ಬೀಟೆ ಮರ ಕಳವು ಯತ್ನ: ಇಬ್ಬರ ಸೆರೆ
ಕೊಡಗು

ಬೀಟೆ ಮರ ಕಳವು ಯತ್ನ: ಇಬ್ಬರ ಸೆರೆ

March 17, 2019

ಸೋಮವಾರಪೇಟೆ: ಬೀಟೆ ಮರ ಕಳವು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ಐಗೂರು ಗ್ರಾಮದ ವಸಂತ್ ಕುಮಾರ್ ಎಂಬವರ ತೋಟದಲ್ಲಿದ್ದ ಬೀಟೆ ಮರವನ್ನು ಫೆ.19ರಂದು ಕಳವು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀ ಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಆಗ ಆರೋಪಿಗಳಾದ ಹೊಸಬೀಡು ಹೆಚ್.ಎಂ.ಶಶಿಕುಮಾರ್ ಮತ್ತು ಐಗೂರು-ಕಾಜೂರು ಗ್ರಾಮದ ಚೇತನ್(ಚೇತು) ಪರಾರಿಯಾಗಿದ್ದರು. ಶನಿವಾರ ಆರೋಪಿಗಳು ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಆರ್‍ಎಫ್‍ಓ ಲಕ್ಷ್ಮೀಕಾಂತ್, ಅರಣ್ಯ ರಕ್ಷಕ ಯತೀಶ್ ಕುಮಾರ್, ಅರಣ್ಯ ವೀಕ್ಷಕರಾದ ಪ್ರಸಾದ್, ವಿಜಯ್, ಚಾಲಕ ಚಂದ್ರು ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

Translate »