ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಆದಿವಾಸಿಗಳ ಅತಂತ್ರ ಬದುಕು ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಕೊಡಗು

ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಆದಿವಾಸಿಗಳ ಅತಂತ್ರ ಬದುಕು ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ

March 16, 2019

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಮಾಡು ಹಾಡಿಯಲ್ಲಿ ಕಳೆದ 20 ವರ್ಷಗಳಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಕಾಡುತೋಡಿನ ನೀರನ್ನೇ ಅವಲಂಬಿತರಾಗಿ ಅತಂತ್ರ ಬದುಕು ಸಾಗಿಸುತ್ತಿರುವ ಆದಿವಾಸಿಗಳ ಗೋಳು ಕೇಳುವವರಾರು ಎಂಬಂತಾಗಿದೆ.

ಹಾಡಿಯಲ್ಲಿ ಸುಮಾರು 20 ಮನೆಗಳಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ನೂರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಸಮೀಪದ ಪೈಸಾರಿ ಜಾಗದಲ್ಲಿ ಪ್ಲಾಸ್ಟಿಕ್ ಟೆಂಟುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

20 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮನೆಗಳು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಹಾಡಿಯ ಕೆಲವು ಮನೆಗಳಿಗೆ ಕಳಪೆ ಗುಣಮಟ್ಟದ ಪೈಪ್‍ಗಳನ್ನು ಹಾಕಿ ಉಪಯೊಗ ವಾಗದ ರೀತಿಯಲ್ಲಿ ಬಾಗಿಲು ಆಳವಡಿಸದೆ ಬೇಕಾ ಬಿಟ್ಟಿಯಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನೀರೆ ಇಲ್ಲದ ಮೇಲೆ ಶೌಚಾಲಯ ಬಳಕೆ ಹೇಗೆ ಸಾಧ್ಯ ಎಂದು ಆದಿವಾಸಿ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಬಂದಿಲ್ಲ. ವಿದ್ಯುತ್ ಸಂಪರ್ಕ ಇದ್ದರೂ ಕೇವಲ ಏಳು ಮನೆಗಳಲ್ಲಿ ಮಾತ್ರ ದೀಪ ಬೆಳಗುತ್ತಿದೆ. ಈ ಭಾಗದಲ್ಲಿ ಹಲವು ಮಂದಿ ಆದಿವಾಸಿಗಳು ನೆಲೆಯೂರಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. 70ಕ್ಕೂ ಹೆಚ್ಚು ಎಕರೆ ಪೈಸಾರಿ ಜಾಗವಿದ್ದರೂ ಬಹುತೇಕ ಜಾಗ ಕೆಲವು ಬೆಳೆಗಾರರ ಪಾಲಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಬಸ್ ಸಂಚಾರದ ರಸ್ತೆ ಹುಡುಕಬೇಕಾದರೆ ಹತ್ತು ಕಿಲೋಮೀಟರ್‍ವರೆಗೆ ನಡೆದು ಸಾಗಬೇ ಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತೀರ ಹದಗೆಟ್ಟಿರುವುದರಿಂದ ಖಾಸಗಿ ವಾಹನಗಳಿಗೆ ದುಬಾರಿ ಹಣ ನೀಡಬೇಕಾಗಿದೆ. ತುರ್ತು ಸಂದರ್ಭ ದಲ್ಲಂತೂ ದೇವರೇ ಕಾಪಾಡ ಬೇಕಾಗಿದೆ.

ಶಾಲೆಗೆ ದೂರ: ಹಾಡಿಯಲ್ಲಿ ಇಪ್ಪತ್ತು ಮಕ್ಕಳು ಪ್ರತಿದಿನ ಎಂಟು ಕಿಲೋಮೀಟರ್ ದೂರದ ಸರ್ಕಾರಿ ಶಾಲೆಗೆ ತೆರಳಬೇಕಾಗಿದೆ. 10ಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಬೇಕಾದರೆ ನಾಲ್ಕು ಕಿಲೋಮೀಟರ್ ನಡೆಯಬೇಕಾಗಿದೆ.

ಇನ್ನೂ ಕೆಲ ವಿದ್ಯಾರ್ಥಿಗಳು ದೂರದ ಶಾಲೆಗೆ ಹೋಗಿ ಕಲಿಯಲು ಸಾಧ್ಯವಾಗದೆ, ತಂದೆ ತಾಯಿ ಯೊಂದಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಮಳೆಗಾ ಲದ ಮಳೆ ನೀರನ್ನೇ ಉಪಯೋಗಿಸುವ ಹಾಡಿಯ ನಿವಾಸಿಗಳು ಬೇಸಿಗೆ ಸಂದರ್ಭ ಕುಡಿ ಯುವ ನೀರಿಗೂ ಪರಿತಪಿಸುತ್ತಿದ್ದಾರೆ.

ದೂರದ ಕಾಡಿನ ತೋಡು ನೀರನ್ನೇ ಅವ ಲಂಬಿತರಾಗಿರುವ ಅದಿವಾಸಿಗಳು ಬೇಸಿಗೆ ಸಂದರ್ಭ ತೋಡಿನಲ್ಲಿ ಗುಂಡಿ ತೋಡಿಸಿಗುವ ನೀರನ್ನು ಕುಡಿದು ಜೀವನ ನಡೆಸುತ್ತಿದ್ದಾರೆ. ಕುಡಿಯುವ ನೀರಿಗೆ ಬರ ಎದುರಾಗಿರುವ ಕಾರಣಕ್ಕಾಗಿ ಕೆಲವರು ಇದ್ದ ಮನೆಯನ್ನು ಬಿಟ್ಟು ಕಾಫಿ ತೋಟದ ಕೆಲಸಕ್ಕೆ ಹೋಗಿ ಲೈನ್ ಮನೆಗಳಲ್ಲಿ ಕಾಲ ದೂಡು ತ್ತಿದ್ದಾರೆ. ಮತ್ತೆ ಮಳೆಗಾಲ ಸಂದರ್ಭದಲ್ಲಿ ಹಾಡಿಯ ಲ್ಲಿರುವ ಮನೆಗಳಲ್ಲಿ ಜಲ ಉಕ್ಕಿ ಬರುತಿದ್ದು, ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಬೇಸಿಗೆ ಕಾಲದಲ್ಲಿ ಮತ್ತೆ ಮರಳಿ ಬಂದರು ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಕಂಗಾಲಾಗುತ್ತಿದ್ದಾರೆ. ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿಕ್ಕೆ ಮೂಲ ಸೌಕರ್ಯಕ್ಕಾಗಿ ಮನವಿ-ಪ್ರತಿಭಟನೆ ಮಾಡಿದರೂ ಯಾರೂ ತಿರುಗಿ ನೋಡುತ್ತಿಲ್ಲ. 20 ವರ್ಷಗಳ ಹಿಂದೆ ಮನೆ ಕಟ್ಟ ಲಾಗಿದ್ದರೂ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

Translate »