ಗುಡ್ಡಮಾಡು ಹಾಡಿಗೆ ಅಧಿಕಾರಿಗಳ ಭೇಟಿ: 2 ದಿನದಲ್ಲೇ ಕೊಳವೆ ಬಾವಿ-ಭರವಸೆ
ಕೊಡಗು

ಗುಡ್ಡಮಾಡು ಹಾಡಿಗೆ ಅಧಿಕಾರಿಗಳ ಭೇಟಿ: 2 ದಿನದಲ್ಲೇ ಕೊಳವೆ ಬಾವಿ-ಭರವಸೆ

March 17, 2019

ಸಿದ್ದಾಪುರ: ಕುಡಿಯಲು ಶುದ್ಧ ನೀರು ಅಲಭ್ಯವಾಗಿದೆ. ಯಾವುದೇ ಮೂಲ ಸೌಕರ್ಯಗಳೂ ಇಲ್ಲ. ಪರಿಣಾಮ ಗುಡ್ಡ ಮಾಡು ಆದಿವಾಸಿ ಹಾಡಿಯ ಜನರ ಬದುಕು ಕಷ್ಟಗಳ ಮಡುವಿನಲ್ಲಿ ಮುಳುಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾಡಳಿ ತದ ಅಧಿಕಾರಿಗಳ ತಂಡ ಶನಿವಾರ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 2 ದಿನಗಳಲ್ಲೇ ಕೊಳವೆ ಬಾವಿ ಕೊರೆಸಿ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮಿಕಾಂತ್ ಹಾಗೂ ಸಮಗ್ರ ಗಿರಿಜನ ಅಭಿ ವೃದ್ಧಿ ಅಧಿಕಾರಿ ಶಿವಕುಮಾರ್, ತಾಲ್ಲೂಕು ಅಧಿಕಾರಿ ಚಂದ್ರಶೇಖರ್ ಅವರನ್ನೊಳಗೊಂಡ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಹಾಡಿಗೆ ಶನಿವಾರ ಭೇಟಿ ನೀಡಿತು. ಹಾಡಿಯಲ್ಲಿ ಕುಡಿ ಯುವ ನೀರು ಪೂರೈಕೆಗೆ ಯಾವುದೇ ಸೌಲಭ್ಯ ಇಲ್ಲದಿರುವುದು ಮನವರಿಕೆಯಾಗುತ್ತಿದ್ದಂತೆಯೇ ಅಧಿಕಾರಿಗಳು, 2 ದಿನದಲ್ಲೇ ಹಾಡಿಯಲ್ಲಿ ಬೋರ್ ವೆಲ್ ಕೊರೆಸಿ ಕೊಡುವ ಭರವಸೆ ನೀಡಿದರು.

ಅಲ್ಲದೇ, ಗ್ರಾಮ ಪಂಚಾಯಿತಿಯ ಶೇ.25ರ ಪರಿಶಿಷ್ಟ ಜಾತಿ/ಪ.ಪಂಗಡದ ಅನುದಾನ ದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸು ವಂತೆ ಗ್ರಾಪಂ ಅಧಿಕಾರಿಗಳಿಗೆ ಆದೇಶಿಸಿ ದರು. ರಾಜೀವ್ ಗಾಂಧಿ ವಸತಿ ನಿಗಮ ಮೂಲಕ ಗ್ರಾಪಂಗೆ ಅರ್ಜಿ ಸಲ್ಲಿಸಿದರೆ ಮನೆಗಳನ್ನು ದುರಸ್ತಿಗೊಳಿಸಿಕೊಡ ಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ತಮ್ಮಯ್ಯ ಹಾಗೂ ಹಾಡಿಯ ನಿವಾಸಿಗಳಾದ ಚಿನ್ನ, ಸುರೇಶ್, ಪಾವರ್Àತಿ, ಗಂಗೆ, ಮುತ್ತಾ, ಗೀತಾ ಮತ್ತಿತರರು ಹಾಜರಿದ್ದರು.

Translate »