರ್ಶಿ ಎಸ್.ಎಂ.ಡಿಸಿಲ್ವಾ ತಿಳಿಸಿದ್ದಾರೆ. ಕೆ.ಎಂ.ಬಿ.ಗಣೇಶ್ ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿರುವು ದನ್ನು…
ಮದ್ಯ ಸಂಗ್ರಹ: ಆರೋಪಿ ಬಂಧನ
March 15, 2019ಸೋಮವಾರಪೇಟೆ: ತಾಲೂಕಿನ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿ ಸಿದ್ದನ್ನು ಇಲ್ಲಿನ ಅಬಕಾರಿ ನಿರೀ ಕ್ಷಕರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ನಿರೀಕ್ಷಕ ಮತ್ತು ಸಿಬ್ಬಂದಿಗಳು ಖಚಿತ ವರ್ತ ಮಾನದ ಮೇರೆಗೆ ಶನಿವಾರ ಸಂತೆಯ ಕೂರ್ಗ್ ರೆಸ್ಟೋ ರೆಂಟ್‍ನಲ್ಲಿ ಎಂ.ಬಿ. ಭಾಸ್ಕರ ಎಂಬುವರು, 6.9 ಲೀಟರ್ ಮದ್ಯ ಮತ್ತು 6.5 ಲೀಟರ್ ಬಿಯರನ್ನು ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಧುಸೂದನ, ಉಪನಿರೀಕ್ಷಕರಾದ ಸಿ.ಎ. ಮಹದೇವ ಮತ್ತು ವಿರೂಪಾಕ್ಷ ಪಾಲ್ಗೊಂಡಿದ್ದರು.