ಶೌರ್ಯಚಕ್ರ ಪಡೆದ ಗೋಣಿಕೊಪ್ಪಲಿನ ವೀರಯೋಧ ಮಹೇಶ್
ಕೊಡಗು

ಶೌರ್ಯಚಕ್ರ ಪಡೆದ ಗೋಣಿಕೊಪ್ಪಲಿನ ವೀರಯೋಧ ಮಹೇಶ್

March 17, 2019

ಕೊಡಗಿನ ಹೆಮ್ಮೆಯ ಪುತ್ರನ ಸಾಧನೆಗೆ ಜಿಲ್ಲೆಯ ಜನರಲ್ಲಿ ಹರ್ಷ
ಮಡಿಕೇರಿ: ಸೈನಿ ಕರ ತವರು ಎನಿಸಿಕೊಂಡಿರುವ ಕೊಡಗು ಮತ್ತೊಂದು ಹೆಮ್ಮೆಯ ಗರಿ ಮುಡಿಗೇರಿಸಿ ಕೊಂಡಿದೆ. ಜಿಲ್ಲೆಯ ವೀರಯೋಧರೊ ಬ್ಬರು ಕಾಶ್ಮೀರ ಕಣಿವೆಯಲ್ಲಿ ಇಬ್ಬರು ಭಯೋ ತ್ಪಾದಕರನ್ನು ಯಮಪುರಿಗಟ್ಟಿದ್ದು, ಅದಕ್ಕಾಗಿ ಶೌರ್ಯಚಕ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿರಾಜಪೇಟೆ ತಾಲೂಕಿನ ಗೋಣಿಕೊ ಪ್ಪಲು ನಿವಾಸಿ, ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿ ರುವ ಹೆಚ್.ಎನ್.ಮಹೇಶ್ ಶೌರ್ಯಚಕ್ರ ಪಡೆದ ವೀರಯೋಧ. ರಾಷ್ಟ್ರಪತಿ ಭವನ ದಲ್ಲಿ ಗುರುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯೋಧ ಹೆಚ್.ಎನ್. ಮಹೇಶ್ ಅವರಿಗೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು.

ಗೋಣಿಕೊಪ್ಪಲಿನ ಗುತ್ತಿಗೆದಾರ ನಾಗ ರಾಜ್- ಲಕ್ಷ್ಮಿ ದಂಪತಿ ಪುತ್ರನಾದ ಹೆಚ್. ಎನ್.ಮಹೇಶ್, 7 ವರ್ಷಗಳ ಹಿಂದೆ ಆರ್ಮಿ ಇಂಜಿನಿಯರಿಂಗ್ ಕಾಪ್ರ್ಸ್‍ಗೆ ಸೇರ್ಪಡೆ ಯಾಗಿ ಬಳಿಕ ಜಮ್ಮು-ಕಾಶ್ಮೀರದ 44ನೇ ರಾಷ್ಟ್ರೀಯ ರೈಫಲ್ಸ್‍ಗೆ ನಿಯೋಜನೆಗೊಂಡರು.

