ಮಡಿಕೇರಿ: ನಗರದ ಸ್ಟೋನ್‍ಹಿಲ್ ಬಳಿ ಮಾ.12ರ ರಾತ್ರಿ 8.30ರ ವೇಳೆ ಕಾರ್ಮಿಕ ಶರತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳಾದ ಸುಜಿತ್(23) ಹಾಗೂ ಕೆ.ಹರ್ಷ(22)ನನ್ನು ಮಡಿಕೇರಿ ನಗರ ಠಾಣೆ ಪೊಲೀಸರ ತಂಡ ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಬಳಿ ಶನಿವಾರ ಬಂಧಿಸಿದೆ. ಈ ಮೊದಲು ಇನ್ನಿಬ್ಬರು ಆರೋಪಿಗಳಾದ ಪುಟಾಣಿ ಮಡಿಕೇರಿಯ ಬಿ.ಆರ್. ಕೀರ್ತನ್(19), ದೇಚೂರು ನಿವಾಸಿ ಬಿ.ಎಸ್.ಪುನೀತ್(25)ನನ್ನು ಬಂಧಿಸಲಾಗಿತ್ತು.
ನಾಲ್ವರು ಆರೋಪಿಗಳು ಶರತ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ಅವರನ್ನು ಆಂಬುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಸ್ಥಳೀಯರು, ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ವಿ.ಕೆ.ಉಮೇಶ್ ಎಂಬವರು ನೀಡಿದ ದೂರಿನ ಮೇರೆಗೆ ನಗರದ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.