ಅಂದು ನಡೆದಿದ್ದೇನು?: 2018ರ ಆಗಸ್ಟ್. ಸ್ವಾತಂತ್ರ್ಯ ದಿನಾಚರಣೆಗೆ ಕೆಲ ದಿನವಷ್ಟೇ ಬಾಕಿಯಿರುವಾಗ ಭಯೋತ್ಪಾದಕರು ಗಡಿ ಯಾಚೆಯಿಂದ ದೇಶದೊಳಕ್ಕೆ ನುಸುಳಿ ವಿದ್ವಂಸಕ ಕೃತ್ಯ ಎಸಗಲು ಸಂಚು ನಡೆ ಸುತ್ತಿರುವ ಬಗ್ಗೆ ಸೇನೆಗೆ ಕೇಂದ್ರ ಗುಪ್ತಚರ ಪಡೆ ಮಾಹಿತಿ ನೀಡಿತ್ತು. ಉಗ್ರರ ದುಷ್ಕø ತ್ಯವನ್ನು ಮೊದಲೇ ಅಂದಾಜಿಸಿದ್ದ ಸೇನೆ, ಗಡಿಯಲ್ಲಿ ಅಲರ್ಟ್ ಆಗಿತ್ತು. ಆ.3ರ ರಾತ್ರಿ 9ರಲ್ಲಿ ಕೆಲ ಭಯೋತ್ಪಾದಕರು ಜಮ್ಮು-ಕಾಶ್ಮೀ ರದ ಶೊಫಿಯಾನ್ ಜಿಲ್ಲೆಯ ಆಯಕಟ್ಟಿನ ಸ್ಥಳದಲ್ಲಿ ಆಶ್ರಯ ಪಡೆದಿರುವ ಮಾಹಿತಿ ಸಿಕ್ಕಿತು. ಭಾರತೀಯ ಸೇನೆ ಶೋಧ ಕಾರ್ಯಾ ಚರಣೆ ಆರಂಭಿಸಿತು. 44ನೇ ರಾಷ್ಟ್ರೀಯ ರೈಫ ಲ್ಸ್‍ನಲ್ಲಿದ್ದ ಹೆಚ್.ಎನ್.ಮಹೇಶ್ ಮತ್ತು ಸಂಗಡಿಗರು ಉಗ್ರರ ದಮನಕ್ಕೆ ಕಾರ್ಯಾ ಚರಣೆ ಆರಂಭಿಸುತ್ತಿದ್ದಂತೆಯೇ, 5 ಮಂದಿಯ ಉಗ್ರವಾದಿಗಳ ಗುಂಪು ಗುಂಡಿನ ಮಳೆ ಗರೆಯಲಾರಂಭಿಸಿತು. ಇದಾವುದನ್ನೂ ಲೆಕ್ಕಿ ಸದೇ ಮುನ್ನುಗ್ಗಿದ ಮಹೇಶ್, ಅತಿ ಸಮೀಪ ತೆರಳಿ ಲಷ್ಕರ್-ಎ-ತೊಯ್ಬ ಉಗ್ರ ಸಂಘ ಟನೆಯ ಒಬ್ಬ ಉಗ್ರನನ್ನು ಹೊಡೆದು ರುಳಿಸಿದರು. ಮತ್ತೊಬ್ಬ ಭಯೋತ್ಪಾದ ಕನಿಗೂ ಗುಂಡಿಕ್ಕಿ ಗಂಭೀರವಾಗಿ ಗಾಯ ಗೊಳಿಸಿದರು. ಉಳಿದ ಉಗ್ರರು ಓಡಿ ಹೋಗಲೆತ್ನಿಸಿದಾಗ ಯೋಧರು ಸುತ್ತು ವರಿದು ಕಾರ್ಯಾಚರಣೆ ಮುಂದುವರಿಸಿ ದರು. ರಾತ್ರಿಯಿಡಿ ಗುಂಡಿನ ಕಾಳಗ ಮುಂದುವರಿಯಿತು. ಬೆಳಿಗ್ಗೆ ಯೋಧ ಮಹೇಶ್ ಮತ್ತೋರ್ವ ಭಯೋತ್ಪಾದಕ ನನ್ನು ಕೊಂದು ಹಾಕಿದರು. ಪ್ರಾಣದ ಹಂಗು ತೊರೆದು, ಇಬ್ಬರು ಉಗ್ರರನ್ನು ಕೊಂದು ಅಪ್ರತಿಮ ಸಾಹಸ ಮೆರೆದ ಮಹೇಶ್‍ಗೆ ಭಾರತೀಯ ಸೇನೆ ಶೌರ್ಯ ಚಕ್ರ ಪ್ರಶಸ್ತಿಗೆ ಶಿಫಾರಸು ಮಾಡಿತು.

ನಾಗರಾಜ್-ಲಕ್ಷ್ಮಿ ದಂಪತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಜರಿದ್ದು, ಮಗ ಪ್ರಶಸ್ತಿ ಸ್ವೀಕರಿಸಿದ ಕ್ಷಣ ಆನಂದಬಾಷ್ಪ ಹರಿಸಿ ದರು. ಕೊಡಗಿನ ಪುತ್ರನ ಸಾಧನೆ ಕಂಡು ಜಿಲ್ಲೆಯ ಜನತೆ ಹೆಮ್ಮೆ ಪಟ್ಟಿದೆ.

Translate »